
ನವದೆಹಲಿ: ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಮತ್ತು ಬ್ಯಾಟರಿಗಳ ಮೇಲಿನ ಸಬ್ಸಿಡಿಗಾಗಿ ಭಾರತದ ವಿರುದ್ಧ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (WTO) ಚೀನಾ ದೂರು ದಾಖಲಿಸಿದೆ.
ಚೀನಾ ಸಲ್ಲಿಸಿರುವ ದೂರಿನ ವಿವರಗಳನ್ನು ಸಚಿವಾಲಯವು ವಿಸ್ತೃತವಾಗಿ ಪರಿಶೀಲಿಸುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ಹೇಳಿದ್ದಾರೆ.
ಇದನ್ನು ದೃಢೀಕರಿಸಿದ ಅಧಿಕಾರಿಯೊಬ್ಬರು, ಟರ್ಕಿ, ಕೆನಡಾ ಮತ್ತು ಯುರೋಪಿಯನ್ ಒಕ್ಕೂಟ (EU) ವಿರುದ್ಧವೂ ಚೀನಾ ಇಂತಹುದೇ ದೂರು ಸಲ್ಲಿಸಿದೆ. ಅವರು ಭಾರತದೊಂದಿಗೆ ಸಮಾಲೋಚಿಸಲು ಬಯಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
WTO ನಿಯಮಗಳ ಪ್ರಕಾರ ಸಮಾಲೋಚನೆಯನ್ನು ಪಡೆಯುವುದು ವಿವಾದ ಇತ್ಯರ್ಥ ಪ್ರಕ್ರಿಯೆಯ ಮೊದಲ ಹಂತವಾಗಿದೆ. ಭಾರತದೊಂದಿಗೆ ಸಮಾಲೋಚನೆಯಿಂದ ಸೂಕ್ತ ರೀತಿಯಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ, ಈ ವಿಷಯ ಕುರಿತು ತೀರ್ಪು ನೀಡಲು ಸಮಿತಿ ಸ್ಥಾಪಿಸಲು ಯುರೋಪಿಯನ್ ಒಕ್ಕೂಟ ವಿಶ್ವ ವ್ಯಾಪಾರ ಸಂಸ್ಥೆಗೆ ಮನವಿ ಮಾಡಬಹುದಾಗಿದೆ. ಚೀನಾ ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ಭಾರತ ಶೇ. 14.5 ರಷ್ಟು ಅಂದರೆ 14.25 ಬಿಲಿಯನ್ ಡಾಲರ್ ಮೊತ್ತದ ರಫ್ತು ಮಾಡಿದೆ. 2023-24 ರಲ್ಲಿ ಇದು ಶೇ. 16.66 ರಷ್ಟಿತ್ತು. ಆದರೆ, ಆಮದುಗಳು 2023-24ರಲ್ಲಿ 113.45 ಬಿಲಿಯನ್ ಡಾಲರ್ ನೊಂದಿಗೆ ಶೇ. 11.52 ರಷ್ಟು ಹೆಚ್ಚಾಗಿತ್ತು. 2024-25ರ ಅವಧಿಯಲ್ಲಿ ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆಯು 99.2 ಬಿಲಿಯನ್ ಡಾಲರ್ ನಷ್ಟಿತ್ತು.
Advertisement