ಯೂರಿಯಾಗಾಗಿ ನಡುರಸ್ತೆಯಲ್ಲೇ ಜುಟ್ಟು ಹಿಡಿದು ಬಡಿದಾಡಿದ ಮಹಿಳೆಯರು! Video Viral

ತೆಲಂಗಾಣದ ಮಹಾಬುಬಾಬಾದ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ನಡು ರಸ್ತೆಯಲ್ಲೇ ಪರಸ್ಪರ ಜುಟ್ಟು ಹಿಡಿದು ಬಡಿದಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Womens holding their hair and beating each other in the market
ನಡು ರಸ್ತೆಯಲ್ಲಿ ಬಡಿದಾಡಿದ ಮಹಿಳೆಯರು
Updated on

ಅನಂತಪುರಂ: ಇಬ್ಬರು ಮಹಿಳೆಯರು ಪರಸ್ಪರ ಜುಟ್ಟು ಹಿಡಿದು ಪರಸ್ಪರ ಬಡಿದಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು.. ತೆಲಂಗಾಣದ ಮಹಾಬುಬಾಬಾದ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ನಡು ರಸ್ತೆಯಲ್ಲೇ ಪರಸ್ಪರ ಜುಟ್ಟು ಹಿಡಿದು ಬಡಿದಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಯೂರಿಯಾಗಾಗಿ ರೈತರ ಹೋರಾಟ

ಮಹಿಳೆಯರ ಈ ಗಲಾಟೆಗೆ ಯೂರಿಯಾ ಸಮಸ್ಯೆ ಕಾರಣ ಎಂದು ಹೇಳಲಾಗಿದ್ದು, ತೆಲಂಗಾಣದಲ್ಲಿ ಕೃಷಿಗೆ ಬಳಸುವ ಯೂರಿಯಾ ಕೊರತೆ ಮತ್ತು ಸರಬರಾಜಿನಲ್ಲಿನ ಗೊಂದಲ ರೈತರು ಬೀದಿಗಿಳಿಯುವಂತೆ ಮಾಡಿದೆ. ಯೂರಿಯಾ ಕೊರತೆಯಿಂದಾಗಿ ತೆಲಂಗಾಣದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಈಗ ರಸ್ತೆಗೆ ಬಂದಿವೆ.

ಇತ್ತೀಚಿನವರೆಗೂ, ಬಸ್‌ಗಳಲ್ಲಿ ಸೀಟುಗಳಿಗಾಗಿ ಮಹಿಳೆಯರು ಕಿತ್ತಾಡುವ ದೃಶ್ಯಗಳನ್ನು ನಾವು ನೋಡಿದ್ದೇವೆ. ಈಗ ಯೂರಿಯಾಕ್ಕಾಗಿ ಮಹಿಳೆಯರು ಕಚ್ಚಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಅಂತೆಯೇ ಮೆಹಬೂಬಾಬಾದ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ರಸ್ತೆಯಲ್ಲೇ ಬಡಿದಾಡಿಕೊಂಡಿರುವುದು ರಾಜ್ಯದಲ್ಲಿ ಯೂರಿಯಾಕ್ಕಾಗಿ ಕಾಯುತ್ತಿರುವ ರೈತರ ಸಂಕಷ್ಟವನ್ನು ಜಗಜ್ಜಾಹಿರು ಮಾಡಿದೆ.

ಆಗಿದ್ದೇನು?

ಮೆಹಬುಬಾಬಾದ್‌ನ ರಸಗೊಬ್ಬರ ಅಂಗಡಿಯಲ್ಲಿ ಯೂರಿಯಾಕ್ಕಾಗಿ ಹೆಚ್ಚಿನ ಸಂಖ್ಯೆಯ ರೈತರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ, ಆಧಾರ್ ಕಾರ್ಡ್ ನೋಂದಣಿಗೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ರೈತರ ನಡುವೆ ವಾಗ್ವಾದ ಪ್ರಾರಂಭವಾಯಿತು.

ಅದು ಪರಾಕಾಷ್ಠೆ ತಲುಪಿತು, ಅವರು ಪರಸ್ಪರ ಅಶ್ಲೀಲ ಪದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಪರಸ್ಪರ ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ. ಬಳಿಕ ಚಪ್ಪಲಿಯಿಂದ ಹಲ್ಲೆ ನಡೆಸಿದ್ದು, ಕೂದಲು ಹಿಡಿದು ಜಗಳವಾಡಿದರು. ಪಕ್ಕದಲ್ಲಿದ್ದವರು ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸುವವರೆಗೂ ಈ ಜಗಳ ಮುಂದುವರೆಯಿತು. ಈ ಘಟನೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಘಟನೆಯು ರಾಜ್ಯದಲ್ಲಿ ಯೂರಿಯಾ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ರೈತರು ಒಂದೇ ಚೀಲ ಯೂರಿಯಾಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಅಂತಿಮವಾಗಿ, ಅವರು ಅದನ್ನೂ ಪಡೆಯಲು ಸಾಧ್ಯವಾಗದ ಕಾರಣ ಅಸಹಾಯಕತೆ ಮತ್ತು ಆತಂಕದಿಂದ ಇಂತಹ ಘರ್ಷಣೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರ ಈ ಸಮಸ್ಯೆಯ ಬಗ್ಗೆ ತಕ್ಷಣ ಗಮನ ಹರಿಸಿ ರೈತರಿಗೆ ಅಗತ್ಯವಿರುವ ಯೂರಿಯಾ ಪೂರೈಕೆಯನ್ನು ಕ್ರಮಬದ್ಧಗೊಳಿಸಬೇಕೆಂದು ರೈತರು ಮತ್ತು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ, ಇಂತಹ ಸನ್ನಿವೇಶಗಳು ಪುನರಾವರ್ತನೆಯಾಗುವ ಅಪಾಯವಿದೆ ಎಂದೂ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com