

ಆಫೀಸ್ ಒಂದರಲ್ಲಿ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಮಹಿಳೆಯೊಬ್ಬರು ಮಸ್ತ್ ಡ್ಯಾನ್ಸ್ ಮಾಡುವ ಮೂಲಕ ಸಹೋದ್ಯೋಗಿಗಳನ್ನು ರಂಜಿಸಿದ್ದಾರೆ. ಕೆಲಸದ ಸ್ಥಳದಲ್ಲಿ ದೀಪಾವಳಿ ಆಚರಣೆಯು ಡ್ಯಾನ್ಸ್ ಪಾರ್ಟಿಯಾಗಿ ಮಾರ್ಪಟ್ಟಿದೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದ್ದು, ಇನ್ಸಾಟಾಗ್ರಾಮ್ ನಲ್ಲಿ 12 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ.
ಶಿಖಾ ಶರ್ಮಾ, ನೀಲಿ ಬಣ್ಣದ ಸೀರೆಯನ್ನು ಧರಿಸಿ, ಬನ್ ಥಾನ್ ಚಾಲಿ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಆಫೀಸ್ ನ್ನು ಡ್ಯಾನ್ಸ್ ಪ್ಲೋರ್ ಆಗಿ ಮಾಡಿದ್ದಾರೆ.
ಆಕೆಯ ಮಸ್ತ್ ಡ್ಯಾನ್ಸ್ ಗೆ ಫಿದಾ ಆದ ಸಹೋದ್ಯೋಗಿಗಳು ಚಪ್ಪಾಳೆ, ಸಿಳ್ಳೆಗಳ ಮೂಲಕ ಆಕೆಯನ್ನು ಹುರಿದುಂಬಿಸಿದರು. ನೃತ್ಯ ಮಾಡದೆ ಇರಲು ಆಗಲಿಲ್ಲ. ನಿಷ್ಪಕ್ಷಪಾತವಾಗಿ ನೃತ್ಯ ಮಾಡಿದೆ, ”ಎಂದು ಅವರು ಬರೆದುಕೊಂಡಿದ್ದಾರೆ.
ಶಿಖಾ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 12 ಮಿಲಿಯನ್ ವೀಕ್ಷಣೆಗಳು ಕಂಡಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆಯ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಶ್ಲಾಘಿಸಿದ್ದಾರೆ.
Advertisement