Cancer: ಭಾರತದಲ್ಲಿ ಹೆಚ್ಚಾಗಿ ಮಹಿಳೆಯರಿಗೆ ಯಾಕೆ ಕ್ಯಾನ್ಸರ್ ಬರುತ್ತದೆ? ಆದ್ರೆ ಸಾಯುವವರಲ್ಲಿ ಪುರುಷರೇ ಅಧಿಕ!

ಪುರುಷರಲ್ಲಿ ಶ್ವಾಸಕೋಶ, ಬಾಯಿ ಕ್ಯಾನ್ಸರ್ ಮತ್ತು ಪ್ರಾಸ್ಪೇಟ್ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ತಂಬಾಕಿನಿಂದ ಬರುವ ಕ್ಯಾನ್ಸರ್ ಶೇ. 40 ರಷ್ಟು ತಡೆಗಟ್ಟಬಹುದಾದ ಕ್ಯಾನ್ಸರ್ ಆಗಿದೆ. ಆದರೆ, ಬಾಯಿ, ಶ್ವಾಸ ಕೋಶ ಕ್ಯಾನ್ಸರ್ ತುಂಬಾ ಅಪಾಯಕಾರಿಯಾಗಿದೆ.
Casual Images
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತದಲ್ಲಿ ಮಹಿಳೆಯರಿಗೆ ಹೆಚ್ಚಾಗಿ ಕ್ಯಾನ್ಸರ್ ಬರುತ್ತಿದೆ. ಆದ್ರೆ ಸಾಯುವವರಲ್ಲಿ ಪುರುಷರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ದೇಶದ ಇತ್ತೀಚಿನ ಕ್ಯಾನ್ಸರ್ ನೋಂದಣಿ ಅಧ್ಯಯನದಲ್ಲಿ ಇದು ಬಹಿರಂಗಗೊಂಡಿದೆ. ಎಲ್ಲಾ ಹೊಸ ಪ್ರಕರಣಗಳಲ್ಲಿ ಕೇವಲ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಕ್ಯಾನ್ಸರ್ ಹೊಂದಿದ್ದಾರೆ. ಆದರೆ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ.

2022 ರಲ್ಲಿ ವಿಶ್ವದಾದ್ಯಂತ ಪ್ರತಿ 100,000 ಜನರಿಗೆ, ಸರಾಸರಿ 197 ಜನರಲ್ಲಿ ಕ್ಯಾನ್ಸರ್ ರೋಗನಿರ್ಣಯ ಮಾಡಲಾಗಿತ್ತು. ವರ್ಲ್ಡ್ ಕ್ಯಾನ್ಸರ್ ರಿಸರ್ಚ್ ಫಂಡ್ ಪ್ರಕಾರ, 186 ಮಹಿಳೆಯರಿಗೆ ಹೋಲಿಸಿದರೆ ಪುರುಷರ ಸಂಖ್ಯೆ 212 ಆಗಿತ್ತು. 2022 ರಲ್ಲಿ ಜಾಗತಿಕವಾಗಿ ಸುಮಾರು 20 ಮಿಲಿಯನ್ ಕ್ಯಾನ್ಸರ್ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಸುಮಾರು 10.3 ಮಿಲಿಯನ್ ಪುರುಷರು ಮತ್ತು9.7 ಮಿಲಿಯನ್ ನಷ್ಟು ಮಹಿಳೆಯರಲ್ಲಿ ಕ್ಯಾನ್ಸರ್ ಇತ್ತು.

ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಅಮೆರಿಕದಲ್ಲಿ ಕ್ಯಾನ್ಸರ್ ನ ಅಂದಾಜು ಜೀವಿತಾವಧಿ ಅಪಾಯವು ಪುರುಷರು ಮತ್ತು ಮಹಿಳೆಯರಲ್ಲಿ ಸಮಾನವಾಗಿರುತ್ತದೆ. ಭಾರತದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠ ಮತ್ತು ಅಂಡಾಶಯ ಕ್ಯಾನ್ಸರ್ ಸಾಮಾನ್ಯವಾಗಿದೆ. ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳು ಶೇ. 40 ರಷ್ಟು ಸ್ತ್ರೀಯರಲ್ಲಿ ಕಂಡುಬಂದಿದೆ.

