TMC, ಇತರ ಪಕ್ಷಗಳು ಮುಸ್ಲಿಮರನ್ನು ಮತಕ್ಕಾಗಿ ಬಳಸಿಕೊಂಡಿವೆ; ಅವರಿಗೆ ಏನನ್ನೂ ಮಾಡಿಲ್ಲ: ಓವೈಸಿ

"ನಿಮ್ಮ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಲ್ಲ ಮುಸ್ಲಿಂ ಸಮುದಾಯದ ನಾಯಕರನ್ನೇ ಆಯ್ಕೆ ಮಾಡುವ ಸಮಯ ಬಂದಿದೆ" ಎಂದು ಓವೈಸಿ ಹೇಳಿದರು.
Asaduddin Owaisi
ಅಸಾದುದ್ದೀನ್ ಓವೈಸಿ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಇತರ ಪಕ್ಷಗಳು ಮುಸ್ಲಿಮರನ್ನು ಕೇವಲ ಮತಗಳಿಗಾಗಿ ಬಳಸಿಕೊಂಡಿವೆ. ಆದರೆ ಸಮುದಾಯದ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬುಧವಾರ ಆರೋಪಿಸಿದ್ದಾರೆ.

ಹುಮಾಯೂನ್ ಕಬೀರ್ ನೇತೃತ್ವದ ಎಜೆಯುಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ನೌಡಾದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಕಳೆದ 50 ವರ್ಷಗಳಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಕಾಂಗ್ರೆಸ್, ಎಡರಂಗ ಮತ್ತು ಟಿಎಂಸಿಗೆ ಮತ ಹಾಕಿದ್ದಾರೆ. ಆದರೆ ಅವರ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂದರು.

"ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು, ವಿಧಾನಸಭೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆಯುವುದಕ್ಕಾಗಿ ಮತ್ತು ಅವರ ನಿಜವಾದ ಅಭಿವೃದ್ಧಿಗಾಗಿ, ನಾವು ಕಬೀರ್ ಅವರೊಂದಿಗೆ ಕೈಜೋಡಿಸಿದ್ದೇವೆ. ಒಟ್ಟಾಗಿ, ನಾವು ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ಆಘಾತ ನೀಡುತ್ತೇವೆ" ಎಂದು ಓವೈಸಿ ಪ್ರತಿಪಾದಿಸಿದರು.

Asaduddin Owaisi
Watch | 'ನೀವು ವಿಶ್ವಗುರುವಾಗಲು ಬಯಸಿದರೆ…': ಪ್ರಧಾನಿ ಮೋದಿಗೆ ಓವೈಸಿ ದೊಡ್ಡ ಸಂದೇಶ

"ನಿಮ್ಮ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಲ್ಲ ಮುಸ್ಲಿಂ ಸಮುದಾಯದ ನಾಯಕರನ್ನೇ ಆಯ್ಕೆ ಮಾಡುವ ಸಮಯ ಬಂದಿದೆ" ಎಂದು ಓವೈಸಿ ಹೇಳಿದರು.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com