Women Reservation: ಮಹಿಳೆಯರಿಗೆ ಬಂಪರ್ ಗಿಫ್ಟ್ ಕೊಡುತ್ತಾ ಕೇಂದ್ರ ಸರ್ಕಾರ? ಏ.16-18 ವಿಶೇಷ ಅಧಿವೇಶನ ಸಾಧ್ಯತೆ

ಪ್ರಸ್ತುತ ಬಜೆಟ್ ಅಧಿವೇಶನ ಇಂದು ಗುರುವಾರ ಅಂತ್ಯಗೊಳ್ಳಲಿದ್ದು, ಅದನ್ನುಅನಿರ್ದಿಷ್ಟಾವಧಿಗೆ ಮುಂದೂಡದೆ, ಸರ್ಕಾರ ಅದನ್ನು ಸ್ಥಗಿತಗೊಳಿಸಿ, ತಮಿಳುನಾಡು ವಿಧಾನಸಭೆ ಚುನಾವಣೆ ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ (ಏಪ್ರಿಲ್ 23 ಮತ್ತು 29) ಮುನ್ನ ವಿಶೇಷ ಅಧಿವೇಶನವನ್ನು ಕರೆಯುವ ಸಾಧ್ಯತೆ ಇದೆ.
Lok Sabha
ಲೋಕಸಭೆ
Updated on

ನವದೆಹಲಿ: ಮುಂದಿನ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಹೆಚ್ಚಿಸಿ, ಅದರಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಮಾಡುವ ಮಸೂದೆ ಮಂಡಿಸಲು ಏಪ್ರಿಲ್ 16ರಿಂದ 18ರವರೆಗೆ ವಿಶೇಷ ಸಂಸತ್ ಅಧಿವೇಶನವನ್ನು ಕೇಂದ್ರ ಸರ್ಕಾರ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಬಜೆಟ್ ಅಧಿವೇಶನ ಇಂದು ಗುರುವಾರ ಅಂತ್ಯಗೊಳ್ಳಲಿದ್ದು, ಅದನ್ನುಅನಿರ್ದಿಷ್ಟಾವಧಿಗೆ ಮುಂದೂಡದೆ, ಸರ್ಕಾರ ಅದನ್ನು ಸ್ಥಗಿತಗೊಳಿಸಿ, ತಮಿಳುನಾಡು ವಿಧಾನಸಭೆ ಚುನಾವಣೆ (ಏಪ್ರಿಲ್ 23) ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ (ಏಪ್ರಿಲ್ 23 ಮತ್ತು 29) ಮುನ್ನ ವಿಶೇಷ ಅಧಿವೇಶನವನ್ನು ಕರೆಯುವ ಸಾಧ್ಯತೆ ಇದೆ.

ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದಿಲ್ಲ; ನಿರ್ದಿಷ್ಟ ದಿನಾಂಕದಲ್ಲಿ ಮತ್ತೆ ಸಭೆ ನಡೆಯಲಿದೆ ಎಂದು ಘೋಷಿಸಲಾಗುತ್ತದೆ. ಈ ತಿಂಗಳಲ್ಲೇ ಮತ್ತೆ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Lok Sabha
'ಮಹಿಳಾ ಮೀಸಲಾತಿ ಬಂದರೆ ನನ್ನ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ; ಶಾಸಕರು ಫಾರಿನ್ ಟ್ರಿಪ್ ಹೋದ್ರೆ ಏನು ತಪ್ಪು'?: ಕೆ.ಎನ್ ರಾಜಣ್ಣ

ಮಹಿಳಾ ಮೀಸಲು ಕಾಯ್ದೆಯನ್ನು ಶೀಘ್ರ ಜಾರಿಗೆ ತರುವ ಉದ್ದೇಶದಿಂದ, ಸರ್ಕಾರ ಇತ್ತೀಚೆಗೆ ಕ್ಷೇತ್ರ ಮರುವಿಂಗಡಣೆ (delimitation) ಪ್ರಕ್ರಿಯೆಯನ್ನು ಪ್ರಸ್ತಾಪಿಸಿದೆ. 2011 ಜನಗಣತಿಯ ಆಧಾರದ ಮೇಲೆ ಜಾರಿಗೆ ತರಲು, ಲೋಕಸಭೆ ಹಾಗೂ ವಿಧಾನಸಭೆ ಸ್ಥಾನಗಳನ್ನು ಸುಮಾರು 50 ಶೇಕಡಾ ಹೆಚ್ಚಿಸುವ ಪ್ರಸ್ತಾವನೆಯೂ ಇದೆ.

ಗೃಹ ಸಚಿವ ಅಮಿತ್ ಶಾ ಅವರು ಕೆಲವು ಎನ್‌ಡಿಎ ಮೈತ್ರಿ ಪಕ್ಷಗಳು ಮತ್ತು ಕೆಲವು ಕಾಂಗ್ರೆಸ್ ಹೊರಗಿನ ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದರೂ, ಕಾಂಗ್ರೆಸ್ ಮತ್ತು ಟಿಎಂಸಿ ಜೊತೆ ಇನ್ನೂ ಸಮಾಲೋಚನೆ ನಡೆದಿಲ್ಲ. ಈ ವಿಷಯದ ಬಗ್ಗೆ ಎಲ್ಲಾ ಪಕ್ಷಗಳ ಸಭೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.

