
ಮುಂಬೈ: ಮಹಿಳಾ ಉದ್ಯೋಗಿಯನ್ನು ನಿಂದಿಸಿದ ಆರೋಪದ ಮೇಲೆ ನವಿ ಮುಂಬೈನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕಾರ್ಯಕರ್ತರು ಸಲೂನ್ ಮಾಲೀಕನನ್ನು ಥಳಿಸಿದ್ದಾರೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ.
ಮಹಿಳಾ ಉದ್ಯೋಗಿ ಹಲವು ತಿಂಗಳುಗಳಿಂದ ಕಾಮೋಥೆಯಲ್ಲಿರುವ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಂಬಳ ನೀಡಿಲ್ಲ. ಪದೇ ಪದೇ ಮನವಿ ಮಾಡಿದ್ದರೂ ಸ್ಪಂದಿಸಿದ ಹಿನ್ನೆಲೆಯಲ್ಲಿ ಅವರು ಸ್ಥಳೀಯ MNS ಕಾರ್ಯಕರ್ತರಿಗೆ ದೂರು ನೀಡಿದ್ದರು.
ತದನಂತರ ಎಂಎನ್‌ಎಸ್ ಕಾರ್ಯಕರ್ತರು ಸಲೂನ್‌ಗೆ ಆಗಮಿಸಿ ಮಾಲೀಕರೊಂದಿಗೆ ಜಗಳ ಮಾಡಿದ್ದಾರೆ. ದಾಳಿಕೋರರಲ್ಲಿ ಒಬ್ಬರು ಚಿತ್ರೀಕರಿಸಿದ ವೀಡಿಯೊದಲ್ಲಿ ಗುಂಪು ಮಾಲೀಕನಿಗೆ ಕಪಾಳಮೋಕ್ಷ ಮತ್ತು ಗುದಿಯುವುದನ್ನು ತೋರಿಸಿದೆ. ಬಿಟ್ಟುಬಿಡುವಂತೆ ಮಾಲೀಕರು ಕೇಳಿಕೊಳ್ಳುವುದು ವಿಡಿಯೋದಲ್ಲಿದೆ.
ಈ ಸಂಬಂಧ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರು ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. MNS ಕಾರ್ಯಕರ್ತರು ಇತ್ತೀಚೆಗೆ ಹಲವಾರು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ವಿಶೇಷವಾಗಿ ಸ್ಥಳೀಯರಲ್ಲದವರು ಮರಾಠಿ ಸಂಸ್ಕೃತಿ ಮತ್ತು ಭಾಷೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗಲಾಟೆ ಮಾಡುತ್ತಿದ್ದಾರೆ.
ಈ ವಾರದ ಆರಂಭದಲ್ಲಿ, ಥಾಣೆಯ ರೈಲ್ವೇ ನಿಲ್ದಾಣದಲ್ಲಿ ಕ್ಷುಲಕ ಕಾರಣಕ್ಕೆ ತನ್ನ ಪತಿಯನ್ನು ನಿಂದಿಸಿದ ಮಹಿಳೆಗೆ ಎಂಎನ್‌ಎಸ್ ಕಾರ್ಯಕರ್ತ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಮಹಿಳೆ ಮರಾಠಿ ಜನರ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.
Advertisement