ನಿತೀಶ್ ಕುಮಾರ್ ಮಹಾಘಟಬಂಧನ್‌ ಸೇರಬೇಕು, ಬಿಜೆಪಿ ಅವರ ಬೆನ್ನಿಗೆ ಇರಿದಿದೆ: ಪಪ್ಪು ಯಾದವ್

ಮಹಾಘಟಬಂಧನ್‌ ಪ್ರಚಾರ ಸಾಮಗ್ರಿಗಳಲ್ಲಿ ತೇಜಸ್ವಿ ಯಾದವ್ ಅವರ ಚಿತ್ರಕ್ಕೆ ನೀಡಲಾಗುವ ಹೆಚ್ಚಿನ ಪ್ರಾಮುಖ್ಯತೆಯ ಬಗ್ಗೆ ಪಪ್ಪು ಯಾದವ್ ಕಳವಳ ವ್ಯಕ್ತಪಡಿಸಿದರು.
Nitish Kumar should join Mahagathbandhan, BJP stabbing him from behind: Independent MP Pappu Yadav
ಸಂಸದ ಪಪ್ಪು ಯಾದವ್
Updated on

ಪಾಟ್ನಾ: ಬಿಜೆಪಿ ಹಿಂದಿನಿಂದ ಇರಿದಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಪಕ್ಷಗಳ 'ಮಹಾಘಟಬಂಧನ್' ಸೇರಬೇಕು. ರಾಜಕೀಯ ಒತ್ತಡದ ಹೊರತಾಗಿಯೂ, ಮೈತ್ರಿಕೂಟವು ನಿತೀಶ್ ಕುಮಾರ್ ಅವರನ್ನು ಮತ್ತು ರಾಜ್ಯದಲ್ಲಿ ಅವರ ನಾಯಕತ್ವವನ್ನು ಗೌರವಿಸುತ್ತದೆ ಎಂದು ಸಂಸದ ಪಪ್ಪು ಯಾದವ್ ಗುರುವಾರ ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಅವರು, 'ಬಿಜೆಪಿ ಹಿಂದಿನಿಂದ ಇರಿಯುತ್ತಿರುವುದರಿಂದ ನಾನು ನಿತೀಶ್ ಕುಮಾರ್ ಅವರನ್ನು ಆಹ್ವಾನಿಸುತ್ತೇನೆ. ಬಿಜೆಪಿ ಅವರನ್ನು ಮುಗಿಸುತ್ತಿದೆ. ನಮ್ಮ ನಾಯಕರು ಯಾವಾಗಲೂ ಅವರನ್ನು ಗೌರವಿಸುತ್ತಾರೆ. ನಮಗೆ ಅವರ ಬಗ್ಗೆ ಅಪಾರ ಗೌರವವಿದೆ' ಎಂದು ಹೇಳಿದರು.

ಆದಾಗ್ಯೂ, ಮಹಾಘಟಬಂಧನ್‌ ಪ್ರಚಾರ ಸಾಮಗ್ರಿಗಳಲ್ಲಿ ತೇಜಸ್ವಿ ಯಾದವ್ ಅವರ ಚಿತ್ರಕ್ಕೆ ನೀಡಲಾಗುವ ಹೆಚ್ಚಿನ ಪ್ರಾಮುಖ್ಯತೆಯ ಬಗ್ಗೆ ಪಪ್ಪು ಯಾದವ್ ಕಳವಳ ವ್ಯಕ್ತಪಡಿಸಿದರು. 'ಜನರು ರಾಹುಲ್ ಗಾಂಧಿಯವರನ್ನು ನೋಡಿ ಮತ ಚಲಾಯಿಸುತ್ತಾರೆ ಮತ್ತು ಬೇರೆಯವರ ಚಿತ್ರಕ್ಕಾಗಿ ಅಲ್ಲ... ಮೈತ್ರಿಕೂಟದ ಮೂವರು ನಾಯಕರ ಚಿತ್ರಗಳು ಅಲ್ಲಿ ಇರಬೇಕಿತ್ತು. ಇದು ಸರಿಯಲ್ಲ ಮತ್ತು ಇದು ಸರಿಯಾದ ಸಂದೇಶ ನೀಡುವುದಿಲ್ಲ. ನಾವು ರಾಹುಲ್ ಗಾಂಧಿಯವರಿಂದ ಮಾತ್ರ ಬಿಹಾರವನ್ನು ಗೆಲ್ಲಬಹುದು. ಇಲ್ಲಿ ಗೆಲ್ಲಲು ನಮಗೆ ಬೇರೆ ದಾರಿಯಿಲ್ಲ' ಎಂದು ಹೇಳಿದರು.

