
ನವದೆಹಲಿ: ಭಾರತದ ಅತ್ಯುನ್ನತ ಸ್ಥಾನವಾದ ಮುಖ್ಯ ನ್ಯಾಯಮೂರ್ತಿಯತ್ತ ಶೂ ಎಸೆತ ಪ್ರಕರಣ ದೇಶಾದ್ಯಂತ ತೀವ್ರ ಹಾಗೂ ಖಂಡನೆಗೆ ಗುರಿಯಾಗಿರುವಂತೆಯೇ 'ಅದೊಂದು ಮರೆತ ಅಧ್ಯಾಯ' ಎಂದು CJI ಬಿಆರ್ ಗವಾಯಿ ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಕ್ಟೋಬರ್ 6 ರಂದು ವಕೀಲರೊಬ್ಬರು ಶೂ ಎಸೆಯಲು ಪ್ರಯತ್ನಿಸಿದಾಗ ನಾನು ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಆಘಾತಕ್ಕೊಳಗಾಗಿದ್ದೇವು. ಆದರೆ 'ಇದೊಂದು ಮರೆತ ಅಧ್ಯಾಯ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ವಿಚಾರ ಕುರಿತು ಇಂದು ಸುಪ್ರೀಂಕೋರ್ಟ್ ನಲ್ಲಿ ಮಾತನಾಡಿದ ಬಿಆರ್ ಗವಾಯಿ, ಸೋಮವಾರ ನಡೆದ ಘಟನೆಯಿಂದ ನನ್ನ ಸಹೋದರ ಸಹೋದ್ಯೋಗಿ ತುಂಬಾ ಆಘಾತಕ್ಕೊಳಗಾಗಿದ್ದೇವೆ. ಆದರೆ ನಮ್ಮ ಪಾಲಿಗೆ ಇದು ಮರೆತು ಹೋದ ಅಧ್ಯಾಯ ಎಂದು ಹೇಳಿದರು. ಈ ವೇಳೆ ಸಿಜೆಐ ಅವರ ಪಕ್ಕದಲ್ಲಿದ್ದ ಕುಳಿತಿದ್ದ ನ್ಯಾ, ಉಜ್ವಲ್ ಭುಯಾನ್, ತಪ್ಪಿತಸ್ಥ ವಕೀಲರ ವಿರುದ್ಧದ ಕ್ರಮಕ್ಕೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರು.
ನನಗೆ ಈ ಬಗ್ಗೆ ನನ್ನದೇ ಆದ ಅಭಿಪ್ರಾಯವಿದೆ. ಅವರು ಸಿಜೆಐ, ಇದು ತಮಾಷೆಯ ವಿಷಯವಲ್ಲ! ಈ ದಾಳಿಯು "ಸುಪ್ರೀಂ ಕೋರ್ಟ್‌ಗೆ ಮಾಡಿದ ಅವಮಾನ" ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಕೃತ್ಯವನ್ನು ಕ್ಷಮಿಸಲಾಗದು ಎಂದು ಹೇಳಿದರು. ಇದು ತಪ್ಪು ಮಾಹಿತಿಯ ಫಲಿತಾಂಶ ಮತ್ತು ಅಗ್ಗದ ಪ್ರಚಾರದ ಪ್ರಯತ್ನ ಎಂದು ಕರೆದರು. ಅಲ್ಲದೇ CJI ಅವರ ಉದಾತ್ತತೆ ಮತ್ತು "ಗಾಂಭೀರ್ಯ" ವನ್ನು ಶ್ಲಾಘಿಸಿದರು. ಕೋರ್ಟ್‌ನಲ್ಲಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಆಘಾತಕಾರಿ ಘಟನೆಯ ಬಗ್ಗೆ ಇನ್ನು ಮುಂದೆ ಚರ್ಚಿಸಬೇಡಿ ಎಂದು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರನ್ನು ಕೇಳಿಕೊಂಡರು.
ನಮಗೆ ಇದು ಮರೆತುಹೋದ ಅಧ್ಯಾಯವಾಗಿದೆ, ”ಎಂದು ಸಿಜೆಐ ಪುನರುಚ್ಚರಿಸಿದರು ಮತ್ತು ವಿಚಾರಣೆಯನ್ನು ಮುಂದುವರೆಸಿದರು. ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಇಡೀ ಘಟನೆಯನ್ನು ಒಟ್ಟಾರೆ ಸಾಂಸ್ಥಿಕ ಸಂಸ್ಥೆಯ ಮೇಲಿನ ದಾಳಿ ಎಂದು ಬಣ್ಣಿಸಿದ್ದಾರೆ. ನಾನು ಘಟನೆಗೆ ಪ್ರತ್ಯಕ್ಷದರ್ಶಿ ಅಲ್ಲ. ಪತ್ರಿಕಾ ವರದಿಗಳಿಂದ ಇದು ನನಗೆ ತಿಳಿಯಿತು. ಇದು ತನಿಖೆಗೆ ಅರ್ಹವಾಗಿದೆ ಎಂದು ಅವರು ಹೇಳಿದರು.
Advertisement