"ನನ್ನ ಸೀರೆ ಎಳೆದ, ತೊಡೆ ಮೇಲೆ ಕೈ ಇಟ್ಟ": ಬಗೆದಷ್ಟು ಬಯಲಾಗುತ್ತಿದೆ TCS ಮತಾಂಧರ ಭಯಾನಕತೆ!

ಹೊಸದಾಗಿ ವಿವಾಹವಾದ ಮಹಿಳಾ ಉದ್ಯೋಗಿಯೊಬ್ಬರು, ನನ್ನನ್ನು "ಪ್ಲೇಯರ್", "ಝೀರೋ ಫಿಗರ್" ಎಂದು ಕರೆಯುತ್ತಿದ್ದರು ಮತ್ತು ಹಿಂದೂ ದೇವರುಗಳ ಬಗ್ಗೆ ಅಶ್ಲೀಲ ಕಾಮೆಂಟ್‌ಗಳು, ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
"Would Pull My Saree, Place Hands On My Thigh": TCS Employee
ಬಂಧಿತ ಆರೋಪಿಗಳು
Updated on

ಮುಂಬೈ: ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅಥವಾ ಟಿಸಿಎಸ್‌ನ ನಾಸಿಕ್ ಘಟಕದ ಭಯಾನಕತೆ ಬಗೆದಷ್ಟು ಬಯಲಾಗುತ್ತಿದ್ದು, ಕಾರ್ಪೊರೇಟ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಹೊಸದಾಗಿ ವಿವಾಹವಾದ ಮಹಿಳಾ ಉದ್ಯೋಗಿಯೊಬ್ಬರು, ನನ್ನನ್ನು "ಪ್ಲೇಯರ್", "ಝೀರೋ ಫಿಗರ್" ಎಂದು ಕರೆಯುತ್ತಿದ್ದರು ಮತ್ತು ಹಿಂದೂ ದೇವರುಗಳ ಬಗ್ಗೆ ಅಶ್ಲೀಲ ಕಾಮೆಂಟ್‌ಗಳು, ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ತಮ್ಮ ಪುರುಷ ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳನ್ನು ಹೊರಿಸಿದ ಅರ್ಧ ಡಜನ್‌ಗಿಂತಲೂ ಹೆಚ್ಚು ಮಹಿಳೆಯರಲ್ಲಿ ಇವರೂ ಒಬ್ಬರಾಗಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

"Would Pull My Saree, Place Hands On My Thigh": TCS Employee
ಬುರ್ಖಾ ಧರಿಸದಿದ್ದರೆ ರೇಪ್ ಮಾಡುವ ಬೆದರಿಕೆ; ಟೀಂ ಲೀಡರ್ ಕೆಟ್ಟದಾಗಿ ಮುಟ್ಟುತ್ತಿದ್ದ: TCS ಭಯಾನಕತೆ ಬಿಚ್ಚಿಟ್ಟ ಸಂತ್ರಸ್ತೆ

ಟಿಸಿಎಸ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಶೋಷಣೆ, ಬಲವಂತದ ಮತಾಂತರ ಯತ್ನ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಕಿರುಕುಳ ಮತ್ತು ಮಾನಸಿಕ ಕಿರುಕುಳದ ಆರೋಪಗಳು ಬೆಳಕಿಗೆ ಬಂದ ನಂತರ ನಾಸಿಕ್ ಪೊಲೀಸರ ವಿಶೇಷ ತನಿಖಾ ತಂಡ(SIT) ಮಹಿಳಾ ವ್ಯವಸ್ಥಾಪಕಿ ಸೇರಿದಂತೆ ಎಂಟು ಜನರನ್ನು ಬಂಧಿಸಿದೆ ಮತ್ತು ಈ ಸಂಬಂಧ ಒಂಬತ್ತು ಎಫ್‌ಐಆರ್‌ಗಳನ್ನು ದಾಖಲಿಸಿದೆ.

ಭಾರತದ ಅತಿದೊಡ್ಡ ಟೆಕ್ ಕಂಪನಿ ಟಿಸಿಎಸ್, ಯಾವುದೇ ರೀತಿಯ ಕಿರುಕುಳ ಮತ್ತು ಬಲವಂತದ ಮತಾಂತರದ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದೆ ಮತ್ತು ನಾಸಿಕ್ ಕಚೇರಿಯಲ್ಲಿ ಲೈಂಗಿಕ ಕಿರುಕುಳದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ.