ಇದಕ್ಕೆ ವ್ಯತಿರಿಕ್ತವಾಗಿ, ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ ತೇಜಸ್ವಿ ಯಾದವ್ ಅವರನ್ನು ಮೈತ್ರಿಕೂಟದ ಪ್ರಬಲ ಮುಖವಾಗಿ ಅನುಮೋದಿಸಿದರು.

Nitish Kumar should join Mahagathbandhan, BJP stabbing him from behind: Independent MP Pappu Yadav
Bihar polls: ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್‌ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ

'ಬಿಹಾರ ಮೇ ತೇಜಸ್ವಿ ಹೈ ತೇಜಸ್ವಿ ಹೈ. ಬಿಹಾರದ ಜನರಿಗೆ ತೇಜಸ್ವಿ ಯಾದವ್ ಅವರ ಭರವಸೆಗಳು, ಉದ್ದೇಶಗಳು ಮತ್ತು ನಿರ್ಣಯಗಳ ಮೇಲೆ ಮತ ಚಲಾಯಿಸಲಿದ್ದಾರೆಂದು ತಿಳಿದಿದೆ. ಜನರು ಈಗಾಗಲೇ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಅನುಮೋದಿಸಿದ್ದಾರೆ. ಉಳಿದವುಗಳು ಔಪಚಾರಿಕತೆಗಳು ಮತ್ತು ಅವೆಲ್ಲವೂ ಪೂರ್ಣಗೊಳ್ಳುತ್ತವೆ. ಬಿಹಾರದ ಜನರು ತೇಜಸ್ವಿ ಯಾದವ್ ಅವರನ್ನು ತಮ್ಮ ಮುಖ್ಯಮಂತ್ರಿಯಾಗಿ ಸ್ವೀಕರಿಸಿದ್ದಾರೆ. ಬಿಹಾರದ ಜನರು ತೇಜಸ್ವಿ ಯಾದವ್ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ" ಎಂದು ತಿವಾರಿ ಹೇಳಿದರು.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಟಬಂಧನದಲ್ಲಿ ಕಾಂಗ್ರೆಸ್ ಪಕ್ಷ, ದೀಪಂಕರ್ ಭಟ್ಟಾಚಾರ್ಯ ನೇತೃತ್ವದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) (ಸಿಪಿಐ-ಎಂಎಲ್), ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) (ಸಿಪಿಎಂ) ಮತ್ತು ಮುಖೇಶ್ ಸಾಹ್ನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷ (ವಿಐಪಿ) ಸೇರಿವೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜನತಾದಳ (ಯುನೈಟೆಡ್) [ಜೆಡಿ(ಯು)], ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) [ಎಲ್‌ಜೆಪಿ (ಆರ್‌ವಿ)], ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) [ಎಚ್‌ಎಎಂ(ಎಸ್)] ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಸೇರಿವೆ.

ಬಿಹಾರ ವಿಧಾನಸಭಾ ಚುನಾವಣೆಗೆ ನವೆಂಬರ್ 6 ಮತ್ತು 11 ರಂದು ಮತದಾನ ನಡೆಯಲಿದ್ದು, ಮತ ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com