'ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬಂಕರ್ ನಲ್ಲಿ ಅಡಗಿ ಕುಳಿತಿದ್ದರು': ನಿವೃತ್ತ ಲೆ.ಜ. ಕೆಜೆಎಸ್ ಧಿಲ್ಲೋನ್

ANI ಗೆ ನೀಡಿದ ಸಂದರ್ಶನದಲ್ಲಿ, ಧಿಲ್ಲೋನ್, ಮೇ 10 ರಂದು ಭಾರತವು ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ನಿಖರವಾಗಿ ದಾಳಿ ಮಾಡಿತು, ಆದರೆ ಭಾರತದ ಯಾವುದೇ ಕ್ಷಿಪಣಿಗಳನ್ನು ಪಾಕಿಸ್ತಾನದ ವಾಯುನೆಲೆಗಳ ರಕ್ಷಣೆಯಿಂದ ತಡೆಹಿಡಿಯಲಾಗಲಿಲ್ಲ ಎಂದು ಹೇಳಿದ್ದಾರೆ.
'ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬಂಕರ್ ನಲ್ಲಿ ಅಡಗಿ ಕುಳಿತಿದ್ದರು': ನಿವೃತ್ತ ಲೆ.ಜ. ಕೆಜೆಎಸ್ ಧಿಲ್ಲೋನ್
Updated on

ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ (ನಿವೃತ್ತ) ಜಮ್ಮು-ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ಭಾರತ ಸೇನೆಯ ಆಪರೇಷನ್ ಸಿಂಧೂರ್ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು.

ANI ಗೆ ನೀಡಿದ ಸಂದರ್ಶನದಲ್ಲಿ, ಧಿಲ್ಲೋನ್, ಮೇ 10 ರಂದು ಭಾರತವು ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ನಿಖರವಾಗಿ ದಾಳಿ ಮಾಡಿತು, ಆದರೆ ಭಾರತದ ಯಾವುದೇ ಕ್ಷಿಪಣಿಗಳನ್ನು ಪಾಕಿಸ್ತಾನದ ವಾಯುನೆಲೆಗಳ ರಕ್ಷಣೆಯಿಂದ ತಡೆಹಿಡಿಯಲಾಗಲಿಲ್ಲ ಎಂದು ಹೇಳಿದ್ದಾರೆ.

ಮೇ 10 ರಂದು, ನಾವು ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ನಿಖರವಾಗಿ ದಾಳಿ ಮಾಡಿದಾಗ, ನಮ್ಮ ಒಂದು ಕ್ಷಿಪಣಿಯನ್ನು ಪಾಕಿಸ್ತಾನದ ವಾಯುನೆಲೆಗಳ ರಕ್ಷಣೆಯಿಂದ ತಡೆಹಿಡಿಯಲು ಸಾಧ್ಯವಾಗಲಿಲ್ಲ. ಅದು ನಮ್ಮ ಸೇನೆಯ ಗೆಲುವು ಮತ್ತು ಶಕ್ತಿ. ಪಾಕಿಸ್ತಾನ ವಾಯುಪಡೆಯ ಒಂದೇ ಒಂದು ವಿಮಾನವು ಹಾರಾಟ ನಡೆಸಿ ನಮ್ಮ ಸ್ಪೋಟಕಗಳನ್ನು ತಡೆಹಿಡಿಯಲು ಸಾಧ್ಯವಾಗದಿದ್ದಾಗ - ಅದು ಗೆಲುವು" ಎಂದು ಧಿಲ್ಲೋನ್ ಸಂದರ್ಶನದಲ್ಲಿ ದೃಢವಾಗಿ ಹೇಳಿದರು.

'ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬಂಕರ್ ನಲ್ಲಿ ಅಡಗಿ ಕುಳಿತಿದ್ದರು': ನಿವೃತ್ತ ಲೆ.ಜ. ಕೆಜೆಎಸ್ ಧಿಲ್ಲೋನ್
ಆಪರೇಷನ್ ಸಿಂಧೂರ್ ವೇಳೆಯ 'ಅಪವಿತ್ರ ಮೈತ್ರಿ'ಯನ್ನು ಸದ್ದಿಲ್ಲದೆ ಒಪ್ಪಿಕೊಂಡ ಮೋದಿ ಸರ್ಕಾರ! ಚೀನಾ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದ್ದೆಯೇ?: ಕಾಂಗ್ರೆಸ್

ಪಾಕಿಸ್ತಾನದ ವಾಯುಪಡೆಯು ಭಾರತೀಯ ಸ್ಪೋಟಕಗಳನ್ನು ತಡೆಹಿಡಿಯಲು ಸಾಧ್ಯವಾಗದಿದ್ದಾಗ, ಅವರ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು(DGMO) ಮೇ 10 ರಂದು ಮಧ್ಯಾಹ್ನ 3:35 ಕ್ಕೆ ಭಾರತದ DGMO ಅವರನ್ನು ಸಂಪರ್ಕಿಸಿ ಕದನ ವಿರಾಮಕ್ಕಾಗಿ ಬೇಡಿಕೊಂಡರು ಎಂದರು.