ಲೋಕಸಭೆ ಸ್ಥಾನಗಳನ್ನು ಮಹಿಳೆಯರಿಗೆ ಶೇಕಡಾ 50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿ, ಇದರಿಂದ ದಕ್ಷಿಣ, ಈಶಾನ್ಯ ಮತ್ತು ಪಶ್ಚಿಮ ಭಾರತದ ಸಣ್ಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲು ನೀಡುವ ವ್ಯವಸ್ಥೆಯನ್ನು 2023ರಲ್ಲಿ ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೊಳಿಸಲಾಗಿದ್ದರೂ, ಅದು ಕ್ಷೇತ್ರ ಮರುಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಜಾರಿಗೆ ಬರಲಿದೆ.

ಪ್ರಸ್ತುತ 543 ಸ್ಥಾನಗಳಿರುವ ಲೋಕಸಭೆ ಕ್ಷೇತ್ರಗಳನ್ನು 816ಕ್ಕೆ ಹೆಚ್ಚಿಸಿ, ಅದರಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಮಾಡುವ ಯೋಜನೆ ಇದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಇರುವ ಮೀಸಲಾತಿಯೊಂದಿಗೆ “ಲಂಬ” ರೀತಿಯಲ್ಲಿ ಮಹಿಳಾ ಮೀಸಲಾತಿಯನ್ನೂ ಜಾರಿಗೊಳಿಸಲಾಗುತ್ತದೆ. ಕ್ಷೇತ್ರಗಳ ಮರುಹಂಚಿಕೆಯನ್ನು 2027 ಜನಗಣತಿಯ ಬದಲು 2011 ಜನಗಣತಿಯ ಆಧಾರದ ಮೇಲೆ ಮಾಡಲು ಉದ್ದೇಶಿಸಲಾಗಿದೆ.ಇದೇ ರೀತಿಯ ಕ್ರಮವನ್ನು ರಾಜ್ಯ ವಿಧಾನಸಭೆಗಳಿಗೂ ಅನ್ವಯಿಸಲಾಗುತ್ತದೆ.

ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ತಿದ್ದುಪಡಿ ತರಲು ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಕ್ಷೇತ್ರ ಮರುವಿಂಗಡಣೆ ಕಾಯ್ದೆಗೆ ತಿದ್ದುಪಡಿ ತರಲು ಮತ್ತೊಂದು ಸಾಮಾನ್ಯ ಮಸೂದೆ ಮಂಡಿಸಲಾಗುತ್ತದೆ.

ಸಂಸತ್ತು ಈ ಮಸೂದೆಗಳನ್ನು ಅಂಗೀಕರಿಸಿದ ಬಳಿಕ, ಅವು 2029ರ ಮಾರ್ಚ್ 31ರಿಂದ ಜಾರಿಗೆ ಬರಲಿದ್ದು, ಮುಂದಿನ ಲೋಕಸಭೆ ಚುನಾವಣೆ ಹಾಗೂ ಒಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ.

ಪ್ರಸ್ತಾವನೆ

  • ಬಜೆಟ್ ಅಧಿವೇಶನವು ಇಂದು ಗುರುವಾರ ಅಂತ್ಯಗೊಳ್ಳಬೇಕಿದೆ

  • ಆದರೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಸಾಧ್ಯತೆ ಕಡಿಮೆ

  • ಏಪ್ರಿಲ್ ಮೂರನೇ ವಾರದಲ್ಲಿ 2–3 ದಿನಗಳ ಕಾಲ ಮತ್ತೆ ಅಧಿವೇಶನ ಕರೆಯಲು ಸರ್ಕಾರ ಯೋಜನೆ

  • ಲೋಕಸಭೆ ಸ್ಥಾನಗಳನ್ನು 816ಕ್ಕೆ ಹೆಚ್ಚಿಸುವ ಯೋಜನೆ, ಅದರಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲು

  • ನಾರಿ ಶಕ್ತಿ ವಂದನ ಅಧಿನಿಯಮ ತಿದ್ದುಪಡಿ ಮಾಡಲು ಸಂವಿಧಾನ ತಿದ್ದುಪಡಿ ಮಸೂದೆ ತರಲು ಉದ್ದೇಶ

  • ಕ್ಷೇತ್ರಮರುವಿಂಗಡಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಮತ್ತೊಂದು ಮಸೂದೆ

  • ಕ್ಷೇತ್ರ ಮರುಹಂಚಿಕೆ 2011ರ ಜನಗಣತಿಯ ಆಧಾರದ ಮೇಲೆ ನಡೆಯಲಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com