ಇಂದು ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ 12 ಸಂಸದರು ದೂರ; NDA ಅಭ್ಯರ್ಥಿ C.P ರಾಧಾಕೃಷ್ಣನ್‌ ಗೆಲುವು ಬಹತೇಕ ಖಚಿತ!

ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸಲು ಮತದಾನದ ಮುನ್ನಾದಿನದಂದು ತಮ್ಮ ತಮ್ಮ ಸಂಸದರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದವು. ಅಣಕು ಮತದಾನದ ಕಾರ್ಯಾಗಾರವನ್ನು ಸಹ ನಡೆಸಿದವು.
C P Radhakrishnan and  P Sudershan Reddy.
ಸಿ.ಪಿ. ರಾಧಾಕೃಷ್ಣನ್‌ ಮತ್ತು ಬಿ ಸುದರ್ಶನ್ ರೆಡ್ಡಿ
Updated on

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಜುಲೈ 21ರಂದು ದಿಢೀರ್‌ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ಚುನಾವಣೆ ನಡೆಯಲಿದೆ.

ಎನ್‌ಡಿಎ ಮೈತ್ರಿಕೂಟದ ಬಳಿ ಬಹುಮತ ಇರುವುದಿಂದ ಸಿ.ಪಿ. ರಾಧಾಕೃಷ್ಣನ್‌ ಅವರ ಗೆಲುವು ಬಹುತೇಕ ಖಚಿತವಾಗಿದೆ. ಎನ್‌ಡಿಎ 425 ಸಂಸದರನ್ನು ಹೊಂದಿದ್ದು, ವಿರೋಧ ಪಕ್ಷವು 324 ಸದಸ್ಯರ ಬೆಂಬಲವನ್ನು ಹೊಂದಿದ್ದು, ಎನ್‌ಡಿಎ ಅಭ್ಯರ್ಥಿ ಸಿ ಪಿ ರಾಧಾಕೃಷ್ಣನ್ ಅವರು ಇಂಡಿಯಾ ಬ್ಲಾಕ್‌ನ ನ್ಯಾಯಮೂರ್ತಿ (ನಿವೃತ್ತ) ಬಿ ಸುದರ್ಶನ್ ರೆಡ್ಡಿ ವಿರುದ್ಧ ಸ್ಪರ್ಧಿಸಿದ್ದಾರೆ.

ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸಲು ಮತದಾನದ ಮುನ್ನಾದಿನದಂದು ತಮ್ಮ ತಮ್ಮ ಸಂಸದರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದವು. ಅಣಕು ಮತದಾನದ ಕಾರ್ಯಾಗಾರವನ್ನು ಸಹ ನಡೆಸಿದವು. ಪ್ರಧಾನಿ ಮೋದಿ ಎನ್‌ಡಿಎ ಸಂಸದರಿಗೆ ಒಂದೇ ಒಂದು ಮತವನ್ನು ವ್ಯರ್ಥ ಮಾಡದೆ ಮತದಾನದಲ್ಲಿ ಸರಿಯಾಗಿ ಮತ ಚಲಾಯಿಸುವಂತೆ ಹೇಳಿದರು.

NDA ಅಥವಾ INDIA ಬಣದ ಭಾಗವಲ್ಲದ ಪಕ್ಷಗಳಲ್ಲಿ, ಸಂಸತ್ತಿನಲ್ಲಿ 11 ಸದಸ್ಯರನ್ನು ಹೊಂದಿರುವ YSRCP, NDA ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದೆ, ಆದರೆ BJD ಮತ್ತು BRS ಮತದಾನದಿಂದ ಹೊರಗುಳಿಯಲು ನಿರ್ಧರಿಸಿವೆ. ಪ್ರಸ್ತುತ ಚುನಾವಣಾ ಕಾಲೇಜಿನ ಬಲ 781 (ರಾಜ್ಯಸಭೆಯಿಂದ 238 ಮತ್ತು ಲೋಕಸಭೆಯಿಂದ 542; ಒಂದು ಲೋಕಸಭೆ ಮತ್ತು ಆರು ರಾಜ್ಯಸಭಾ ಸ್ಥಾನಗಳು ಪ್ರಸ್ತುತ ಖಾಲಿ ಇವೆ). ಇದು ಬಹುಮತದ ಸಂಖ್ಯೆಯನ್ನು 391 ಕ್ಕೆ ಇಳಿಸುತ್ತದೆ.

SAD ಯ ಒಬ್ಬ ಸದಸ್ಯ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರೂ, ಲೋಕಸಭೆಯಲ್ಲಿರುವ ಏಳು ಸ್ವತಂತ್ರ ಸದಸ್ಯರಲ್ಲಿ ಮೂವರು ತಮ್ಮ ನಿರ್ಧಾರ ತಿಳಿಸಿಲ್ಲ. ಮತ್ತೊಂದು ಬೆಳವಣಿಗೆಯೆಂದರೆ, RLP ಸಂಸದ ಹನುಮಾನ್ ಬೇನಿವಾಲ್ ಮತ್ತು ಆಜಾದ್ ಸಮಾಜ ಪಕ್ಷದ ಸಂಸದ ಚಂದ್ರಶೇಖರ್ ಆಜಾದ್ ಸಂಜೆ ತಡವಾಗಿ INDIA ಬಣದ ಅಭ್ಯರ್ಥಿ ರೆಡ್ಡಿ ಅವರನ್ನು ಭೇಟಿಯಾದರು, ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಸದಸ್ಯರು ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಸಂಸತ್ ಭವನದಲ್ಲಿ ಮತ ಚಲಾಯಿಸಲಿದ್ದಾರೆ. ಸಂಜೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

C P Radhakrishnan and  P Sudershan Reddy.
ಸೆಪ್ಟೆಂಬರ್ 9 ಉಪ ರಾಷ್ಟ್ರಪತಿ ಚುನಾವಣೆ: NDA, INDIA bloc ಕೊನೆಯ ಹಂತದ ಕಸರತ್ತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com