
ಲಖನೌ: ಉತ್ತರ ಪ್ರದೇಶದಲ್ಲಿ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಿದ ಆರೋಪದ ಮೇಲೆ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಷ್ಟ್ರೀಯ ಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಕೌಶಂಬಿಯಲ್ಲಿರುವ ಮಸೀದಿಯ 37 ವರ್ಷದ ಇಮಾಮ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಆಗಸ್ಟ್ 31 ರಂದು ಸಂದೀಪನ್ ಘಾಟ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ ಎಂದು ಚೈಲ್ ವೃತ್ತ ಅಧಿಕಾರಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ಮುರತ್‌ಗಂಜ್ ಪಟ್ಟಣದ ಮಸೀದಿಯ ಮಿನಾರ್ ಮೇಲೆ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಿರುವುದನ್ನು ಮುರತ್‌ಗಂಜ್ ಹೊರಠಾಣೆ ಉಸ್ತುವಾರಿ ಸಬ್-ಇನ್ಸ್‌ಪೆಕ್ಟರ್ ಅಜಿತ್ ಸಿಂಗ್ ಅವರು ಗಸ್ತು ತಿರುಗುತ್ತಿದ್ದಾಗ ಗಮನಿಸಿದರು. ಈ ಕೃತ್ಯವು "ರಾಷ್ಟ್ರೀಯ ಧ್ವಜದ ಘನತೆ ಮತ್ತು ಗೌರವವನ್ನು ಕುಗ್ಗಿಸಿದೆ" ಎಂದು ಅವರು ಹೇಳಿದ್ದಾರೆ.
ತತ್ ಕ್ಷಣವೇ ಕಾರ್ಯಪ್ರವೃತ್ತರಾದ ಸಬ್-ಇನ್ಸ್‌ಪೆಕ್ಟರ್ ಅಜಿತ್ ಸಿಂಗ್ ಇಸ್ಲಾಮಿಕ್ ಧ್ವಜವನ್ನು ತಕ್ಷಣವೇ ತೆಗೆದುಹಾಕಿಸಿದರು. ಹೊರಠಾಣೆ ಉಸ್ತುವಾರಿ ಲಿಖಿತ ದೂರಿನ ಆಧಾರದ ಮೇಲೆ, ಕೌಶಂಬಿ ಜಿಲ್ಲೆಯ ಕಾಸಿಯಾ, ಚಿಕ್ವಾನ್ ಕಾ ಪೂರ್ವಾ ನಿವಾಸಿ ಇಮಾಮ್ ಇಮ್ತಿಯಾಜ್ ಅಹ್ಮದ್ ವಿರುದ್ಧ 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement