
ಉತ್ತರ ಪ್ರದೇಶ: ಅಪ್ರಾಪ್ತ ಹಿಂದೂ ಬಾಲಕನೊಬ್ಬನನ್ನು ಮತಾಂತರಿಸಿ, ಹೆಸರು ಬದಲಾಯಿಸಿ ಮದರಸಾಕ್ಕೆ ಸೇರಿಸಿಕೊಂಡಿದ್ದ ಆರೋಪದ ಮೇರೆಗೆ ಪ್ರಾಂಶುಪಾಲರೊಬ್ಬರನ್ನು ಬಂಧಿಸಲಾಗಿದೆ. ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದ ಬಾಲಕನ ತಂದೆ ಖಡ್ಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊಹರಗಡ್ಡಿ ಗ್ರಾಮದ ಮದರಸಾದಲ್ಲಿ ಭಾನುವಾರ ಗಲಾಟೆ ನಡೆಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಮದರಸಾ ಪ್ರಾಂಶುಪಾಲ ಮುಜಿಬುರಹ್ಮಾನ್ ತನ್ನ ಮಗನಿಗೆ ಉಚಿತ ಊಟ, ಶಿಕ್ಷಣದ ಆಮಿಷವೊಡ್ಡಿ ಮತಾಂತರಗೊಳಿಸಿದ್ದು, ಬಾಲಕನಿಗೆ ನೂರ್ ಆಲಂ ಎಂದು ಹೆಸರಿಡಲಾಗಿದೆ. ಮದರಸಾದಲ್ಲಿಯೇ ಇರಿಸಿಕೊಳ್ಳಲಾಗಿದೆ ಎಂದು ದೂರುದಾರರಾದ ರಾಬ್ರಿ ದೇವಿ ಆರೋಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಮಗನನ್ನು ವಾಪಸ್ ಮನೆಗೆ ಕಳುಹಿಸಲು ಕೋರಿದಾಗ ಆರೋಪಿಗಳು ತನ್ನನ್ನು ನಿಂದಿಸಿ ತಳ್ಳಿದ್ದಾರೆ. ಕೊಲೆ ಬೆದರಿಕೆ ಹಾಕಿದರು ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಖಡ್ಡಾ ಎಸ್‌ಎಚ್‌ಒ ಗಿರಿಜೇಶ್ ಉಪಾಧ್ಯಾಯ ಅವರು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ, 2021 ರ ಅಡಿಯಲ್ಲಿ ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಮುಜಿಬುರ್ರಹ್ಮಾನ್ ಎಂದು ಗುರುತಿಸಲಾಗಿದೆ. ಆತ ಮಹಾರಾಜ್‌ಗಂಜ್ ಜಿಲ್ಲೆಯವರಾಗಿದ್ದಾರೆ ಮತ್ತು ಪ್ರಸ್ತುತ ಮದರಸಾದಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಮದರಸಾಕ್ಕೆ ಭೇಟಿ ನೀಡಿದ ಹುಡುಗ ಅಲ್ಲಿಯೇ ಇರಲು ಪ್ರಾರಂಭಿಸಿ ಸ್ಥಳೀಯ ಹುಡುಗಿಯೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ 2015 ರಲ್ಲಿ ಜೈಲುವಾಸ ಅನುಭವಿಸಿ ಸುಮಾರು 10 ವರ್ಷಗಳ ನಂತರ ಬಿಡುಗಡೆಯಾದ ಅವರ ತಂದೆ ಮಹೇಂದ್ರ ಕುಶ್ವಾಹಾ ಅವರು ಮದರಸಾದಲ್ಲಿ ತಮ್ಮ ಮಗ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement