ಸಿಯಾಚಿನ್‌ನಲ್ಲಿ ಹಿಮಪಾತ; ಮೂವರು ಸೈನಿಕರು ಹುತಾತ್ಮ

12,000 ಅಡಿ ಎತ್ತರದ ಸಿಯಾಚಿನ್ ಬೇಸ್ ಕ್ಯಾಂಪ್ ಪ್ರದೇಶದಲ್ಲಿ ಭಾನುವಾರ ಹಿಮಪಾತ ಸಂಭವಿಸಿದ್ದು, ಇಬ್ಬರು ಅಗ್ನಿವೀರರು ಸೇರಿದಂತೆ ಮೂವರು ಸೈನಿಕರು ಸಿಕ್ಕಿಬಿದ್ದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
Avalanche strikes Siachen
ಸಾಂದರ್ಭಿಕ ಚಿತ್ರ
Updated on

ಲಡಾಖ್: ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿರುವ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಹಿಮಪಾತ ಸಂಭವಿಸಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

12,000 ಅಡಿ ಎತ್ತರದ ಸಿಯಾಚಿನ್ ಬೇಸ್ ಕ್ಯಾಂಪ್ ಪ್ರದೇಶದಲ್ಲಿ ಭಾನುವಾರ ಹಿಮಪಾತ ಸಂಭವಿಸಿದ್ದು, ಇಬ್ಬರು ಅಗ್ನಿವೀರರು ಸೇರಿದಂತೆ ಮೂವರು ಸೈನಿಕರು ಸಿಕ್ಕಿಬಿದ್ದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಹಿಮಪಾತದಲ್ಲಿ ಸಿಲುಕಿದ್ದ ಸೈನಿಕರ ಶವಗಳನ್ನು ಹೊರತೆಗೆಯಲಾಯಿತು ಎಂದು ಅವರು ತಿಳಿಸಿದ್ದಾರೆ.

Avalanche strikes Siachen
Watch | ಜಮ್ಮು ಮತ್ತು ಕಾಶ್ಮೀರ: ಸರ್ಬಲ್ ಪ್ರದೇಶದಲ್ಲಿ ಹಿಮಪಾತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com