Bihar Polls: ಬಿಹಾರ ಜನತೆ 'ಜಂಗಲ್ ರಾಜ್' ಆಡಳಿತ ದೂರವಿಟ್ಟು ಬಹುದೊಡ್ಡ ಜನಾದೇಶದಿಂದ NDA ಗೆಲ್ಲಿಸುತ್ತಾರೆ!

ಆರ್‌ಜೆಡಿಯ ವಿರುದ್ಧದ ತಮ್ಮ "ಜಂಗಲ್ ರಾಜ್" ಹೇಳಿಕೆಯನ್ನು ಮತ್ತೆ ಪುನರುಚ್ಛರಿಸಿದ ಮೋದಿ, ರಾಜ್ಯವು ಅವರನ್ನು ದೂರವಿಟ್ಟು ಉತ್ತಮ ಆಡಳಿತಕ್ಕಾಗಿ ಎನ್ ಡಿಎ ಮೈತ್ರಿಕೂಟಕ್ಕೆ ಮತ ನೀಡಿ ಎಂದು ಜನತೆಗೆ ಮನವಿ ಮಾಡಿಕೊಂಡರು.
Prime Minister Narendra Modi addresses an election rally in Samastipur, Bihar
ಬಿಹಾರದ ಸಮಷ್ಟಿಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
Updated on

ಬಿಹಾರ ಚುನಾವಣಾ ಪ್ರಚಾರದ ರಂಗು ಹೆಚ್ಚಾಗುತ್ತಿದ್ದು ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಆರಂಭಿಸಿದ್ದಾರೆ. ಬಿಹಾರದ ಸಮಷ್ಟಿಪುರದಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು, ಸಂವಿಧಾನವನ್ನು ಹೊತ್ತವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಆರ್‌ಜೆಡಿಯ ವಿರುದ್ಧದ ತಮ್ಮ "ಜಂಗಲ್ ರಾಜ್" ಹೇಳಿಕೆಯನ್ನು ಮತ್ತೆ ಪುನರುಚ್ಛರಿಸಿದ ಮೋದಿ, ರಾಜ್ಯವು ಅವರನ್ನು ದೂರವಿಟ್ಟು ಉತ್ತಮ ಆಡಳಿತಕ್ಕಾಗಿ ಎನ್ ಡಿಎ ಮೈತ್ರಿಕೂಟಕ್ಕೆ ಮತ ನೀಡಿ ಎಂದು ಜನತೆಗೆ ಮನವಿ ಮಾಡಿಕೊಂಡರು.

"ಬಿಹಾರವು 'ಜಂಗಲ್ ರಾಜ್' ನ್ನು ತೊಡೆದುಹಾಕಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎಯ ಉತ್ತಮ ಆಡಳಿತ ಪ್ರಾರಂಭವಾದದ್ದು ಅಕ್ಟೋಬರ್ 2005 ರಲ್ಲಿ. ಆಗ ಕೇಂದ್ರದಲ್ಲಿ ಕಾಂಗ್ರೆಸ್-ಆರ್‌ಜೆಡಿ ಅಧಿಕಾರದಲ್ಲಿತ್ತು. ಅವರು ಅನೇಕ ಅಡೆತಡೆಗಳನ್ನು ಸೃಷ್ಟಿಸಿದರು. ಬಿಹಾರವನ್ನು ಸಾಧ್ಯವಾದಷ್ಟು ಆರ್ ಜೆಡಿ ಹಾನಿಮಾಡಿದೆ. ಅದು ಬಿಹಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಬಿಹಾರದಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರಕ್ಕೆ ಸಹಾಯ ಮಾಡಲು ಬಯಸಿದರೆ ಕಾಂಗ್ರೆಸ್ ಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಸಹ ಬೆದರಿಕೆ ಹಾಕಿತು ಎಂದರು.

ಬಿಹಾರದ ಜನರು "ಜಂಗಲ್ ರಾಜ್‌ನ ದುಷ್ಕೃತ್ಯಗಳನ್ನು" ಎಂದಿಗೂ ಮರೆಯಲು ಸಾಧ್ಯವಿಲ್ಲ. ಆರ್ ಜೆಡಿಯ ಆಡಳಿತ ಕ್ರಮವೇ ಅಂಥಹದ್ದು ಎಂದ ಪ್ರಧಾನ ಮಂತ್ರಿಗಳು ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಯನ್ನು ಲಠ್ ಬಂಧನ್ ಅಂದರೆ ಕ್ರಿಮಿನಲ್ ಗಳ ಮೈತ್ರಿ ಎಂದು ಕರೆದರು.

