
ಚಂಡೀಗಢ: ದೀಪಾವಳಿ ಹಬ್ಬದ ನಿಮಿತ್ತ ಮಾಲೀಕ ನೀಡಿದ್ದ ಉಡುಗೊರೆಯನ್ನು ಸಿಬ್ಬಂದಿಗಳು ಆತನ ಸಂಸ್ಥೆಯ ಗೇಟ್ ಮುಂದೆ ಎಸೆದು ಹೋದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ದೇಶಾದ್ಯಂತ ದೀಪಾವಳಿ ಸಡಗರ ಮುಂದುವರೆದಿದ್ದು, ಖಾಸಗಿ ಸಂಸ್ಥೆಯ ಮಾಲೀಕರು ಸಿಬ್ಬಂದಿಗಳಿಗೆ ವಿವಿಧ ಬಗೆಯ ಉಡುಗೊರೆ ನೀಡಿ ಗಮನ ಸೆಳೆಯುತ್ತಿದ್ದಾರೆ.
ಆದರೆ ಹರ್ಯಾಣದ ಸೋನಿಪತ್ ನ ಗನ್ನೌರ್ ಕೈಗಾರಿಕಾ ಪ್ರದೇಶಲ್ಲಿನ ಕಾರ್ಖಾನೆಯೊಂದರ ಮಾಲೀಕ ನೀಡಿದ್ದ ದೀಪಾವಳಿ ಉಡುಗೊರೆಗೆ ಅವರದ್ದೇ ಸಿಬ್ಬಂದಿ ಕೆಂಡಾಮಂಡಲರಾಗಿದ್ದಾರೆ. ಮಾತ್ರವಲ್ಲದೇ ಸಂಸ್ಥೆಯ ಗೇಟ್ ಮುಂದೆ ಎಸೆದು ಹೋಗಿರುವ ವಿಡಿಯೋ ವೈರಲ್ ಆಗಿದೆ.
ಅಚ್ಚರಿಯಾದರೂ ಇದು ಸತ್ಯ...ಸೋನಿಪತ್‌ನ ಗನ್ನೌರ್‌ನಲ್ಲಿರುವ ಖಾಸಗಿ ಕಾರ್ಖಾನೆಯ ಮಾಲೀಕ ತನ್ನ ಉದ್ಯೋಗಿಗಳಿಗೆ ಸೋನ್‌ಪಾಪ್ಡಿ (Sonpapdi) ಬಾಕ್ಸ್ ಗಳನ್ನು ಉಡುಗೊರೆಯಾಗಿ ನೀಡಿದ್ದರು.
ಆದರೆ ಮಾಲೀಕನ ಈ 'ವಿಶೇಷ ಉಡುಗೊರೆ'ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಸ್ಥೆಯ ಸಿಬ್ಬಂದಿ ಅವುಗಳನ್ನು ಕಾರ್ಖಾನೆಯ ಗೇಟ್ ಮುಂದೆ ಎಸೆದು ಹೋಗಿದ್ದಾರೆ.
ದೇಶದ ವಿವಿಧ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ವಿವಿಧ ವಸ್ತುಗಳನ್ನು ನೀಡುತ್ತಿದ್ದರೆ, ತಮ್ಮ ಮಾಲೀಕ ಮಾತ್ರ ಕೇವಲ 50 ರೂ ಬೆಲೆಯ ಸೋನ್ ಪಾಪ್ಡಿ ಸಿಹಿ ತಿನಿಸನ್ನು ನೀಡಿರುವುದು ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಖಾನೆ ಮಾಲೀಕ ಕೇವಲ ಸಿಹಿ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂದು ಉದ್ಯೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement