Sambhal: ಹೈಕೋರ್ಟ್ ಚಾಟಿ, ಜಿಲ್ಲಾಡಳಿತ ಖಡಕ್ ವಾರ್ನಿಂಗ್; ಕೊನೆಗೂ ಮಸೀದಿ ತೆರವು ಮಾಡಿದ ಮುಸ್ಲಿಮರು

ಸಂಭಾಲ್‌ನಲ್ಲಿರುವ ಕೊಳದ ಮೇಲೆ ನಿರ್ಮಿಸಲಾದ ಅಕ್ರಮ ಮಸೀದಿಯನ್ನು ಮುಸ್ಲಿಂ ಸಮುದಾಯ ಮತ್ತು ಮಸೀದಿ ಸಮಿತಿಯು ಬುಲ್ಡೋಜರ್‌ಗಳನ್ನು ಕರೆಸಿ ಕೆಡವಲು ಪ್ರಾರಂಭಿಸಿತು.
Muslims take bulldozer to 'illegal' mosque in Uttar Pradesh's Sambhal
ಸಂಭಾಲ್ ಮಸೀದಿ ತೆರವು ಮಾಡುತ್ತಿರುವ ಮುಸ್ಲಿಮರು
Updated on

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್​ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯನ್ನು ಮುಸ್ಲಿಮರೇ ನೆಲಸಮ ಮಾಡಿರುವ ಘಟನೆ ವರದಿಯಾಗಿದೆ.

ಸಂಭಾಲ್‌ನಲ್ಲಿರುವ ಕೊಳದ ಮೇಲೆ ನಿರ್ಮಿಸಲಾದ ಅಕ್ರಮ ಮಸೀದಿಯನ್ನು ಮುಸ್ಲಿಂ ಸಮುದಾಯ ಮತ್ತು ಮಸೀದಿ ಸಮಿತಿಯು ಬುಲ್ಡೋಜರ್‌ಗಳನ್ನು ಕರೆಸಿ ಕೆಡವಲು ಪ್ರಾರಂಭಿಸಿತು. ಆಡಳಿತ ಮಂಡಳಿ ನೀಡಿದ ನೋಟಿಸ್ ಮತ್ತು ಅಂತಿಮ ಸೂಚನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಮೂಲಗಳ ಪ್ರಕಾರ, ಮಸೀದಿಯ ಮೇಲಿನ ಭಾಗವನ್ನು ಈಗಾಗಲೇ ಉಳಿ ಮತ್ತು ಸುತ್ತಿಗೆಯಿಂದ ಕೆಡವಲಾಗುತ್ತಿತ್ತು, ಮತ್ತು ಈಗ ಉಳಿದ ಭಾಗವನ್ನು ಬುಲ್ಡೋಜರ್‌ನೊಂದಿಗೆ ತೆರವುಗೊಳಿಸಲಾಗುತ್ತಿದೆ.

ಹೈಕೋರ್ಟ್ ಚಾಟಿ

ಇನ್ನು ಈ ಮಸೀದಿಯ ತೆರವಿಗೆ ತಡೆ ನೀಡಬೇಕು ಎಂದು ಮಸೀದಿ ಆಡಳಿತ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಈ ಅರ್ಜಿ ವಜಾಗೊಳಿಸಿದ್ದ ಕೋರ್ಟ್ ತಡೆಗೆ ಆದೇಶ ನೀಡುವುದಿಲ್ಲ ಎಂದು ಹೇಳಿತ್ತು.

Muslims take bulldozer to 'illegal' mosque in Uttar Pradesh's Sambhal
ಪಿಒಕೆ ನಮ್ಮ ಮನೆ ಇದ್ದಂತೆ; ಕೋಣೆಗೆ ಅಪರಿಚಿತರು ನುಗ್ಗಿದ್ದಾರೆ, ನಾವು ಅದನ್ನು ಮರಳಿ ಪಡೆಯಬೇಕು: ಮೋಹನ್‌ ಭಾಗವತ್‌

4 ದಿನಗಳ ಅಂತಿಮ ಗಡುವು ನೀಡಿದ್ದ ಜಿಲ್ಲಾಡಳಿತ

ಇದರ ಬೆನ್ನಲ್ಲೇ ಸಂಭಾಲ್ ಜಿಲ್ಲಾಡಳಿತ ಮಸೀದಿಯನ್ನು ಕೆಡವಲು ಆಡಳಿತವು ಬುಲ್ಡೋಜರ್‌ನೊಂದಿಗೆ ಬಂದಿತ್ತು, ಆದರೆ ಸ್ಥಳೀಯ ಜನರ ಮನವಿಯ ಮೇರೆಗೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮಸೀದಿ ಸಮಿತಿಗೆ ಅಕ್ರಮ ನಿರ್ಮಾಣವನ್ನು ಸ್ವತಃ ತೆಗೆದುಹಾಕಲು ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದರು.

ಇದೀಗ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾ ಬುಜುರ್ಗ್ ಗ್ರಾಮದ ಮುಸ್ಲಿಮರು ಭಾನುವಾರ ತಾವೇ ಖುದ್ದು ಗೌಸುಲ್‌ಬರಾ ಮಸೀದಿಗೆ ಬುಲ್ಡೋಜರ್ ತೆಗೆದುಕೊಂಡು ಬಂದು ಮಸೀದಿ ತೆರವು ಮಾಡುತ್ತಿದ್ದಾರೆ. "ಅಕ್ರಮ" ರಚನೆಯನ್ನು ತೆಗೆದುಹಾಕಲು ಜಿಲ್ಲಾಡಳಿತ ನೀಡಿದ್ದ ನಾಲ್ಕು ದಿನಗಳ ಗಡುವು ಮುಗಿದ ನಂತರ ಈ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಆರಂಭದಲ್ಲಿ ಮಸೀದಿ ತೆರವಿಗೆ ಮುಸ್ಲಿಮರು ಸುತ್ತಿಗೆ ಬಳಸಿ ತೆರವು ಮಾಡುತ್ತಿದ್ದರು. ಆದರೆ ಜಿಲ್ಲಾಡಳಿತದ ಅಂತಿಮ ಗಡುವು ಮುಗಿಯುತ್ತಿದ್ದಂತೆಯೇ ಇದೀಗ ಬುಲ್ಡೋಜರ್ ಮೂಲಕ ಮಸೀದಿಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಸೀದಿ ಸಮಿತಿಯ ಸದಸ್ಯ ಮತ್ತು ರಾಯಾ ಬುಜುರ್ಗ್ ಗ್ರಾಮದ ನಿವಾಸಿ ಯಾಸಿನ್, "ಇಂದು ನಮಗೆ ನೀಡಲಾಗಿದ್ದ ನಾಲ್ಕು ದಿನಗಳು ಪೂರ್ಣಗೊಂಡಿವೆ. ನಾವು ಮಸೀದಿಯ ಧ್ವಂಸವನ್ನು ತ್ವರಿತಗೊಳಿಸುತ್ತಿದ್ದೇವೆ. ನಾವು ಜಿಲ್ಲಾಡಳಿತವು ನಮಗೆ ನೀಡಿದ ಸಮಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಮಸೀದಿಯನ್ನು ನಾವೇ ಕೆಡವುತ್ತಿದ್ದೇವೆ" ಎಂದು ಹೇಳಿದರು.

ಅಕ್ಟೋಬರ್ 2 ರಂದು, ಅದೇ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದುವೆ ಮಂಟಪವನ್ನು ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಕೆಡವಿ ಹಾಕಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com