ಇದು ಮಹಿಳಾ ಮೀಸಲಾತಿ ಮಸೂದೆ ಅಲ್ಲ, ಸಂವಿಧಾನದ ಮೇಲೆ ಮನುವಾದ ಹೇರುವ ಮಸೂದೆ: ರಾಹುಲ್ ಗಾಂಧಿ

ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಇದು ಮಹಿಳಾ ಮೀಸಲಾತಿ ಮಸೂದೆಯೇ ಅಲ್ಲ; ಇದು ಭಾರತದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಪ್ರಯತ್ನ ಎಂದು ಹೇಳಿದರು.
Rahul Gandhi
ರಾಹುಲ್ ಗಾಂಧಿ
Updated on

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಇದು ಮಹಿಳಾ ಮೀಸಲಾತಿ ಮಸೂದೆಯೇ ಅಲ್ಲ; ಇದು ಭಾರತದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಪ್ರಯತ್ನ ಎಂದು ಹೇಳಿದರು. 2023ರಲ್ಲಿ ಇದೇ ಸದನದಲ್ಲಿ ಮಸೂದೆ ಅಂಗೀಕರಿಸಲ್ಪಟ್ಟಿದ್ದರೂ ಇನ್ನೂ ಏಕೆ ಬಾಕಿ ಉಳಿದಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಮಹಿಳೆಯರು ದೇಶದ ಕೇಂದ್ರ ಶಕ್ತಿ. ನಾವೆಲ್ಲರೂ ನಮ್ಮ ಜೀವನದಲ್ಲಿ ತಾಯಿ ಮತ್ತು ಸಹೋದರಿಯ ರೂಪದಲ್ಲಿ ಮಹಿಳೆಯರಿದ್ದಾರೆ ಎಂದು ಹೇಳಿದರು.

ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಬಹಳಷ್ಟು ಕಲಿತಿದ್ದೇವೆ. ತಾಯಿ, ಸಹೋದರಿ, ಪತ್ನಿಯರಿಂದ... ಪ್ರಧಾನಿಗೆ ಹೆಂಡತಿ ಇಲ್ಲ! ನನ್ನ ಸಹೋದರಿ ನಿನ್ನೆ ತಮ್ಮ ಭಾಷಣದಲ್ಲಿ ಅಮಿತ್ ಶಾ ಅವರನ್ನು ನಗುವಂತೆ ಮಾಡಿದರು... ನಾನು ಇದನ್ನು ಕಲಿಯಬೇಕು. ಭಾರತೀಯ ಸಮಾಜದಲ್ಲಿ ಒಬಿಸಿಗಳು, ದಲಿತರು, ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಮಹಿಳೆಯರ ವಿರುದ್ಧ ಹೇಗೆ ತಾರತಮ್ಯ ಮಾಡಲಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಈ ಮಸೂದೆಯು ಜಾತಿ ಜನಗಣತಿಯನ್ನು ಬದಿಗಿಡುವ ಉದ್ದೇಶವನ್ನು ಹೊಂದಿದೆ. ಇದು ಮಹಿಳಾ ಮೀಸಳಾತಿ ಮಸೂದೆ ಅಲ್ಲವೇ ಅಲ್ಲ. ಸಂವಿಧಾನದ ಮೇಲೆ ಮನುವಾದವನ್ನ ಹೇರುವ ಬಿಲ್. ಭಾರತದ ಮೇಲೆ ದಾಳಿ ಮಾಡಲು ನಾವು ಬಿಡುವುದಿಲ್ಲ ಎಂದರು.

ನಿಮ್ಮ ಶಕ್ತಿ ಕ್ಷೀಣಿಸುತ್ತಿರುವುದರಿಂದ, ನೀವು ದೇಶದ ನಕ್ಷೆಯನ್ನು ಬದಲಾಯಿಸಲು ಬಯಸುತ್ತೀರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ನೀವು ಅಸ್ಸಾಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಅದನ್ನು ಮಾಡಿದ್ದೀರಿ, ಮತ್ತು ಈಗ ದೇಶದಲ್ಲಿ ಅದನ್ನು ಮಾಡಲು ನಿಮಗೆ ಸಾಂವಿಧಾನಿಕ ತಿದ್ದುಪಡಿ ಬೇಕು. ಇದು ರಾಷ್ಟ್ರ ವಿರೋಧಿ. ನೀವು ಇದನ್ನು ಮಾಡಲು ನಾವು ಬಿಡುವುದಿಲ್ಲ. ಕೈಗಾರಿಕೆ, ಖಾಸಗಿ ವಲಯ ಮತ್ತು ನ್ಯಾಯಾಂಗದಲ್ಲಿ ದಲಿತರು ಎಲ್ಲಿದ್ದಾರೆ? ನೀವು ಒಬಿಸಿಗಳು ಮತ್ತು ದಲಿತರನ್ನು ಹಿಂದೂಗಳು ಎಂದು ಕರೆಯುತ್ತೀರಿ, ಆದರೆ ನೀವು ಅವರಿಗೆ ದೇಶದಲ್ಲಿ ಯಾವುದೇ ಸ್ಥಾನ ನೀಡುವುದಿಲ್ಲ ಎಂದು ಪ್ರಶ್ನಿಸಿದರು.

