ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲ, ಬಾಲಕೋಟ್ ತಿರಮಿಸು..: ವಾಯುಪಡೆ ದಿನದಂದು IAF ಭೂರಿ ಭೋಜನ ಮೆನು; ಪಾಕಿಸ್ತಾನ ಫುಲ್ ರೋಸ್ಟ್!

ಊಟದ ಹೆಸರಿನಲ್ಲಿ ಬಾಲಕೋಟ್‌ನಿಂದ ಆಪರೇಷನ್ ಸಿಂಧೂರ ವರೆಗೂ ಭಾರತ ದಾಳಿ ಮಾಡಿದ ಸ್ಥಳಗಳ ಹೆಸರಿ ಜೊತೆಗೆ ಖಾದ್ಯಗಳ ಹೆಸರನ್ನಿಟ್ಟಿದ್ದು, ಈ ಮೆನುವಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
IAF Menu
ಐಎಎಫ್ ಮೆನು
Updated on

ನವದೆಹಲಿ: ಭಾರತೀಯ ವಾಯುಸೇನೆ 93ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಈ ನಡುವಲ್ಲೇ ಭೋಜನದ ಮೆನುವಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತ ವಾಯುದಾಳಿ ನಡೆಸಿದ ಪ್ರಮುಖ ಸ್ಥಳಗಳ ಹೆಸರನ್ನು ಖಾದ್ಯಗಳಿಗೆ ಇಡಲಾಗಿದ್ದು, ಈ ಪಾಕಿಸ್ತಾನ ಕುರಿತು ವ್ಯಂಗ್ಯ ಮಾಡಿದೆ.

ಊಟದ ಹೆಸರಿನಲ್ಲಿ ಬಾಲಕೋಟ್‌ನಿಂದ ಆಪರೇಷನ್ ಸಿಂಧೂರ ವರೆಗೂ ಭಾರತ ದಾಳಿ ಮಾಡಿದ ಸ್ಥಳಗಳ ಹೆಸರಿ ಜೊತೆಗೆ ಖಾದ್ಯಗಳ ಹೆಸರನ್ನಿಟ್ಟಿದ್ದು, ಈ ಮೆನುವಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಐಎಎಫ್'ಗೆ 93 ವರ್ಷ: ದೋಷರಹಿತ, ಪ್ರಭಾವಶಾಲಿ ಮತ್ತು ನಿಖರ’ ಎಂಬ ಶೀರ್ಷಿಕೆಯಲ್ಲಿ ಮೆನುವನ್ನು ಸಿದ್ಧಪಡಿಸಲಾಗಿದ್ದು, 2019 ರ ಬಾಲಕೋಟ್ ವೈಮಾನಿಕ ದಾಳಿ ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ ಸೇರಿದಂತೆ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಸಮಯದಲ್ಲಿ ಗುರಿಯಾಗಿಸಿಕೊಂಡ ಪ್ರಮುಖ ಸ್ಥಳಗಳ ಹೆಸರನ್ನು ಖಾದ್ಯಗಳಿಗೆ ಇಡಲಾಗಿದೆ.

ಮೆನು ಇಂತಿದೆ...

  • ಮೆನುವಿನಲ್ಲಿ ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ

  • ರಫೀಕಿ ರಾರಾ ಮಟನ್

  • ಭೋಲಾರಿ ಪನೀರ್ ಮೇಥಿ ಮಲೈ

  • ಸುಕ್ಕೂರ್ ಶಾಮ್ ಸವೇರಾ ಕೋಫ್ತಾ

  • ಸರ್ಗೋಧಾ ದಾಲ್ ಮಖಾನಿ

  • ಜಾಕೋಬಾಬಾದ್ ಮೇವಾ ಪುಲಾವ್

  • ಬಹವಾಲ್ಪುರ್ ನಾನ್

ಸಿಹಿತಿಂಡಿ ವಿಭಾಗದಲ್ಲಿ...

  • ಬಾಲಕೋಟ್ ತಿರಮಿಸು

  • ಮುಜಫರಾಬಾದ್ ಕುಲ್ಫಿ ಫಲೂಡಾ

  • ಮುರಿಡ್ಕೆ ಮೀಠಾ ಪಾನ್

ಸದ್ಯ ಎಕ್ಸ್ ಖಾತೆಯಲ್ಲಿ ಈ ಮೆನುವಿನ ಪೋಟೋ ವೈರಲ್ ಆಗಿದ್ದು, ಪಾಕಿಸ್ತಾನವನ್ನು ರೋಸ್ಟ್ ಮಾಡಲಾಗಿದೆ.

IAF Menu
ಸೆಪ್ಟೆಂಬರ್ 26ಕ್ಕೆ ಐಕಾನಿಕ್ MIG-21 ಗೆ IAF ಬೀಳ್ಕೊಡುಗೆ; ಹಾರಾಟ ನಡೆಸಿ ಗೌರವ ಸಲ್ಲಿಸಿದ ವಾಯುಪಡೆ ಮುಖ್ಯಸ್ಥ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com