ಸಂತ್ರಸ್ತೆ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಆಕೆಯ ಪತಿ ಪುಣೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರು ನಾಸಿಕ್‌ನಲ್ಲಿ ತನ್ನ ಅತ್ತೆ ಮಾವನ ಜೊತೆ ವಾಸಿಸುತ್ತಿದ್ದಾರೆ.

"ನನ್ನ ಮದುವೆಯ ನಂತರ ಜೂನ್ 20, 2025 ರಿಂದ ನಾನು ಟಿಸಿಎಸ್ ನಾಸಿಕ್ ಶಾಖೆಯಲ್ಲಿ 'ಅಸೋಸಿಯೇಟ್' ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಮೂರು ತಿಂಗಳ ತರಬೇತಿ ಜೂನ್ 24, 2025 ರಂದು ಪ್ರಾರಂಭವಾಯಿತು. ಶಾರುಖ್ ಖುರೇಷಿ ಮತ್ತು ಜಯೇಶ್ ಗುಂಜಾಲ್" ಅವರು ನನ್ನ ತರಬೇತಿ ತಂಡದ ಟೀಂ ಲೀಡರ್ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ತರಬೇತಿಯ ಸಮಯದಲ್ಲಿ, ಸಾಲ ಶಾಖೆಯ ತಂಡದ ಲೀಡರ್, ತರಬೇತಿಗೂ ಅವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಬರುತ್ತಿದ್ದರು. ಅವರ ಹೆಸರು ರಾಝಾ ಮೆಮನ್. ರಾಝಾ ತರಬೇತಿ ಕೊಠಡಿಯಲ್ಲಿ ಪದೇ ಪದೇ ತನ್ನ ಬಳಿಗೆ ಬಂದು ತನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ.

"Would Pull My Saree, Place Hands On My Thigh": TCS Employee
TCS 'ಲವ್ ಜಿಹಾದ್' ಪ್ರಕರಣದ ಸಂಪೂರ್ಣ ಮಾಡ್ಯೂಲ್ ಅನ್ನೇ ಭೇದಿಸುತ್ತೇವೆ: ಮಹಾರಾಷ್ಟ್ರ ಸಿಎಂ ಫಡ್ನವೀಸ್

"ನಿಮ್ಮ ಪತಿ ದೂರ ಇರುವುದರಿಂದ, ನೀವು ಎಲ್ಲವನ್ನೂ ಹೇಗೆ ನಿರ್ವಹಿಸುತ್ತೀರಿ? ನಿಮಗೆ ಭಯ ಆಗುವುದಿಲ್ಲವೇ? ನಿಮಗೆ ಏನಾದರೂ ಅಗತ್ಯವಿದ್ದರೆ, ದಯವಿಟ್ಟು ನನಗೆ ತಿಳಿಸಿ, ನಾನು ನಿಮಗೆ ಯಾವುದೇ ಸಮಯದಲ್ಲಿ ಸಹಾಯ ಮಾಡಲು ಸಿದ್ಧನಿದ್ದೇನೆ" ಎಂದು ಹೇಳುತ್ತಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.

"ನೀನು ಈಗಷ್ಟೇ ಮದುವೆಯಾಗಿದ್ದೀಯ - ನೀನು ಹನಿಮೂನ್‌ಗೆ ಎಲ್ಲಿಗೆ ಹೋಗಿದ್ದೀಯ? ಅಲ್ಲಿ ನೀನು ಏನು ಮಾಡಿದ್ದೀಯ?" ಎಂದು ರಾಝಾ ನನ್ನನ್ನು ಪ್ರಶ್ನಿಸುತ್ತಿದ್ದರು.

ರಾಝಾಗೆ ನನ್ನ ಟೀಂ ಲೀಡರ್ ಶಾರುಖ್ ಖುರೇಷಿ ಬೆಂಬಲ ನೀಡುತ್ತಿದ್ದರು. ಶಾರುಖ್ ತನ್ನ ವೈವಾಹಿಕ ಜೀವನದ ಬಗ್ಗೆ ಆಗಾಗ್ಗೆ ಕೇಳುತ್ತಿದ್ದ ಎಂದು ಆ ಮಹಿಳೆ ಹೇಳಿದ್ದಾರೆ.

