ಅವರು ಜಿಗಿ ಎಂದರೆ ಜಿಗಿಯುತ್ತಾರೆ, ಹೇಳಿದ್ದು ಮಾಡ್ತಾರೆ; ಮೋದಿ ಸಂಪೂರ್ಣ ಟ್ರಂಪ್ ನಿಯಂತ್ರಣದಲ್ಲಿದ್ದಾರೆ- ರಾಹುಲ್ ಗಾಂಧಿ

“ಇಂದು ಡೊನಾಲ್ಡ್ ಟ್ರಂಪ್ ಮೋದಿ ಅವರಿಗೆ ಜಿಗಿಯಲು ಹೇಳಿದರೆ, ಮೋದಿ ಜಿಗಿಯುತ್ತಾರೆ. ಟ್ರಂಪ್ ಮಲಗಿ ಎಂದು ಹೇಳಿದರೆ, ಮೋದಿ ಮಲಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Narendra Modi- Rahul Gandhi
ನರೇಂದ್ರ ಮೋದಿ- ರಾಹುಲ್ ಗಾಂಧಿonline desk
Updated on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ನಿಯಂತ್ರಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದರು.

ತಮಿಳುನಾಡಿನ ಮುಖ್ಯಮಂತ್ರಿ ಮೇಲೆ ಹಿಡಿತ ಸಾಧಿಸಲು, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷ ಅಧಿಕಾರಕ್ಕೆ ಬರಬೇಕೆಂದು ಮೋದಿ ಬಯಸುತ್ತಿದ್ದಾರೆ ಎಂದು ಅವರು ಹೇಳಿದರು. ಇದಲ್ಲದೆ, ಪ್ರಧಾನಮಂತ್ರಿಯವರು ದೇಶದ ಇಂಧನ ಭದ್ರತೆಯನ್ನು ತ್ಯಜಿಸಿ, ನಮ್ಮ ಡೇಟಾವನ್ನು ಹಸ್ತಾಂತರಿಸಿದ್ದು ಮಾತ್ರವಲ್ಲ, ರೈತರು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಹಿತಾಸಕ್ತಿಗಳನ್ನು ‘ಮಾರಾಟಕ್ಕೆ ಇಟ್ಟಿದ್ದಾರೆ’ ಎಂದು ಅವರು ದೂರಿದರು.

Narendra Modi- Rahul Gandhi
ಹಾಸ್ಯ ಭಾಷಣಗಳನ್ನುನೀಡುವ ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ: ಚಿರಾಗ್ ಪಾಸ್ವಾನ್

“ನಿನ್ನೆ ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಖದಲ್ಲಿ ಆತ್ಮವಿಶ್ವಾಸದ ಕೊರತೆ ಸ್ಪಷ್ಟವಾಗಿ ಕಾಣಿಸಿತು,” ಎಂದು ರಾಹುಲ್ ಅವರು ಮರುಹಂಚಿಕೆ ಮಸೂದೆ ಕುರಿತು ಉಲ್ಲೇಖಿಸಿದರು. “ಅವರು (ಪ್ರಧಾನಮಂತ್ರಿ) ವಿರೋಧ ಪಕ್ಷದ ಸದಸ್ಯರನ್ನು ನೇರವಾಗಿ ನೋಡುವ ಧೈರ್ಯವನ್ನೂ ತೋರಲಿಲ್ಲ. ಬದಿಗೆ ತಿರುಗಿಕೊಂಡೇ ಕುಳಿತಿದ್ದರು. ಕಾರಣ ಏನು? ಅವರನ್ನು ಅಮೆರಿಕ ನಿಯಂತ್ರಿಸುತ್ತಿದೆ. ಅವರು ಭಾರತ–ಅಮೆರಿಕಾ ಒಪ್ಪಂದಕ್ಕೆ ಸಹಿ ಹಾಕಿ ನಮ್ಮ ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ,” ಎಂದು ಇಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ರಾಹುಲ್ ಆರೋಪಿಸಿದರು.

“ಇಂದು ಡೊನಾಲ್ಡ್ ಟ್ರಂಪ್ ಮೋದಿ ಅವರಿಗೆ ಜಿಗಿಯಲು ಹೇಳಿದರೆ, ಮೋದಿ ಜಿಗಿಯುತ್ತಾರೆ. ಟ್ರಂಪ್ ಮಲಗಿ ಎಂದು ಹೇಳಿದರೆ, ಮೋದಿ ಮಲಗುತ್ತಾರೆ. ಏಕೆಂದರೆ ಟ್ರಂಪ್ ಮೋದಿಯನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಎಪ್ಸ್ಟೀನ್ ಕಡತಗಳ ಮೂಲಕ ನಿಯಂತ್ರಿಸುತ್ತಿದ್ದಾರೆ.

ಮೋದಿಯ ಆರ್ಥಿಕ ವ್ಯವಸ್ಥೆಗಳ ಬಗ್ಗೆ, ಅದಾನಿಯೊಂದಿಗೆ ಇರುವ ಅವರ ಸಂಬಂಧಗಳ ಬಗ್ಗೆ ಟ್ರಂಪ್‌ಗೆ ಸಂಪೂರ್ಣ ಮಾಹಿತಿ ಇದೆ,” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಟ್ರಂಪ್ ಮೋದಿಯನ್ನು ಹೇಗೆ ಹಿಡಿತದಲ್ಲಿಟ್ಟುಕೊಂಡಿದ್ದಾರೋ, ಅದೇ ರೀತಿಯಲ್ಲಿ ಮೋದಿಯೂ ತಮಿಳುನಾಡಿನ ಮುಖ್ಯಮಂತ್ರಿ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು. “ಅದಕ್ಕಾಗಿ ಅವರು ತಮಿಳುನಾಡಿನಲ್ಲಿ ಎಐಎಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತರಲು ಬಯಸುತ್ತಿದ್ದಾರೆ,” ಎಂದು ರಾಹುಲ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com