Rahul Gandhi
Parliament special session: ಅಗ್ನಿ ಪರೀಕ್ಷೆಯಲ್ಲಿ ಮೋದಿ ಸರ್ಕಾರ, ಇಂದು ಪಾಸ್ ಆಗುತ್ತಾ ಪ್ರಮುಖ ಮಸೂದೆಗಳು?

ಈ ಮಸೂದೆಯನ್ನು ವಾಸ್ತವವಾಗಿ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ತಿಳಿದಿದೆ. ಎಂದು ರಾಹುಲ್ ಗಾಂಧಿ ಹೇಳಿದರು. ಇದು ಭಯಭೀತ ನಡೆ, ಏಕೆಂದರೆ ಪ್ರಧಾನಿ ಯಾವುದೇ ಬೆಲೆ ತೆತ್ತಾದರೂ ಎರಡು ಸಂದೇಶಗಳನ್ನು ಕಳುಹಿಸಬೇಕಾಗಿತ್ತು. ಮೊದಲನೆಯದಾಗಿ, ಅವರು ಭಾರತದ ಚುನಾವಣಾ ನಕ್ಷೆಯನ್ನು ಬದಲಾಯಿಸಬೇಕಾಯಿತು, ಮತ್ತು ಎರಡನೆಯದಾಗಿ, ಮಹಿಳೆಯರಿಗೆ ತಮ್ಮ ಬೆಂಬಲವನ್ನು ಅವರು ಪುನರುಚ್ಚರಿಸಬೇಕಾಯಿತು. ಅವರು ಇದನ್ನು ಏಕೆ ಮಾಡುತ್ತಿದ್ದಾರೆಂದು ನಾನು ನಿಮ್ಮ ಕಲ್ಪನೆಗೆ ಬಿಡುತ್ತೇನೆ, ಆದರೆ ಅಧಿಕಾರದಲ್ಲಿರುವವರಿಗೆ ಅವರು ಏಕೆ ಹಾಗೆ ಮಾಡುತ್ತಿದ್ದಾರೆಂದು ಚೆನ್ನಾಗಿ ತಿಳಿದಿದೆ. ಸತ್ಯವೆಂದರೆ ಮಾಂತ್ರಿಕ ಸಿಕ್ಕಿಬಿದ್ದಿದ್ದಾನೆ - ಬಾಲಕೋಟ್‌ನ ಮಾಂತ್ರಿಕ, ನೋಟು ರದ್ದತಿಯ ಮಾಂತ್ರಿಕ, ಕ್ರೂರ ಮಾಂತ್ರಿಕ. ಇದ್ದಕ್ಕಿದ್ದಂತೆ ಸಿಕ್ಕಿಬಿದ್ದಿದ್ದಾನೆ.

ಸದನದಲ್ಲಿ ಚರ್ಚೆಯ ಸಮಯದಲ್ಲಿ, "ಮಾಂತ್ರಿಕ" ಎಂಬ ಪದದ ಪುನರಾವರ್ತಿತ ಬಳಕೆಯು ಕೋಲಾಹಲವನ್ನು ಸೃಷ್ಟಿಸಿತು. ಇದಕ್ಕಾಗಿ ಸ್ಪೀಕರ್ ರಾಹುಲ್ ಗಾಂಧಿಯವರನ್ನು ಖಂಡಿಸಿದರು. ರಾಹುಲ್ ಭಾಷಣದ ಸಮಯದಲ್ಲಿ ಆಡಳಿತ ಪಕ್ಷದ ಸಂಸದರು ಹಲವಾರು ಬಾರಿ ಪ್ರತಿಭಟಿಸಿದರು. ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಭಾಷಣವನ್ನು ಸದನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಅವರ ಹೇಳಿಕೆಯನ್ನು ಖಂಡಿಸಿದರು ಮತ್ತು ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಹೇಳಿದರು. ಗದ್ದಲದ ನಡುವೆ, ಸ್ಪೀಕರ್ ಓಂ ಬಿರ್ಲಾ ಸಂಸದರು ಸಂಸದೀಯ ಭಾಷೆಯನ್ನು ಬಳಸುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com