ಮಹಿಳೆಯರಲ್ಲಿನ ಕ್ಯಾನ್ಸರ್ ಗಳು:

ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಂತಹ ಸೋಂಕುಗಳಿಗೆ ಸಂಬಂಧಿಸಿದೆ. ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಸಾಮಾನ್ಯವಾಗಿ ಹಾರ್ಮೋನುಗಳ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಈ ಹೆಚ್ಚುತ್ತಿರುವ ಹಾರ್ಮೋನ್-ಸಂಬಂಧಿತ ಕ್ಯಾನ್ಸರ್‌ಗಳು ಪ್ರಕರಣಗಳು ವಿಳಂಬಿತ ಗರ್ಭಧಾರಣೆ, ಕಡಿಮೆ ಸ್ತನ್ಯಪಾನ, ಸ್ಥೂಲಕಾಯತೆ ಮತ್ತು ಕುಳಿತುಕೊಳ್ಳುವ ಅಭ್ಯಾಸ ಮತ್ತಿತರ ಜೀವಶೈಲಿಗಳೊಂದಿಗೆ ಸಂಬಂಧಿಸಿವೆ.

ಪುರುಷರಲ್ಲಿನ ಕ್ಯಾನ್ಸರ್:

ಪುರುಷರಲ್ಲಿ ಶ್ವಾಸಕೋಶ, ಬಾಯಿ ಕ್ಯಾನ್ಸರ್ ಮತ್ತು ಪ್ರಾಸ್ಪೇಟ್ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ತಂಬಾಕಿನಿಂದ ಬರುವ ಕ್ಯಾನ್ಸರ್ ಶೇ. 40 ರಷ್ಟು ತಡೆಗಟ್ಟಬಹುದಾದ ಕ್ಯಾನ್ಸರ್ ಆಗಿದೆ. ಆದರೆ, ಬಾಯಿ, ಶ್ವಾಸ ಕೋಶ ಕ್ಯಾನ್ಸರ್ ತುಂಬಾ ಅಪಾಯಕಾರಿಯಾಗಿದೆ.

ಹಾಗಾದರೆ ಭಾರತದಲ್ಲಿ ಏನು ನಡೆಯುತ್ತಿದೆ? ಮಹಿಳೆಯರಲ್ಲಿ ಬೇಗನೆ ರೋಗ ನಿರ್ಣಯವಾಗುತ್ತಿದೆಯೇ? ಪುರುಷರ ಕ್ಯಾನ್ಸರ್‌ಗಳು ಹೆಚ್ಚು ಆಕ್ರಮಣಕಾರಿಯೇ ಅಥವಾ ಧೂಮಪಾನ ಮತ್ತು ತಂಬಾಕು ಜಗಿಯುವಂತಹ ಅಭ್ಯಾಸಗಳಿಂದ ನಿರ್ಲಕ್ಷ್ಯ ವಹಿಸುತ್ತಿದ್ದಾರೆಯೇ ಎನ್ನುವ ಗೊಂದಲ ದೇಶದಲ್ಲಿ ಸಾಮಾನ್ಯವಾಗಿದೆ.

ಮಹಿಳೆಯರಲ್ಲಿ ಸಾವಿನ ಸಂಖ್ಯೆ ಕಡಿಮೆ: ಜಾಗೃತಿ ಅಭಿಯಾನಗಳು ಮತ್ತು ಸುಧಾರಿತ ಸೌಲಭ್ಯಗಳಿಂದ ಮಹಿಳೆಯರಲ್ಲಿ ಕ್ಯಾನ್ಸರ್‌ಗಳು ಸಾಮಾನ್ಯವಾಗಿ ಮೊದಲೇ ಪತ್ತೆಯಾಗುತ್ತವೆ. ಹೀಗಾಗಿ ಮಹಿಳೆಯರಲ್ಲಿ ಸಾವಿನ ಸಂಖ್ಯೆ ಕಡಿಮೆ.

