ಕೈಯಲ್ಲಿ 'ಗನ್' ಲೈಟರ್, ತ್ರಿಬಲ್ ರೈಡಿಂಗ್, ಬೈಕ್ ಸ್ಟಂಟ್ Reels: ಭೀಕರ ಅಪಘಾತ, ಮೂವರು ಸಹೋದರರ ಸಾವು! Video

ಮಧ್ಯ ಪ್ರದೇಶದ ರೇವಾ ಜಿಲ್ಲೆಯ ಮೌಗಂಜ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 135ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಹೋದರರು ಧಾರುಣವಾಗಿ ಸಾವನ್ನಪ್ಪಿದ್ದಾರೆ.
Brothers Thrill Ride Turns Fatal
ಯುವಕರ ಪ್ರಾಣ ತೆಗೆದ ಬೈಕ್ ಸ್ಟಂಟ್ ರೀಲ್ಸ್
Updated on

ಭೋಪಾಲ್: ರೀಲ್ಸ್‌ಗಾಗಿ ಅಪಾಯಕಾರಿ ಬೈಕ್ ಸ್ಟಂಟ್‌ ಮಾಡಿಕೊಂಡು ಹೋಗುತ್ತಿದ್ದ ಮೂವರು ಯುವಕರು ಭೀಕರ ಅಪಘಾತಕ್ಕೆ ಬಲಿಯಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ರೀಲ್ಸ್ ಹುಚ್ಚಾಟಕ್ಕೆ ಮತ್ತೆ ಮೂರು ಜೀವಗಳು ಬಲಿಯಾಗಿದ್ದು, ಮಧ್ಯ ಪ್ರದೇಶದ ರೇವಾ ಜಿಲ್ಲೆಯ ಮೌಗಂಜ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 135ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಹೋದರರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಭೀಕರ ಘಟನೆಯ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋ ಪ್ರಕಾರ ಮೂವರು ಸೋಹದರರು ಪಲ್ಸರ್ 220 ಬೈಕ್‌ನಲ್ಲಿ ಅತೀ ವೇಗವಾಗಿ ಹೋಗುತ್ತಾ ಬೈಕ್ ಸ್ಟಂಟ್ ಅನ್ನು ರೀಲ್ಸ್ ಮಾಡುತ್ತಿದ್ದಾರೆ. ಈ ಪೈಕಿ ಒಬ್ಬ ಕೈಯಲ್ಲಿ ಗನ್‌ ರೀತಿಯ ಲೈಟರ್ ಹಿಡಿದುಕೊಂಡು ಶೋ ಮಾಡಿದ್ದಾನೆ. ಇನ್ನಿಬ್ಬರು ಕಿರುಚಾಡುತ್ತಾ ಜಾಲಿ ರೈಡ್‌ ಮಾಡಿದ್ದಾರೆ.

Brothers Thrill Ride Turns Fatal
ಬೈಕ್ ಚಾಲನೆ ಮಾಡುತ್ತಾ Reels ರೆಕಾರ್ಡ್: ಭೀಕರ ಅಪಘಾತದಲ್ಲಿ ಯುವತಿ ಸಾವು, ಯುವಕ ಗಂಭೀರ! Video

ರೀಲ್ಸ್ ಗಾಗಿ ಬೈಕ್ ಸ್ಟಂಟ್

ಬೈಕ್‌ ಚಲಾಯಿಸಿಕೊಂಡು ಹೋಗುವ ವೇಳೆ ಮತ್ತೊಂದು ಬೈಕ್ ನಲ್ಲಿ ಅವರ ಸ್ನೇಹಿತ ಮೊಬೈಲ್ ನಲ್ಲಿ ಇದನ್ನು ರೀಲ್ಸ್‌ ಮಾಡಿಕೊಳ್ಳುತ್ತಿದ್ದು, ರೀಲ್ಸ್‌ಗಾಗಿ ಮೂವರು ಅತ್ಯಂತ ವೇಗವಾಗಿ ಸ್ಟಂಟ್‌ ಮಾಡಿಕೊಂಡು ಹೋಗಿದ್ದಾರೆ. ಈ ವೇಳೆ ಹೆದ್ದಾರಿಯಲ್ಲಿ ಹತ್ತಾರು ವಾಹನಗಳು ಚಲಿಸತ್ತಿದ್ದರೂ ಅವುಗಳನ್ನು ಅಪಾಯಕಾರಿಯಾಗಿ ಹಿಂದಿಕ್ಕಿ ಮುಂದೆ ಸಾಗಿದ್ದಾರೆ.

ಆದರೆ ಮುಂದೆ ಮತ್ತೊಂದು ವಾಹನ ನಿಂತಿದ್ದ ಕಾರಣ ಬೈಕ್ ನೇರವಾಗಿ ಹೋಗಿ ಅದಕ್ಕೆ ಢಿಕ್ಕಿಯಾಗಿದೆ. ಬೈಕ್ ವೇಗದಲ್ಲಿದ್ದ ಕಾರಣ ಢಿಕ್ಕಿಯಾದ ರಭಸಕ್ಕೆ ಮೂವರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಒಂದು ಬೈಕ್‌ ನಿಂತಿದ್ದ ಟ್ರೇಲರ್‌ ಟ್ರಕ್‌ಗೆ ಢಿಕ್ಕಿಯಾದ ಬಳಿಕ ಅದೇ ಟ್ರಕ್‌ಗೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ವಾಹನ ಕೂಡ ಢಿಕ್ಕಿಯಾಗಿದೆ. ಅದರಲ್ಲಿದ್ದವರು ಕೂಡ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಭೀಕರ ಅಪಘಾತದಲ್ಲಿ ಉಪಲಕ್ಷ್ಯ ಕೋಲ್ (17), ಅಮರೀಶ್ ಕೋಲ್ (22), ಹೇಮರಾಜ್ ಕೋಲ್ (17) ಮೃತಪಟ್ಟಿದ್ದಾರೆ. ಮೃತರೆಲ್ಲರೂ ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಲಾ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ.‌ ಸದ್ಯ ಟ್ರೇಲರ್‌ ಟ್ರಕ್‌ ಜಪ್ತಿ ಮಾಡಲಾಗಿದ್ದು, ಘಟನೆ ಬಗ್ಗೆ ಇನ್ನಷ್ಟು ತನಿಖೆ ಮುಂದುವರೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೂವರು ಯುವಕರು ಸವಾರಿ ಮಾಡುವಾಗ ಮೊಬೈಲ್ ರೀಲ್ ರೆಕಾರ್ಡ್ ಮಾಡುತ್ತಿದ್ದರು, ಇದು ಅವರ ಗಮನ ಬೇರೆಡೆ ಸೆಳೆಯಿತು. ಬೆಳಿಗ್ಗೆ 11 ಗಂಟೆ ಸುಮಾರಿಗೆ, ಅವರ ಬೈಕ್ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟ್ರೇಲರ್ ಟ್ರಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಅಪಘಾತವಾದ ತಕ್ಷಣವೇ ಸ್ಥಳದಲ್ಲೇ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com