Prime Minister Narendra Modi addresses an election rally in Samastipur, Bihar
Bihar polls: ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್‌ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ

ಎನ್ ಡಿಎಗೆ ಬಹುಮತ

ಬಿಹಾರ ಚುನಾವಣೆಯಲ್ಲಿ ಈ ಬಾರಿ NDA ತನ್ನ ಅತಿದೊಡ್ಡ ಜನಾದೇಶವನ್ನು ಪಡೆಯುತ್ತದೆ. ಆಡಳಿತ ಮೈತ್ರಿಕೂಟ ಅಧಿಕಾರಕ್ಕೆ ಮರಳಿದ ನಂತರ ಬಿಹಾರದ ಬೆಳವಣಿಗೆ ವೇಗಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಜನರು ನಮಗೆ ಮೊದಲಿಗಿಂತ ಹೆಚ್ಚಿನ ಬಹುಮತವನ್ನು ನೀಡಿದರು. ಹರಿಯಾಣದಲ್ಲಿಯೂ ಅದೇ ಆಯಿತು. ಮೂರನೇ ಅವಧಿಗೆ ನಮ್ಮನ್ನು ಆಯ್ಕೆ ಮಾಡಿದರು. ಮಧ್ಯಪ್ರದೇಶದಲ್ಲಿಯೂ ಸಹ, ಬಿಜೆಪಿ ದೀರ್ಘಕಾಲದಿಂದ ಅಧಿಕಾರದಲ್ಲಿದೆ.

ಗುಜರಾತ್ ಮತ್ತು ಉತ್ತರಾಖಂಡದಲ್ಲೂ ನಾವು ಇದನ್ನು ನೋಡಿದ್ದೇವೆ. ಗುಜರಾತ್‌ನಲ್ಲಿ, ಬಿಜೆಪಿ ಎರಡು ದಶಕಗಳಿಂದಲೂ ಹೆಚ್ಚು ಕಾಲ ಅಧಿಕಾರದಲ್ಲಿದೆ, ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರಗಳು ಬದಲಾಗುವ ಉತ್ತರ ಪ್ರದೇಶದಲ್ಲಿ, BJP ಆ ಪ್ರವೃತ್ತಿಯನ್ನು ಕೊನೆಗೊಳಿಸಿತು. ಇದೆಲ್ಲವೂ NDA ಉತ್ತಮ ಆಡಳಿತ, ಸಾರ್ವಜನಿಕ ಸೇವೆ ಮತ್ತು ಖಾತರಿಪಡಿಸಿದ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಎಂದು ತೋರಿಸುತ್ತದೆ. ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ, NDA ಬಿಹಾರದಲ್ಲಿ ತನ್ನದೇ ಆದ ದಾಖಲೆಯನ್ನು ಮುರಿದು ಇದುವರೆಗಿನ ಅತಿದೊಡ್ಡ ಜನಾದೇಶವನ್ನು ಪಡೆಯುತ್ತದೆ ಎಂದು ನಾನು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ ಎಂದರು.

Prime Minister Narendra Modi addresses an election rally in Samastipur, Bihar
ಬಿಹಾರ ಕಣದಲ್ಲಿ ಪ್ರಶಾಂತ ಕಿಶೋರ್‌ ಕಿಂಗ್‌ ಮೇಕರ್ ಆಗುವರೇ? (ನೇರ ನೋಟ)

ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್ ಅವರನ್ನು ಉಲ್ಲೇಖಿಸಿದರು, ಭಾರತೀಯ ಕ್ರಾಂತಿ ದಳ ನಾಯಕನ ರಾಜ್ಯದ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. ವಿರೋಧ ಪಕ್ಷಗಳು ಅವರ ಜನನಾಯಕ ಬಿರುದನ್ನು ಕದಿಯಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಇದು ನನಗೆ ಸ್ಮರಣೀಯ ದಿನ. ಭಾರತ ರತ್ನ ಜನನಾಯಕ ಕರ್ಪುರಿ ಠಾಕೂರ್ ಅವರ ಗ್ರಾಮವಾದ ಕರ್ಪುರಿ ಗ್ರಾಮಕ್ಕೆ ಭೇಟಿ ನೀಡಿ ಅವರಿಗೆ ಗೌರವ ಸಲ್ಲಿಸಿದೆ. ಅವರ ಆಶೀರ್ವಾದದಿಂದಲೇ ನಾನು ಮತ್ತು ನಿತೀಶ್ ಕುಮಾರ್ ಅವರಂತಹ ಹಿಂದುಳಿದ ಸಮುದಾಯದವರು ಇಂದು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದರು.

ಆರ್‌ಜೆಡಿ ಮತ್ತು ಕಾಂಗ್ರೆಸ್ ಹೇಳುವುದೊಂದು ಮಾಡುವುದೊಂದು ಎಂದು ನಿಮಗೆಲ್ಲರಿಗೂ ನನಗಿಂತ ಚೆನ್ನಾಗಿ ತಿಳಿದಿದೆ. ನಾನು ನಿಮಗೆ ನೆನಪಿಸುವ ಅಗತ್ಯವಿಲ್ಲ. ಜನರು ಭ್ರಷ್ಟಾಚಾರ ಪ್ರಕರಣಗಳಲ್ಲಿ, ಕಳ್ಳತನದ ಆರೋಪದ ಮೇಲೆ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಕಳ್ಳತನದ ಅಭ್ಯಾಸ ಹೇಗಿದೆಯೆಂದರೆ ಅವರು ಈಗ ಜನನಾಯಕ ಕರ್ಪೂರಿ ಠಾಕೂರ್ ಎಂಬ ಬಿರುದನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ಬಿಹಾರದ ಜನರು ಇಂತವುಗಳಿಗೆ ಮಣೆಹಾಕುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com