

ಮುಂಬೈ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಮಹಾರಾಷ್ಟ್ರ ವೈದ್ಯೆ ಅತ್ಯಾಚಾರ, ಆತ್ಮಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದ್ದು, ಆಕೆಯೇ ಸೆ**ಗೆ ಒತ್ತಾಯಿಸುತ್ತಿದ್ದಳು ಮತ್ತು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಎಂದು ಆರೋಪಿ ಹೇಳಿದ್ದಾನೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಾಲ್ಟನ್‌ನಲ್ಲಿ ಮಹಿಳಾ ವೈದ್ಯೆಯೊಬ್ಬರು, ಇಬ್ಬರು ಪೊಲೀಸ್ ಅಧಿಕಾರಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
28 ವರ್ಷದ ವೈದ್ಯೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದಾನೆ ತನ್ನ ಮೇಲೆ ಐದು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ತನ್ನ ಕೈ ಮೇಲೆ ಬರೆದುಕೊಂಡಿದ್ದ ಮತ್ತು ಮತ್ತೊಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಂಕರ್, ನಾಲ್ಕು ತಿಂಗಳ ಕಾಲ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಆರೋಪಿಸಿದ್ದರು.
ಬಿಗ್ ಟ್ವಿಸ್ಟ್
ಇನ್ನು ಈ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ದೊರೆತಿದ್ದು, ವೈದ್ಯೆಯ ಆತ್ಮಹತ್ಯೆ ಹೇಳಿಕೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಆತನ ಕುಟುಂಬದವರು ಈಗ ವೈದ್ಯೆಯ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ.
ವೈದ್ಯೆ ತನ್ನ ಮೇಲೆ ಮಾನಸಿಕ ಕಿರುಕುಳ ನೀಡುತ್ತಿದ್ದಳು. ಲೈಂಗಿಕ ಸಂಭೋಗಕ್ಕೆ ಕರೆಯುತ್ತಿದ್ದಳು, ಮದುವೆ ಆಗಲು ಒತ್ತಾಯಿಸುತ್ತಿದ್ದಳು ಎಂದು ಆರೋಪಿಯಾಗಿರುವ ಟೆಕ್ಕಿ ಪ್ರಶಾಂತ್ ಬಣಕರ್ ಹೇಳಿದ್ದಾರೆ.
ವೈದ್ಯೆಯಿಂದಲೇ ತನಗೆ ಕಿರುಕುಳ ಆಗುತ್ತಿತ್ತು. ಆಕೆಯನ್ನು ಮದುವೆಯಾಗಬೇಕೆಂದು ಮತ್ತು ದೈಹಿಕ ಸಂಬಂಧ ಇಟ್ಟುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಳು ಎಂದು ಆರೋಪಿ ಪ್ರಶಾಂತ್ ಬಣಕರ್ ಆರೋಪಿಸುತ್ತಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಪ್ರಶಾಂತ್ ಬಣಕಾರ್ ಕುಟುಂಬಸ್ಥರೂ ಕೂಡ ಹೇಳಿಕೆ ನೀಡಿದ್ದು, 'ಬೀಡ್ ಜಿಲ್ಲೆಗೆ ಸೇರಿದ ವೈದ್ಯೆಯು ಪ್ರಶಾಂತ್ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಬಾಡಿಗೆಗೆ ವಾಸವಿರುತ್ತಾಳೆ. ಕಳೆದ ತಿಂಗಳು ಪ್ರಶಾಂತ್ಗೆ ಡೆಂಗ್ಯೂ ಸೋಂಕು ತಗುಲಿ ಫಲ್ಟಾಣ್ಗೆ ಬಂದಿರುತ್ತಾನೆ.
ಈ ವೇಳೆ ಆತನಿಗೆ ಈಕೆಯೇ ಚಿಕಿತ್ಸೆ ನೀಡಿರುತ್ತಾಳೆ. ಆಗ ಇಬ್ಬರ ಮಧ್ಯೆ ಮೊಬೈಲ್ ನಂಬರ್ಗಳ ವಿನಿಮಯ ಆಗುತ್ತದೆ. ಎರಡು ವಾರಗಳ ಹಿಂದೆ ಆಕೆ ಮದುವೆಗೆ ಪ್ರೊಪೋಸ್ ಮಾಡುತ್ತಾಳೆ. ಇದನ್ನು ತನ್ನ ಅಣ್ಣ ತಿರಸ್ಕರಿಸಿದ್ದ ಎಂದು ಪ್ರಶಾಂತ್ ಬಣಕಾರ್ನ ತಂಗಿ ಹೇಳಿಕೆ ನೀಡಿದ್ದಾಳೆ.
ಪೊಲೀಸರ ಪರಿಶೀಲನೆ
ಸತಾರಾ ಪೊಲೀಸರೂ ಕೂಡ ಈ ಸಂಗತಿಯನ್ನು ಖಚಿತಪಡಿಸಿದ್ದಾರೆ. ಅವರಿಬ್ಬರ ಮಧ್ಯೆ ನಡೆದ ದೂರವಾಣಿ ಸಂಭಾಷಣೆ ಹಾಗೂ ಚ್ಯಾಟ್ಗಳ ವಿವರವನ್ನು ಪೊಲೀಸರು ಪಡೆದು ಪರಿಶೀಲಿಸುತ್ತಿದ್ದಾರೆ.
Advertisement