ಪಾಕಿಸ್ತಾನವು ಅಮೆರಿಕ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿಂದ ಕದನ ವಿರಾಮಕ್ಕಾಗಿ ಮಧ್ಯಸ್ಥಿಕೆಯನ್ನು ಕೋರಿತು, ಇದು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ವಿರುದ್ಧ ಭಾರತದ ನಿಲುವಿಗೆ ವಿರುದ್ಧವಾಗಿದೆ.

ಪಾಕಿಸ್ತಾನದ ಡಿಜಿಎಂಒ ಮೇ 10 ರಂದು ನಮ್ಮ ಡಿಜಿಎಂಒ ಅವರನ್ನು ಕರೆದು ಅಕ್ಷರಶಃ ಕದನ ವಿರಾಮಕ್ಕಾಗಿ ಬೇಡಿಕೊಂಡಿದ್ದು ಅದು ನಮ್ಮ ಗೆಲುವು. ಅವರು ಅಮೆರಿಕ ಅಥವಾ ಸೌದಿ ಅರೇಬಿಯಾಕ್ಕೆ ಓಡಿ ಹೋಗಿ ಮಧ್ಯಸ್ಥಿಕೆ ಮತ್ತು ಕದನ ವಿರಾಮವನ್ನು ಕೇಳಿದಾಗ ಅದು ಗೆಲುವು. ನಾವು ನೀತಿಯಾಗಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಬಯಸುವುದಿಲ್ಲ ಎಂದು ಹೇಳಿದಾಗ - ಅದು ಗೆಲುವು" ಎಂದು ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲನ್ ಹೇಳಿದರು.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಆಪರೇಷನ್ ಸಿಂಧೂರ್ ಸಮಯದಲ್ಲಿ ಬಂಕರ್‌ನಲ್ಲಿ ಅಡಗಿಕೊಂಡು ಸಾರ್ವಜನಿಕರಿಂದ ತಪ್ಪಿಸಲು ಫೀಲ್ಡ್ ಮಾರ್ಷಲ್ ಸ್ಥಾನದಲ್ಲಿ ಕುಳಿತಿದ್ದರು ಎಂದು ಹೇಳಿದರು. ಕಾರ್ಯಾಚರಣೆಯ ಸಮಯದಲ್ಲಿ ಬಂಕರ್‌ಗೆ ಹೋದ ಏಕೈಕ ಸೇನಾ ಮುಖ್ಯಸ್ಥ ಮತ್ತು ಸಾರ್ವಜನಿಕ ಪರಿಶೀಲನೆಯನ್ನು ತಪ್ಪಿಸಲು ಫೀಲ್ಡ್ ಮಾರ್ಷಲ್‌ಗೆ ಏರಿದ ಏಕೈಕ ಸೇನಾ ಮುಖ್ಯಸ್ಥ. ಅಲ್ಲದೆ, SCO ಸಭೆಗೆ ರಾಷ್ಟ್ರದ ಮುಖ್ಯಸ್ಥರೊಂದಿಗೆ ಇರುವ ಏಕೈಕ ಸೇನಾ ಮುಖ್ಯಸ್ಥ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಎಂದರು.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್ ಅವರನ್ನು ಮೇ 20 ರಂದು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಲಾಯಿತು, ಭಾರತ ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ 13 ದಿನಗಳ ನಂತರ ಮತ್ತು ಯುದ್ಧ ನಿಲ್ಲಿಸುವ ಒಪ್ಪಂದಕ್ಕೆ ಬಂದ 10 ದಿನಗಳ ನಂತರ. ಮಾಜಿ ಅಧ್ಯಕ್ಷ ಅಯೂಬ್ ಖಾನ್ ನಂತರ ಈ ಹುದ್ದೆಗೆ ಬಡ್ತಿ ಪಡೆದ ಎರಡನೇ ವ್ಯಕ್ತಿ ಮುನೀರ್ ಮತ್ತು ಸ್ವತಂತ್ರ ಪಾಕಿಸ್ತಾನದ ಮೊದಲ ಸೇನಾ ಮುಖ್ಯಸ್ಥರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com