ಪುರುಷರಲ್ಲಿ ಸಾವಿನ ಸಂಖ್ಯೆ ಹೆಚ್ಚಳ: ಪುರುಷರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಅವರ ಕ್ಯಾನ್ಸರ್‌ಗಳು ಹೆಚ್ಚಾಗಿ ಜೀವನಶೈಲಿಯೊಂದಿಗೆ ಸಂಬಂಧ ಹೊಂದಿವೆ. ತಂಬಾಕು ಮತ್ತು ಆಲ್ಕೋಹಾಲ್ ನಿಂದ ಶ್ವಾಸ ಕೋಶ ಮತ್ತು ಬಾಯಿ ಕ್ಯಾನ್ಸರ್ ಉಂಟಾಗುತ್ತದೆ. ಎರಡು ಕೂಡಾ ಅಪಾಯಕಾರಿಯಾಗಿದ್ದು, ಚಿಕಿತ್ಸೆಗೆ ಅಷ್ಟಾಗಿ ಸ್ಪಂದಿಸುವುದಿಲ್ಲ. ಪುರುಷರು ಸಾಮಾನ್ಯವಾಗಿ ಬೇಗನೆ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ.

"ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ಮಹಿಳೆಯರ ಆರೋಗ್ಯದತ್ತ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದಾಗಿ ಆದಷ್ಟು ಬೇಗನೆ ಕ್ಯಾನ್ಸರ್‌ಗಳನ್ನು ಪತ್ತೆಹಚ್ಚಲಾಗುತ್ತದೆ. ಪುರುಷರಿಗೆ ಕ್ಯಾನ್ಸರ್ ಬಂದಿರುವುದು ತಿಳಿಯುವಷ್ಟರಲ್ಲಿ ಅದು ಕೊನೆಯ ಅಂಚಿಗೆ ತಲುಪಿರುತ್ತದೆ ಎಂದು ಎಂದು ಕ್ಯಾನ್ಸರ್ ತಜ್ಞ ಮತ್ತು ಹೆಲ್ತ್ ಇನ್ನೋವೇಶನ್ ಮತ್ತು ಪಾಲಿಸಿ ಫೌಂಡೇಷನ್ (CHIP) ಮುಖ್ಯಸ್ಥ ರವಿ ಮೆಹ್ರೋತ್ರಾ ಹೇಳಿದರು.

Casual Images
ತೆರೆ ಮೇಲೆ ಬರಲಿದೆ ನಟ ಶಿವರಾಜ್‌ಕುಮಾರ್ ಕ್ಯಾನ್ಸರ್ ಪ್ರಯಾಣ; 'Survivor' ಚಿತ್ರಕ್ಕೆ ಪ್ರದೀಪ್ ಕೆ ಶಾಸ್ತ್ರಿ ಆ್ಯಕ್ಷನ್ ಕಟ್

"ಮಹಿಳೆಯರು ಸಾಮಾನ್ಯವಾಗಿ ಗರ್ಭದಾರಣೆ ಸಂದರ್ಭದಲ್ಲಿ ಆಗಾಗ್ಗೆ ವೈದ್ಯರನ್ನು ಸಂಪರ್ಕಿಸುತ್ತಾರೆ. ಆದರೆ ಅನೇಕ ಪುರುಷರು ತಮ್ಮ ಇಡೀ ಜೀವನದಲ್ಲಿ ಎಂದಿಗೂ ವೈದ್ಯರನ್ನು ನೋಡದೆ ಇರುವವರು ಇದ್ದಾರೆ ಎನ್ನುತ್ತಾರೆ ಡಾ.ಮೆಹ್ರೋತ್ರಾ.

ಭಾರತದಲ್ಲಿನ ಪ್ರತಿ 100 ಜನರಲ್ಲಿ 11 ಜನರು ತಮ್ಮ ಜೀವನದ ಒಂದು ಹಂತದಲ್ಲಿ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಡೇಟಾ ತೋರಿಸುತ್ತದೆ. 2024 ರಲ್ಲಿ ಅಂದಾಜು 1.56 ಮಿಲಿಯನ್ ಪ್ರಕರಣಗಳು ಮತ್ತು 874,000 ಸಾವುಗಳನ್ನು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com