
ಮೀರತ್: ಉತ್ತರ ಪ್ರದೇಶದ ಮೀರತ್ ನಲ್ಲಿ ಯುವಕನೊಬ್ಬ ನಡು ಬೀದಿಯಲ್ಲಿ ಬಾಲಕಿಯ ಕುತ್ತಿಗೆ ಹಿಡಿದು ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಜಿಲ್ಲೆಯ ಕಿಥೌರ್ ಪ್ರದೇಶದಲ್ಲಿ ಅಕ್ಟೋಬರ್ 3 ರಂದು ನಡೆದ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತದನಂತರ ಪೊಲೀಸರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದರ ಆಧಾರದ ಪೊಲೀಸರು ಪೊಲೀಸರು ಆರೋಪಿ ಜಾನು ಅಲಿಯಾಸ್ ಜಾನೆ ಆಲಂನನ್ನು ಬಂಧಿಸಿದ್ದಾರೆ. ಈತ ಜಗಳದ ನಂತರ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಗಾಜಿಯಾಬಾದ್‌ನಿಂದ ತನ್ನ ಅಜ್ಜಿಯ ಗ್ರಾಮಕ್ಕೆ ಭೇಟಿ ನೀಡಲು ಬಂದಿದ್ದ ಬಾಲಕಿಯ ವಿಡಿಯೋವನ್ನು ಆರೋಪಿ ರಹಸ್ಯವಾಗಿ ರೆಕಾರ್ಡ್ ಮಾಡಿ ಅದನ್ನು ಗ್ರಾಮದ ಇತರರಿಗೆ ಹಂಚಿದ್ದ ಎನ್ನಲಾಗಿದೆ. ಆತ ಎದುರಾದಾಗ ಫೋನ್ ಕೊಡುವಂತೆ ಆಕೆ ಒತ್ತಾಯಿಸಿದ್ದಾಳೆ. ಆಗ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಿ, ಕುತ್ತಿಗೆ ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ.
ಆಕೆಯ ಆಳು ಕೇಳಿ ಸ್ಥಳೀಯ ಜನರು ಸ್ಥಳಕ್ಕೆ ಧಾವಿಸಿದ್ದು, ನಂತರ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯಗಳು ದಾಖಲಾಗಿತ್ತು. ತದನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೊ, ಐಪಿಸಿಯ ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement