
ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧವನ್ನು ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿದ್ದ ಶಾಂತಿಸೂತ್ರಕ್ಕೆ ಹಮಾಸ್ ಉಗ್ರರು ಭಾಗಶಃ ಒಪ್ಪಿಗೆ ನೀಡಿದ್ದು, ಇದರ ಬೆನ್ನಲ್ಲೇ ಟ್್ಕಂಪ್ ಅವರ ನಾಯಕತ್ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಾಗತಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅಧ್ಯಕ್ಷ ಟ್ರಂಪ್ ಅವರ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ರಧಾನಿ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬವೂ ಆಗಿದೆ ಎಂದು ಹೇಳಿದ್ದಾರೆ.
ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ಹೆಚ್ಚಿನ ಮಾನವೀಯ ನೆರವು ನೀಡುವುದರಿಂದ ಅವರಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ನಾವು ಭಾವಿಸುತ್ತೇವೆಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಟ್ರಂಪ್ ಅವರು, ಇಸ್ರೇಲ್ ಮತ್ತು ಹಮಾಸ್ ಎರಡೂ ನಮ್ಮ ಶಾಂತಿ ಒಪ್ಪಂದದ ಮೊದಲ ಹಂತಕ್ಕೆ ಸಹಿ ಹಾಕಿವೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಇದರರ್ಥ ಎಲ್ಲಾ ಒತ್ತೆಯಾಳುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಮತ್ತು ಇಸ್ರೇಲ್ ತನ್ನ ಸೈನ್ಯವನ್ನು ಒಪ್ಪಿಕೊಂಡ ಮಾರ್ಗಗಳಿಗೆ ಹಿಂತೆಗೆದುಕೊಳ್ಳುತ್ತದೆ.
ಇದು ಬಲವಾದ, ಶಾಶ್ವತ ಮತ್ತು ಶಾಶ್ವತ ಶಾಂತಿಯತ್ತ ಮೊದಲ ಹೆಜ್ಜೆಯಾಗಿದೆ. ಎಲ್ಲಾ ಪಕ್ಷಗಳನ್ನು ನ್ಯಾಯದಿಂದ ನಡೆಸಿಕೊಳ್ಳಲಾಗುತ್ತದೆ. ಅರಬ್ ಮತ್ತು ಮುಸ್ಲಿಂ ಜಗತ್ತು, ಇಸ್ರೇಲ್, ಎಲ್ಲಾ ನೆರೆಯ ರಾಷ್ಟ್ರಗಳು ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಇದು ಐತಿಹಾಸಿಕ ಮತ್ತು ಸಂತೋಷದಾಯಕ ದಿನವಾಗಿದೆ. ನಮ್ಮೊಂದಿಗೆ ಒಟ್ಟಾಗಿ ಈ ಐತಿಹಾಸಿಕ ಮತ್ತು ವಿಶಿಷ್ಟ ಒಪ್ಪಂದವನ್ನು ಸಾಧ್ಯವಾಗಿಸಿದ ಕತಾರ್, ಈಜಿಪ್ಟ್ ಮತ್ತು ಟರ್ಕಿಯ ಮಧ್ಯವರ್ತಿಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದ್ದರು.
ಈ ನಡುವೆ ಹೇಳಿಕೆ ನೀಡಿರುವ ಹಮಾಸ್ ಉಗ್ರರು, ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಾಗೂ ಪ್ಯಾಲೆಸ್ತೀನಿಯರಿಗೆ ಅಧಿಕಾರ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಗಾಜಾದಿಂದ ಇಸ್ರೇಲ್ ಸೇನೆಯ ಸಂಪೂರ್ಣ ವಾಪಸಾತಿ, ಆಸ್ಪತ್ರೆಗಳು, ಆಹಾರ ವಿತರಣೆ ಕೇಂದ್ರಗಳು, ಬೇಕರಿಗಳ ನಿರ್ಮಾಣ ಸೇರಿದಂತೆ ಮಾನವೀಯ ನೆರವಿನ ಪೂರೈಕೆ ಯಲ್ಲಿ ಹೆಚ್ಚಳ ಹಾಗೂ ಮೂಲಭೂತ ಸೌಲಭ್ಯ ಗಳ ನಿರ್ವಹಣೆವನ್ನು ಸ್ವಾಗತಿಸಿದೆ.
ಆದರೆ, ಇಸ್ರೇಲ್ ಆಕ್ರಮಣ ಮತ್ತು ಪ್ಯಾಲೆಸ್ತೀನಿಯರ ಯಾವುದೇ ಬಲವಂತದ ಸ್ಥಳಾಂತರಕ್ಕೆ ತನ್ನ ವಿರೋಧವಿದೆ. ಜತೆಗೆ 20 ಅಂಶಗಳ ಪ್ರಸ್ತಾವನೆಯಲ್ಲಿ ಹಲವು ಅಂಶಗಳ ಕುರಿತು ಆಂತರಿಕವಾಗಿ ಚರ್ಚೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿರುವ ಟ್ರಂಪ್, ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂದು ನಾನು ನಂಬುತ್ತೇನೆ. ಇಸ್ರೇಲ್ ತಕ್ಷಣವೇ ಗಾಜಾದ ಮೇಲೆ ಬಾಂಬ್ ದಾಳಿ ನಿಲ್ಲಿಸಬೇಕು. ಆ ಮೂಲಕ ಒತ್ತೆಯಾಳು ಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಹೊರಗೆ ಕರೆದುಕೊಂಡು ಬರಬಹುದು. ಬಾಂಬ್ ದಾಳಿ ಮುಂದುವರಿಸುವುದು ಅಪಾಯಕಾರಿ, ನಾವು ಈಗಾಗಲೇ ಪ್ರಸ್ತಾವನೆಯ ವಿವರಗಳ ಕುರಿತು ಚರ್ಚೆ ನಡೆಸುತ್ತಿದ್ದೇವೆಂದು ಹೇಳಿದ್ದಾರೆ.
Advertisement