

ದರ್ಭಾಂಗ (ಬಿಹಾರ): ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ಪುತ್ರ ತೇಜಸ್ವಿ ಅವರನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಯಸುತ್ತಾರೆ. ಆದರೆ, 'ಆ ಎರಡೂ ಹುದ್ದೆಗಳು ಖಾಲಿ ಇಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾಘಟಬಂಧನ ಅನ್ನು 'ಥಗ್ ಬಂಧನ' ಎಂದು ಕರೆದರು. ಲಾಲು ಪ್ರಸಾದ್ ಮೇವು, ಬಿಟುಮೆನ್ ಮತ್ತು ಉದ್ಯೋಗಕ್ಕಾಗಿ ಭೂಮಿ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ 12 ಲಕ್ಷ ಕೋಟಿ ರೂ. ಮೌಲ್ಯದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ ಮತ್ತು ಅದರ ಸದಸ್ಯರನ್ನು ಬಂಧಿಸಿದೆ. ಎನ್‌ಡಿಎ ಅವರನ್ನು ಜೈಲಿನಿಂದ ಹೊರಗೆ ಬರಲು ಬಿಡುವುದಿಲ್ಲ. ಆರ್‌ಜೆಡಿ ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಪಿಎಫ್‌ಐ ಸದಸ್ಯರನ್ನು ಜೈಲಿನಲ್ಲಿಯೇ ಇರಲು ಬಿಡುತ್ತದೆ ಎಂದು ನೀವು ಭಾವಿಸುತ್ತೀರಾ? ಎಂದು ಅವರು ಪ್ರಶ್ನಿಸಿದರು.
'ಎನ್‌ಡಿಎ ಸರ್ಕಾರ ಬಿಹಾರದ 8.52 ಕೋಟಿ ಜನರಿಗೆ ಉಚಿತ ಪಡಿತರವನ್ನು ಒದಗಿಸುತ್ತಿದೆ. ಮಖಾನಾ ಮಂಡಳಿಯನ್ನು ರಚಿಸಿದೆ ಮತ್ತು ಮನೆಗೆ 125 ಯೂನಿಟ್ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ. ದರ್ಭಂಗಾದಲ್ಲಿ ಶೀಘ್ರದಲ್ಲೇ ಮೆಟ್ರೋ ರೈಲು ನಿರ್ಮಾಣವಾಗಲಿದೆ. ಈಗಾಗಲೇ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ ಮತ್ತು ಏಮ್ಸ್ ಅನ್ನು ನಿರ್ಮಿಸಲಾಗುತ್ತಿದೆ. ಮಿಥಿಲಾದಲ್ಲಿ ಸೀತಾ ದೇವಿಯ ದೇವಾಲಯವನ್ನು ನಿರ್ಮಿಸಲಾಗುತ್ತಿದ್ದು, ಅವರು ಭೇಟಿ ನೀಡಿದ ಎಲ್ಲ ಸ್ಥಳಗಳನ್ನು ರಾಮ ಸರ್ಕ್ಯೂಟ್‌ಗೆ ಸಂಪರ್ಕಿಸಲಾಗುವುದು' ಎಂದು ಅವರು ಹೇಳಿದರು.
'ಎನ್‌ಡಿಎ ಸರ್ಕಾರ ಮೈಥಿಲಿಗೆ ಅಧಿಕೃತ ಸ್ಥಾನಮಾನ ನೀಡಿತು ಮತ್ತು ಸಂವಿಧಾನವನ್ನು ಕೆಲವು ಭಾಷೆಗಳಿಗೆ ಅನುವಾದಿಸಲಾಗಿದೆ. ಹಸ್ತಪ್ರತಿಗಳನ್ನು ಸಂರಕ್ಷಿಸಲು ಈ ಪ್ರದೇಶದಲ್ಲಿ 500 ಕೋಟಿ ರೂ.ಗಳ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ' ಎಂದು ಹೇಳಿದರು.
Advertisement