
ರಾಯಗಢ: ಛತ್ತೀಸಗಢದ ರಾಯಗಢ ಜಿಲ್ಲೆಯ ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನ ಸ್ಥಾವರದಲ್ಲಿ ಗುರುವಾರ ನಡೆದ ಅಪಘಾತದಲ್ಲಿ ಉಪ ವ್ಯವಸ್ಥಾಪಕರೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಪ್‌ದೇವ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಹರ್‌ಪಾಲಿ ಗ್ರಾಮದ ಘಟಕದಲ್ಲಿರುವ ಸಿಂಟರ್ ಪ್ಲಾಂಟ್ ವಿಭಾಗದ ಅಂಗಳದಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಖಾರ್ಸಿಯಾ ಪಟ್ಟಣದ ಉಪ-ವಿಭಾಗದ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಪ್ರಭಾತ್ ಪಟೇಲ್ ತಿಳಿಸಿದ್ದಾರೆ.
'ಅವಘಡ'ದ ನಂತರ, ರಾಯಗಢ ಜಿಲ್ಲೆಯ ತಾರಾಪುರ ನಿವಾಸಿಯಾದ ಉಪ ವ್ಯವಸ್ಥಾಪಕ ರವೀಂದ್ರ ದನ್ಸೇನ (43) ಅವರನ್ನು ಜಿಂದಾಲ್ ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮಾರಕ ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಪೊಲೀಸರು ತಿಳಿಸಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪಟೇಲ್ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement