ದೆಹಲಿಯಲ್ಲಿ ಹದಗೆಟ್ಟ ವಾಯು ಗುಣಮಟ್ಟ; GRAP-1 ಅಡಿಯಲ್ಲಿ ನಿರ್ಬಂಧ ಜಾರಿಗೆ

ಮಂಗಳವಾರ CAQM ಈ ನಿರ್ಧಾರವನ್ನು ಪ್ರಕಟಿಸಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 211 ರಲ್ಲಿ ದಾಖಲಾಗಿದ್ದು, ಇದು 'ಕಳಪೆ' ವರ್ಗದಲ್ಲಿದೆ.
Delhi air quality
ದೆಹಲಿ ವಾಯು ಗುಣಮಟ್ಟ online desk
Updated on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕುಸಿತ ಹೆಚ್ಚಾಗತೊಡಗಿದೆ. ಸಾಮಾನ್ಯವಾಗಿ, ಅಕ್ಟೋಬರ್- ಫೆಬ್ರವರಿ ಅವಧಿಯಲ್ಲಿ ದೆಹಲಿಯಲ್ಲಿ ವಾಯು ಗುಣಮಟ್ಟ ಅಧಿಕ ಪ್ರಮಾಣದಲ್ಲಿ ಕುಸಿಯುತ್ತದೆ.

ವಾಯುಗುಣಮಟ್ಟ ಕುಸಿತದ ಬೆನ್ನಲ್ಲೇ ಕೇಂದ್ರದ ಮಾಲಿನ್ಯ ವಿರೋಧಿ ಸಮಿತಿಯಾದ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಎಚ್ಚೆತ್ತುಕೊಂಡಿದ್ದು, ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) GRAP-1 ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಿದೆ.

ಮಂಗಳವಾರ CAQM ಈ ನಿರ್ಧಾರವನ್ನು ಪ್ರಕಟಿಸಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 211 ರಲ್ಲಿ ದಾಖಲಾಗಿದ್ದು, ಇದು 'ಕಳಪೆ' ವರ್ಗದಲ್ಲಿದೆ.

GRAP-1 ಕುರಿತ ಉಪ ಸಮಿತಿ ಇಂದು ನಡೆದ ಪರಿಶೀಲನಾ ಸಭೆಯಲ್ಲಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯ ನೈಜ-ಸಮಯದ ಡೇಟಾವನ್ನು ಭಾರತ ಹವಾಮಾನ ಇಲಾಖೆ (IMD) ಮತ್ತು ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆ (IITM) ಯ ಮುನ್ಸೂಚನೆಗಳ ಜೊತೆಗೆ ವಿಶ್ಲೇಷಿಸಿದೆ.

Delhi air quality
ಸದ್ಯಕ್ಕಿಲ್ಲ ಬ್ರೇಕ್..: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಕ್ಟೋಬರ್ 18ರವರೆಗೆ ಭಾರಿ ಮಳೆ; ಹವಾಮಾನ ಇಲಾಖೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com