Tejashwi Yadav
ತೇಜಸ್ವಿ ಯಾದವ್

ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಪಂಚಾಯಿತಿ ಪ್ರತಿನಿಧಿಗಳಿಗೆ ಭತ್ಯೆ ಹೆಚ್ಚಳ, ಪಿಂಚಣಿ, ವಿಮೆ ಸೌಲಭ್ಯ: ತೇಜಸ್ವಿ ಯಾದವ್

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶಗಳು ಪ್ರಕಟವಾಗಲಿವೆ.
Published on

ಪಾಟ್ನಾ: ಬಿಹಾರದಲ್ಲಿ ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ, ಇಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರತಿನಿಧಿಗಳ ಭತ್ಯೆಯನ್ನು ದ್ವಿಗುಣಗೊಳಿಸಲಾಗುವುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.

ಅಲ್ಲದೆ, ಅವರಿಗೆ 50 ಲಕ್ಷ ವಿಮಾ ರಕ್ಷಣೆ ಮತ್ತು ಪಿಂಚಣಿಯನ್ನು ಸಹ ಅವರು ಘೋಷಿಸಿದರು.

ಪಂಚಾಯತ್ ರಾಜ್ ವ್ಯವಸ್ಥೆಯು ಮೂರು ಹಂತದ ಆಡಳಿತವನ್ನು ಒಳಗೊಂಡಿದೆ. ಜಿಲ್ಲಾ ಪರಿಷತ್, ಪಂಚಾಯತ್ ಸಮಿತಿ ಮತ್ತು ಗ್ರಾಮ ಪಂಚಾಯತ್. ಅಧ್ಯಕ್ಷರನ್ನು 'ಮುಖ್ಯ' (ಗ್ರಾಮ ಪಂಚಾಯಿತಿ), 'ಪ್ರಮುಖ' (ಪಂಚಾಯಿತಿ ಸಮಿತಿ) ಮತ್ತು 'ಅಧ್ಯಕ್ಷ' (ಜಿಲ್ಲಾ ಪರಿಷತ್) ಎಂದು ಕರೆಯಲಾಗುತ್ತದೆ.

'ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ವಿತರಕರಿಗೆ ಪ್ರತಿ ಕ್ವಿಂಟಲ್‌ಗೆ ಲಾಭಾಂಶವನ್ನು ಗಣನೀಯವಾಗಿ ಹೆಚ್ಚಿಸುತ್ತೇವೆ. ಇದಲ್ಲದೆ, ಕ್ಷೌರಿಕರು, ಕುಂಬಾರಿಕೆ ವ್ಯವಹಾರದಲ್ಲಿ ತೊಡಗಿರುವವರು ಮತ್ತು ಬಡಗಿಗಳಿಗೆ ನಾವು 5 ಲಕ್ಷ ರೂ. ಬಡ್ಡಿರಹಿತ ಸಾಲವನ್ನು ನೀಡುತ್ತೇವೆ' ಎಂದು ಯಾದವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶಗಳು ಪ್ರಕಟವಾಗಲಿವೆ.

Tejashwi Yadav
Bihar polls: ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್‌ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ

ಬಿಹಾರ ವಿಧಾನಸಭಾ ಚುನಾವಣೆಗೆ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿರೋಧ ಪಕ್ಷಗಳ ಇಂಡಿಯಾ ಬಣ ಘೋಷಿಸಿದೆ. ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಜೊತೆಗೆ ಮತ್ತೊಬ್ಬರು ರಾಜ್ಯದ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com