
ಹೈದರಾಬಾದ್: ಜನಪ್ರಿಯ ನಟಿಯರಾದ ಸಮಂತಾ ರುತ್ ಪ್ರಭು, ತಮನ್ನಾ ಭಾಟಿಯಾ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರ ಹೆಸರು, ಫೋಟೋ ಇರುವ ನಕಲಿ ಮತದಾರರ ಪಟ್ಟಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನಟಿಯರ ಫೋಟೋಗಳು ಮತ್ತು ನಕಲಿ ಮತದಾರರ ಗುರುತಿನ ವಿವರಗಳನ್ನು ಬಳಸಿಕೊಂಡು ನಕಲಿ ಮತದಾರರ ಪಟ್ಟಿ ತಯಾರಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಖಚಿತಪಡಿಸಿದ ನಂತರ ಮಧುರಾ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಟಿಯರ ಮೂರು ವೋಟರ್ ಕಾರ್ಡ್‌ಗಳಲ್ಲಿ ಒಂದೇ ವಿಳಾಸ ಮುದ್ರಿತವಾಗಿರುವುದು ಕಂಡುಬಂದಿದೆ ಎಂದು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಸೈಯದ್ ಯಾಹಿಯಾ ಕಮಾಲ್ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಮತ್ತು ಅಧಿಕೃತ ಚುನಾವಣಾ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶಪೂರ್ವಕ ಪ್ರಯತ್ನದ ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 336(4)(ಮತ್ತೊಬ್ಬರ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ನಕಲಿ) ಮತ್ತು 353(1)(ಸಿ) (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೋಲೀಸರು ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಪೋಸ್ಟ್‌ಗಳ ಮೂಲವನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.
Advertisement