ಶಬರಿಮಲೆಗೆ ದ್ರೌಪದಿ ಮುರ್ಮು ಭೇಟಿ: ಲ್ಯಾಂಡಿಂಗ್ ವೇಳೆ ಕಾಂಕ್ರೀಟ್'ನಲ್ಲಿ ಸಿಲುಕಿದ ಹೆಲಿಕಾಪ್ಟರ್; ಕೆಲಕಾಲ ಆತಂಕ ಸೃಷ್ಟಿ; Video

ದ್ರೌಪದಿ ಮುರ್ಮು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್‌ ಆಗುತ್ತಿದ್ದಂತೆ ಲ್ಯಾಂಡಿಂಗ್ ಪ್ಯಾಡ್ನಲ್ಲಿ ಸಿಲುಕಿಕೊಂಡ ಘಟನೆ ಕೇರಳದ ಪ್ರಮದಂ ಕ್ರೀಡಾಂಗಣದಲ್ಲಿ ನಡೆದಿದೆ.
Helicopter
ಕಾಂಕ್ರೀಟ್ ನಲ್ಲಿ ಸಿಲುಕಿರುವ ಹೆಲಿಕಾಪ್ಟರ್.
Updated on

ಕೇರಳ (ಪತ್ತನಂತಿಟ್ಟ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಗೆ ಭೇಟಿ ನೀಡುತ್ತಿದ್ದ ವೇಳೆ ಭದ್ರತಾ ಲೋಪ ಸಂಭವಿಸಿದೆ.

ದ್ರೌಪದಿ ಮುರ್ಮು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್‌ ಆಗುತ್ತಿದ್ದಂತೆ ಲ್ಯಾಂಡಿಂಗ್ ಪ್ಯಾಡ್ನಲ್ಲಿ ಸಿಲುಕಿಕೊಂಡ ಘಟನೆ ಕೇರಳದ ಪ್ರಮದಂ ಕ್ರೀಡಾಂಗಣದಲ್ಲಿ ನಡೆದಿದೆ.

ರಾಷ್ಟ್ರಪತಿ ಅವರಿದ್ದ ಹೆಲಿಕಾಪ್ಟರ್‌ನ ಒಂದು ಭಾಗ ಡಾಂಬರಿನಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ರಾಷ್ಟ್ರಪತಿಗಳು ಬೆಳಿಗ್ಗೆ 8.30 ರ ಸುಮಾರಿಗೆ ಹೆಲಿಕಾಪ್ಟರ್‌ನಿಂದ ಸುರಕ್ಷಿತವಾಗಿ ಇಳಿದ ಕೆಲವೇ ಕ್ಷಣಗಳಲ್ಲಿ ಈ ಘಟನೆ ಸಂಭವಿಸಿದೆ.

ನಂತರ ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ವಿಮಾನವನ್ನು ತಳ್ಳಲು ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಹಾಯ ಮಾಡಿದರು.

ಮೊದಲು ಪಂಬಾ ಬಳಿಯ ನೀಲಕ್ಕಲ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್‌ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ. ಅಲ್ಲಿನ ಕೆಟ್ಟ ಹವಾಮಾನದ ಕಾರಣದಿಂದಾಗಿ ಸ್ಥಳವನ್ನು ಪ್ರಮದಂಗೆ ಬದಲಾಯಿಸಲಾಯಿತು. ಕೊನೆಯ ಕ್ಷಣದಲ್ಲಿ ಇಳಿಯುವ ಸ್ಥಳವನ್ನು ನಿಗದಿಪಡಿಸಿದ್ದರಿಂದ ಸಮಸ್ಯೆಯಾಗಿದೆ.

ʻಪ್ರಮದಂನಲ್ಲಿ ಕಾಂಕ್ರೀಟ್ ಸಂಪೂರ್ಣವಾಗಿ ಗಟ್ಟಿಯಾಗಿರಲಿಲ್ಲ, ಆದ್ದರಿಂದ ಹೆಲಿಕಾಪ್ಟರ್ ಇಳಿದಾಗ ಅದರ ಕಾಂಕ್ರಿಟ್‌ಗೆ ತೂಕವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಚಕ್ರಗಳು ನೆಲಕ್ಕೆ ಸಿಲುಕಿತ್ತು. ಸ್ಥಳದಲ್ಲಿ ರಸ್ತೆಗುಂಡಿ ಉಂಟಾಗಲು ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Helicopter
ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು; Video

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com