ಆಶಾ ಭೋಸ್ಲೆ ಅಂತಿಮ ದರ್ಶನ ಪಡೆದು, ಕಣ್ಣೀರ ವಿದಾಯ ಹೇಳಿದ ಸಚಿನ್, ಮೊಹಮ್ಮದ್ ಸಿರಾಜ್! Video

ಈ ವಿಡಿಯೋವನ್ನು ಸುದ್ದಿಸಂಸ್ಥೆ ಪಿಟಿಐ ಹಂಚಿಕೊಂಡಿದೆ. ಒಬ್ಬರು ಮಹಿಳೆಯೊಂದಿಗೆ ಮಾತನಾಡುತ್ತಾ ಎಮೋಷನಲ್ ಆಗಿರುವ ಸಚಿನ್ ತೆಂಡೊಲ್ಕರ್, ಕಣ್ಣಲ್ಲಿ ನೀರು ಬರುವ ದೃಶ್ಯ ವಿಡಿಯೋದಲ್ಲಿದೆ.
Sachin Tendulkar and his wife anjali
ಸಚಿನ್ ತೆಂಡೊಲ್ಕರ್ ಮತ್ತು ಅವರ ಪತ್ನಿ ಅಂಜಲಿ
Updated on

ಮುಂಬೈ: ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ಇಹಲೋಕ ತ್ಯಜಿಸಿದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅಂತಿಮ ದರ್ಶನ ಪಡೆದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೊಲ್ಕರ್ ಕಣ್ಣೀರ ವಿದಾಯ ಹೇಳಿದ್ದಾರೆ.

ಮುಂಬೈನ ಲೋವರ್ ಪರೇಲ್‌ನ ಗ್ರಾಂಡೆಯಲ್ಲಿರುವ ಆಶಾ ಭೋಂಸ್ಲೆ ಅವರ ನಿವಾಸದಲ್ಲಿ ಸೋಮವಾರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಸಚಿನ್ ತೆಂಡೊಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಶ್ರದ್ದಾಂಜಲಿ ಸಲ್ಲಿಸಿದರು. ಈ ವೇಳೆ ಸಚಿನ್ ಅವರ ಕಣ್ಣೀರಿಟ್ಟರು.

ಈ ವಿಡಿಯೋವನ್ನು ಸುದ್ದಿಸಂಸ್ಥೆ ಪಿಟಿಐ ಹಂಚಿಕೊಂಡಿದೆ. ಒಬ್ಬರು ಮಹಿಳೆಯೊಂದಿಗೆ ಮಾತನಾಡುತ್ತಾ ಎಮೋಷನಲ್ ಆಗಿರುವ ಸಚಿನ್ ತೆಂಡೊಲ್ಕರ್, ಕಣ್ಣಲ್ಲಿ ನೀರು ಬರುವ ದೃಶ್ಯ ವಿಡಿಯೋದಲ್ಲಿದೆ.

ಇದಕ್ಕೂ ಮುನ್ನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮರಾಠಿಯಲ್ಲಿ Tai (ಅಕ್ಕ) ಎಂದು ಉಲ್ಲೇಖಿಸಿದ್ದ ಸಚಿನ್ ತೆಂಡೊಲ್ಕರ್, ಭಾರತಕ್ಕೆ ಮತ್ತು ಪ್ರಪಂಚದಾದ್ಯಂತದ ಸಂಗೀತ ಪ್ರೇಮಿಗಳಿಗೆ ತೀವ್ರ ದುಃಖದ ದಿನ. ನಮಗೆ, ಆಶಾ ತಾಯಿ ಕುಟುಂಬವಾಗಿತ್ತು. ನಿಮ್ಮ ಕಳೆದುಕೊಂಡರಿಂದ ಆಗುತ್ತಿರುವ ನಷ್ಟಕ್ಕೆ ಪದಗಳಲ್ಲಿ ಹೇಳಲು ಆಗುತ್ತಿಲ್ಲ. ಒಂದು ಕ್ಷಣ ಹೃದಯವು ಮೌನವಾಗುತ್ತದೆ. ಮುಂದೆ ಅವರು ನಮಗೆಲ್ಲರಿಗೂ ಗಿಫ್ಟ್ ಆಗಿ ನೀಡಿದ ಅಸಂಖ್ಯಾತ ಸುಮಧುರ ಹಾಡುಗಳ ಮೂಲಕ ಕೇಳುತ್ತದೆ ಎಂದು ಬರೆದುಕೊಂಡಿದ್ದರು.

ಈ ಮಧ್ಯೆ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಆಶಾ ಭೋಸ್ಲೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ದಾಂಜಲಿ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com