ನೆಹರು ಕಾಶ್ಮೀರಿ ಪಂಡಿತ ಅಲ್ಲ, ಮುಸ್ಲಿಂ ಕುಟುಂಬದಿಂದ ಬಂದಿದ್ದಾರೆ: ಬಿಜೆಪಿ ಮಾಜಿ ಸಂಸದ ವಿವಾದಾತ್ಮಕ ಹೇಳಿಕೆ

ನೆಹರು ಕೇವಲ ಮತಕ್ಕಾಗಿ ತಮ್ಮನ್ನು ತಾವು ಕಾಶ್ಮೀರಿ ಪಂಡಿತ ಎಂದು ಬಿಂಬಿಸಿಕೊಂಡಿದ್ದಾರೆ. ಅವರ ನಿಜವಾದ ಗುರುತನ್ನು ಮರೆಮಾಚಿದ್ದಾರೆ ಎಂದು ಹರಿಲಾಲ್ ಪಟೇಲ್ ಹೇಳಿದ್ದಾರೆ.
Former BJP MP sparks row with remarks on Nehru, Gandhi family ahead of Gujarat local body polls
ಹರಿಲಾಲ್ ಪಟೇಲ್
Updated on

ಅಹಮದಾಬಾದ್: ಬಿಜೆಪಿ ಮಾಜಿ ಸಂಸದ ಹರಿಲಾಲ್ ಪಟೇಲ್ ಅವರು ಜವಾಹರಲಾಲ್ ನೆಹರು ಮತ್ತು ಗಾಂಧಿ ಕುಟುಂಬದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರು ಕಾಶ್ಮೀರಿ ಪಂಡಿತರಲ್ಲ ಎಂದು ಸೋಮವಾರ ಹೇಳಿದ್ದಾರೆ.

ಗುಜರಾತ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಹರಿಲಾಲ್ ಪಟೇಲ್ ಅವರು ಇಂದು ರಾಜ್‌ಕೋಟ್ ಜಿಲ್ಲೆಯಲ್ಲಿ ಚುನಾವಣಾ ಕಚೇರಿ ಉದ್ಘಾಟನೆ ವೇಳೆ ಈ ಹೇಳಿಕೆ ನೀಡಿದ್ದಾರೆ.

ನೆಹರು ಅವರು ಪಂಡಿತ ಕುಟುಂಬಕ್ಕೆ ಸೇರಿದವರಲ್ಲ, ಅವರು ಮುಸ್ಲಿಂ ಸಮುದಾಯದಿಂದ ಬಂದವರು ಎಂದು ಬಿಜೆಪಿ ನಾಯಕ ಗಂಭೀರ ಆರೋಪ ಮಾಡಿದ್ದಾರೆ.

Former BJP MP sparks row with remarks on Nehru, Gandhi family ahead of Gujarat local body polls
'ನಾನು ನೆಹರು, ರಾಜೀವ್ ವಾದಿ, ಆದ್ರೆ ರಾಹುಲ್ ವಾದಿಯಲ್ಲ': ಮಣಿಶಂಕರ್ ಅಯ್ಯರ್

ನೆಹರು ಕೇವಲ ಮತಕ್ಕಾಗಿ ತಮ್ಮನ್ನು ಕಾಶ್ಮೀರಿ ಪಂಡಿತ ಎಂದು ಬಿಂಬಿಸಿಕೊಂಡಿದ್ದಾರೆ. ಅವರ ನಿಜವಾದ ಗುರುತನ್ನು ಮರೆಮಾಚಿದ್ದಾರೆ ಎಂದು ಹರಿಲಾಲ್ ಪಟೇಲ್ ಹೇಳಿದ್ದಾರೆ.

ಈ ಹೇಳಿಕೆ ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ವಿರೋಧ ಪಕ್ಷ ಕಾಂಗ್ರೆಸ್, ಬಿಜೆಪಿ ನಾಯಕನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಪಟೇಲ್ ಅವರು ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಅವರ ವಂಶಾವಳಿ ಮತ್ತು ಗುರುತನ್ನು ಪ್ರಶ್ನಿಸಿದ್ದಾರೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಎಲ್ಲರೂ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಗತಿ ಅಹಿರ್ ಈ ಹೇಳಿಕೆಗಳನ್ನು ಖಂಡಿಸಿದ್ದು, ಮಾಜಿ ಬಿಜೆಪಿ ಸಂಸದರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಮತ್ತು ಅವರಿಗೆ ಜ್ಞಾನದ ಕೊರತೆಯಿದೆ ಎಂದು ತಿರುಗೇಟು ನೀಡಿದ್ದಾರೆ.

ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ ಮತ್ತು ಟೀಕೆಗೆ ಗುರಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com