"ನಿಮ್ಮದು 'ಅರೇಂಜ್ಡ್ ಮ್ಯಾರೇಜ್' ಅಥವಾ 'ಲವ್ ಮ್ಯಾರೇಜ್'?" ಎಂದು ಶಾರುಖ್ ತನ್ನನ್ನು ಕೇಳುತ್ತಿದ್ದರು. ರಾಝಾ ಕೂಡ ಅವರ ಜತೆ ಸೇರಿಕೊಂಡು ತನಗೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

"ನೀನು ನಿನ್ನ ಗಂಡನೊಂದಿಗೆ ಹೊಂದಿಕೆಯಾಗದಿದ್ದರೆ, ನಮಗೆ ಹೇಳು; ನಾವು ನಿನಗೆ ನಿಖರವಾಗಿ ಏನು ಮಾಡಬೇಕೆಂದು ಮತ್ತು ಅದನ್ನು ಹೇಗೆ ನಿಭಾಯಿಸಬೇಕೆಂದು ಕಲಿಸುತ್ತೇವೆ ಎಂದು ರಾಝಾ ಹೇಳುತ್ತಿದ್ದರು. ಅಲ್ಲದೆ ನನ್ನನ್ನು "ಪ್ಲೇಯರ್" ಎಂದು ಕರೆಯುತ್ತಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.

"ರಾಝಾ ನನಗೆ 'ಪ್ಲೇಯರ್' ಎಂದು ಅಡ್ಡಹೆಸರು ಇಟ್ಟಿದ್ದರು. ನಾನು ಕಚೇರಿಗೆ ಬಂದಾಗಲೆಲ್ಲಾ ಅವನು ನನ್ನನ್ನು 'ಪ್ಲೇಯರ್' ಎಂದೇ ಕರೆಯುತ್ತಿದ್ದ. ನನ್ನ ಕೆಲಸದಲ್ಲಿ ಯಾವುದೇ ತೊಂದರೆಗಳು ಎದುರಾದರೆ ಮತ್ತು ಅವುಗಳನ್ನು ಶಾರುಖ್‌ಗೆ ಹೇಳಿದರೆ, ಅವನು ರಾಝಾನನ್ನು ಕರೆಯುತ್ತಿದ್ದರು. ನಂತರ ರಝಾ ಬಂದು, 'ಏನಾಯಿತು ಪ್ಲೇಯರ್? ಕೆಲಸ ನಿಭಾಯಿಸಲು ಸಾಧ್ಯವಿಲ್ಲವೇ? ನೀವು ಕಷ್ಟಪಡುತ್ತಿದ್ದರೆ, ನನಗೆ ತಿಳಿಸಿ' ಎಂದು ಹೇಳುತ್ತಿದ್ದನು" ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಗುಡಿ ಪಾಡ್ವಾ ದಿನದಂದು, "ನಾನು ಸೀರೆ ಧರಿಸಿ ಬಂದಿದ್ದೆ. ಲಾಬಿಯ ಮೂಲಕ, ಪ್ಯಾಂಟ್ರಿಯಲ್ಲಿ ನಡೆಯುತ್ತಿದ್ದಾಗ, ಯಾರೋ ನನ್ನ ಪಲ್ಲು(ಸೀರೆಯ ಸೆರಗು) ಎಳೆದ ಅನುಭವವಾಯಿತು. ನಾನು ತಿರುಗಿ ನೋಡಿದಾಗ, ನನ್ನ ಪಲ್ಲು ರಾಝಾ ಕೈಯಲ್ಲಿರುವುದನ್ನು ನೋಡಿದೆ. ನಾನು ತಕ್ಷಣ ನನ್ನ ಪಲ್ಲುವನ್ನು ಆತನ ಕೈಯಿಂದ ಬಿಡಿಸಿಕೊಂಡೆ. ಆಗ ಅವನು ನನ್ನನ್ನು ಅಶ್ಲೀಲ ನೋಟದಿಂದ ನೋಡಿ ಮುಗುಳ್ನಕ್ಕನು" ಎಂದು ಯುವತಿ ಹೇಳಿದ್ದಾರೆ.

ಇನ್ನು ಟಿಸಿಎಸ್ ಉದ್ಯೋಗಿ ರಾಝಾ ಮೆಮನ್ ವಿರುದ್ಧ ಹೊರಿಸಲಾದ ಲೈಂಗಿಕ ಕಿರುಕುಳ ಹಾಗೂ ಮತಾಂತರ ಆರೋಪಿ "ಸುಳ್ಳು". ಆಂತರಿಕ ವೃತ್ತಿಪರ ಪೈಪೋಟಿ ಮತ್ತು ಕಚೇರಿ ರಾಜಕೀಯದಿಂದ ಆ ಆರೋಪ ಮಾಡಲಾಗುತ್ತಿದೆ ಎಂದು ಆತನ ಕುಟುಂಬ ಭಾನುವಾರ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com