
ಟಾಲಿವುಡ್ ನಟ ಶ್ರೀಕಾಂತ್ ಅಯ್ಯಂಗಾರ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅವಹೇಳನಕಾರಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆದ ನಂತರ ವಿವಾದಕ್ಕೆ ಗುರಿಯಾಗಿದ್ದಾರೆ. ವೈರಲ್ ಆಗಿರುವ ಕ್ಲಿಪ್ ನಲ್ಲಿ ಗಾಂಧಿಯನ್ನು ರಾಷ್ಟ್ರಪಿತ ಎಂದು ಕರೆಯುವುದು ಎಲ್ಲರಿಗೂ ಮಾಡುವ ಅವಮಾನ ಎಂದಿದ್ದಾರೆ.
ಗಾಂಧಿ ಕುರಿತು ಶ್ರೀಕಾಂತ್ ಅಯ್ಯಂಗಾರ್ ಅವರ ಹೇಳಿಕೆಯು ಆನ್ ಲೈನ್ ನಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ರಾಜಕೀಯ ನಾಯಕರು, ವಿವಿಧ ಸಂಘಟನೆಗಳು ಮತ್ತು ಗಾಂಧಿ ಅನುಯಾಯಿಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಶ್ರೀಕಾಂತ್ ಅವರು ನಾಥುರಾಮ್ ಗೋಡ್ಸೆ ಅವರನ್ನು ಹೊಗಳಿದ್ದಾರೆ. ಇದಕ್ಕೆ ಅನೇಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳು ರಾಷ್ಟ್ರೀಯ ನಾಯಕನ ಮಾನಹಾನಿ ಮಾಡುವ ಪ್ರಯತ್ನ ಎಂದಿದ್ದಾರೆ.
ಕಾಂಗ್ರೆಸ್ ಎಂಎಲ್ ಸಿ ಬಲ್ಮೂರ್ ವೆಂಕಟ್ ಅವರು ಅಯ್ಯಂಗಾರ್ ಅವರ ಹೇಳಿಕೆಗಳ ಬಗ್ಗೆ ಹೈದರಾಬಾದ್ ಸೈಬರ್ ಅಪರಾಧ ಘಟಕಕ್ಕೆ ದೂರು ಸಲ್ಲಿಸಿದ್ದಾರೆ. ನಟನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಅಯ್ಯಂಗಾರ್ ತಮ್ಮ ಹೇಳಿಕೆ ಹಿಂಪಡೆಯಲು ನಿರಾಕರಿಸಿದರೆ ಅವರ ವಿರುದ್ಧ ಚಲನಚಿತ್ರೋದ್ಯಮ ಮತ್ತು ಕಲಾವಿದರ ಸಂಘಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಶ್ರೀಕಾಂತ್ ಅಯ್ಯಂಗಾರ್ ಈ ಸಂಬಂಧ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement