'ಎಲ್ಲ ಆರೋಪಿಗಳನ್ನೂ ಕಟಕಟೆಯಲ್ಲಿ ನಿಲ್ಲುಸುತ್ತೇನೆ': "Kaise Haraya" ಕಾರ್ಪೋರೇಟರ್ ಸಹರ್ ಶೇಖ್ ಸವಾಲು, ಟ್ರೋಲರ್ಸ್ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ!

ನಕಲಿ ಜಾತಿ ಪ್ರಮಾಣಪತ್ರವನ್ನು ಬಳಸಿ ತನ್ನ ಮಗಳಿಗೆ ಒಬಿಸಿ ಪ್ರಮಾಣಪತ್ರವನ್ನು ಪಡೆದುಕೊಂಡ ಆರೋಪದ ಮೇಲೆ ಮುಂಬ್ರಾ ಕಾರ್ಪೊರೇಟರ್ ಸಹರ್ ಶೇಖ್ ಅವರ ತಂದೆ ಯೂನಸ್ ಶೇಖ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಥಾಣೆ ತಹಶೀಲ್ದಾರ್ ಕಚೇರಿ ಇತ್ತೀಚೆಗೆ ಶಿಫಾರಸು ಮಾಡಿತ್ತು.
AIMIM corporator Sahar Yunus Shaikh
ಮುಂಬ್ರಾ ಕಾರ್ಪೋರೇಟರ್ ಸಹರ್ ಶೇಖ್
Updated on

ಮುಂಬೈ: ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಆರೋಪ ಹೊತ್ತು ದಿಢೀರ್ ನಾಪತ್ತೆಯಾಗಿದ್ದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾದ ಎಐಎಂಐಎಂ ಕಾರ್ಪೊರೇಟರ್ ಸಹರ್ ಶೇಖ್ ದಿಢೀರ್ ಪ್ರತ್ಯಕ್ಷವಾಗಿ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುವುದಾಗಿ ಹೇಳಿದ್ದಾರೆ.

"ನಕಲಿ" ಜಾತಿ ಪ್ರಮಾಣಪತ್ರ ನೀಡಿದ ಆರೋಪದ ಮೇಲೆ ಥಾಣೆ ತಹಶೀಲ್ದಾರ್ AIMIM ಕಾರ್ಪೊರೇಟರ್ ಸಹರ್ ಶೇಖ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕೋರಿದ್ದರು. ನಕಲಿ ಜಾತಿ ಪ್ರಮಾಣಪತ್ರವನ್ನು ಬಳಸಿ ತನ್ನ ಮಗಳಿಗೆ ಒಬಿಸಿ ಪ್ರಮಾಣಪತ್ರವನ್ನು ಪಡೆದುಕೊಂಡ ಆರೋಪದ ಮೇಲೆ ಮುಂಬ್ರಾ ಕಾರ್ಪೊರೇಟರ್ ಸಹರ್ ಶೇಖ್ ಅವರ ತಂದೆ ಯೂನಸ್ ಶೇಖ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಥಾಣೆ ತಹಶೀಲ್ದಾರ್ ಕಚೇರಿ ಇತ್ತೀಚೆಗೆ ಶಿಫಾರಸು ಮಾಡಿತ್ತು.

ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ಚುನಾವಣೆಯಲ್ಲಿ ಸಹರ್ ಶೇಖ್ ವಿರುದ್ಧ ಸೋತ ಎನ್‌ಸಿಪಿ ಅಭ್ಯರ್ಥಿ ಸಿದ್ದಿಕಿ ಫರ್ಹಾ ಶಬಾಬ್ ಅಹ್ಮದ್ ಸಲ್ಲಿಸಿದ ದೂರಿನ ಮೇರೆಗೆ ತಹಶೀಲ್ದಾರ್ ಉಮೇಶ್ ಪಾಟೀಲ್ ನಡೆಸಿದ ವಿಚಾರಣೆಯ ನಂತರ ಈ ಶಿಫಾರಸು ಮಾಡಲಾಗಿದೆ. ಜನವರಿಯಲ್ಲಿ ಥಾಣೆಯ ಮುಂಬ್ರಾದಲ್ಲಿ ನಡೆದ ನಾಗರಿಕ ಚುನಾವಣೆಯ ನಂತರ ಸಹರ್ ಅವರ ಜಾತಿ ಪ್ರಮಾಣಪತ್ರದ ಸಿಂಧುತ್ವವನ್ನು ಅಹ್ಮದ್ ಪ್ರಶ್ನಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ನಾಪತ್ತೆಯಾಗಿದ್ದ ಸಹರ್ ಶೇಖ್ ಇಂದು ದಿಢೀರ್ ಪ್ರತ್ಯಕ್ಷರಾಗಿ ತಮ್ಮ ದಾಖಲೆಗಳು ನಿಜವಾದವು ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಸಹರ್ ಶೇಖ್ ತಂದೆ ಯೂನಸ್ ಶೇಖ್ ಪುತ್ರಿ ಸಹರ್ ಸಲ್ಲಿಸಿರುವ ಎಲ್ಲ ದಾಖಲೆಗಳೂ ಅಸಲಿಯಾಗಿದ್ದು, ಇದೊಂದು ರಾಜಕೀಯ ಷಡ್ಯಂತ್ರ. ಇದು ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಮಾಡುತ್ತಿರುವ "ರಾಜಕೀಯ ಸಂಚು" ಎಂದು ಕಿಡಿಕಾರಿದ್ದಾರೆ.

AIMIM corporator Sahar Yunus Shaikh
ಮುಂಬೈಗೆ ಹಸಿರು ಬಣ್ಣ ಬಳಿತೀವಿ ಅಂದಿದ್ದ ಸಹರ್ ಶೇಖ್ ಗೆ ಸಂಕಷ್ಟ: AIMIM ಕೌನ್ಸಿಲರ್ ಹುದ್ದೆ ಕಳೆದುಕೊಳ್ಳುವ ಸಾಧ್ಯತೆ!

ಎಲ್ಲ ಆರೋಪಿಗಳನ್ನೂ ಕಟಕಟೆಯಲ್ಲಿ ನಿಲ್ಲುಸುತ್ತೇನೆ

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಂದೆ-ಮಗಳು, 'ತಹಶೀಲ್ದಾರ್ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ ವರದಿಯು "ಏಕಪಕ್ಷೀಯ"ವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

"ನಾನು ನಕಲಿ ದಾಖಲೆಗಳನ್ನು ನೀಡಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ನನ್ನ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ನನ್ನ ವಿರುದ್ದ ಹರಡುತ್ತಿರುವ ಸುಳ್ಳುಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಸಹರ್ ಶೇಖ್ ಹೇಳಿದ್ದಾರೆ.

'ನಾವು ಇಂದು ಪತ್ರಿಕಾಗೋಷ್ಠಿ ನಡೆಸಿದ್ದೇವೆ. ಜನತೆಗೆ ಸತ್ಯ ತಿಳಿಸಲು ಇದು ಮುಖ್ಯವಾಗಿತ್ತು. ನನ್ನ ಮೇಲೆ ಆರೋಪಗಳನ್ನು ಮಾಡುವವರನ್ನು ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇನೆ. ಎಲ್ಲರಿಗೂ ಕಾನೂನುಬದ್ಧವಾಗಿ ಉತ್ತರಿಸಲಾಗುವುದು" ಎಂದು ಸಹರ್ ಶೇಖ್ ಗೆ ತಿಳಿಸಿದರು.

ಟ್ರೋಲರ್ಸ್ ವಿರುದ್ಧ ಕಾನೂನು ಕ್ರಮ

ಇದೇ ವೇಳೆ ತಮ್ಮ ವಿರುದ್ಧ ವ್ಯಾಪಕ ಟ್ರೋಲ್ ಮಾಡುತ್ತಿರುವವರ ವಿರುದ್ಧವೂ ಕಿಡಿಕಾರಿದ ಸಹರ್ ಶೇಖ್, "ನಕಾರಾತ್ಮ ಪ್ರಚಾರ ಮತ್ತು ಟ್ರೋಲ್ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಅಂತಹ ಪ್ರಚಾರಗಳು ಅಹಿತಕರ ಘಟನೆಗಳಿಗೆ ಕಾರಣವಾಗಬಹುದು ಮತ್ತು ಅದನ್ನು ತಡೆಯಬೇಕು. ನನ್ನ ವಿರುದ್ಧ ಅಪಪ್ರಚಾರ, ಟ್ರೋಲ್ ಮಾಡುವವರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ದೂರುದಾರರು, ಕೆಲವು ರಾಜಕೀಯ ಗುಂಪುಗಳು ಮತ್ತು ಮಾಧ್ಯಮಗಳ ಕೆಲವು ವಿಭಾಗಗಳಿಗೆ ಮಾನಹಾನಿಕರ ಹೇಳಿಕೆಗಳ ಕುರಿತು ಕಾನೂನು ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಸಹರ್ ಶೇಖ್ ಅವರು ಈಗಾಗಲೇ ದೂರುದಾರರು ಮತ್ತು ಕೆಲವು ಮಾಧ್ಯಮ ಸಂಸ್ಥೆಗಳಿಗೆ ಮಾನನಷ್ಟ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ಏಕಪಕ್ಷೀಯವಾಗಿ ವರದಿ ನೀಡಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ವಿರುದ್ಧವೂ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಹಿಂದಿಯಲ್ಲೇ ಮಾತನಾಡುತ್ತೇನೆ; ಸುದ್ದಿಗಾರರೊಂದಿಗೂ ಜಟಾಪಟಿ

ಇನ್ನು ಇಂದಿನ ಸುದ್ದಿಗೋಷ್ಠಿ ವೇಳೆ ಮಹಾರಾಷ್ಟ್ರ ಪತ್ರಕರ್ತರ ಮರಾಠಿಯಲ್ಲಿ ಮಾತನಾಡಿ ಎಂದಾಗ ಗರಂ ಆದ ಸಹರ್ ಶೇಖ್, ನನಗೆ ಮರಾಠಿ ಸ್ವಲ್ಪ ಮಾತ್ರ ಬರುತ್ತದೆ. ನಾನು ಮರಾಠಿಯಲ್ಲಿ ಮಾತನಾಡಿದರೆ ದೋಷಗಳಿಗೆ ಕಾರಣವಾಗಬಹುದು. ಹೀಗಾಗಿ ನಾನು ಹಿಂದಿಯಲ್ಲೇ ಮಾತನಾಡುತ್ತೇನೆ. ಹಿಂದಿಯಲ್ಲಿ ಮಾತನಾಡುವುದು ತನಗೆ ಹೆಚ್ಚು ಆರಾಮದಾಯಕವಾಗಿದೆ. ನಾವು ಭಾರತೀಯ ಮುಸ್ಲಿಮರು ಮತ್ತು ಹಾಗೆಯೇ ಇರುತ್ತೇವೆ. ನಮ್ಮ ದೇಶವನ್ನು ಪ್ರೀತಿಸುತ್ತೇವೆ ಎಂದರು.

ಏನಿದು ಪ್ರಕರಣ?

ನಕಲಿ ಜಾತಿ ಪ್ರಮಾಣಪತ್ರವನ್ನು ಬಳಸಿ ತನ್ನ ಮಗಳಿಗೆ ಒಬಿಸಿ ಪ್ರಮಾಣಪತ್ರವನ್ನು ಪಡೆದುಕೊಂಡ ಆರೋಪದ ಮೇಲೆ ಮುಂಬ್ರಾ ಕಾರ್ಪೊರೇಟರ್ ಸಹರ್ ಶೇಖ್ ಅವರ ತಂದೆ ಯೂನಸ್ ಶೇಖ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಥಾಣೆ ತಹಶೀಲ್ದಾರ್ ಕಚೇರಿ ಇತ್ತೀಚೆಗೆ ಶಿಫಾರಸು ಮಾಡಿತ್ತು. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ಚುನಾವಣೆಯಲ್ಲಿ ಸಹರ್ ಶೇಖ್ ವಿರುದ್ಧ ಸೋತ ಎನ್‌ಸಿಪಿ ಅಭ್ಯರ್ಥಿ ಸಿದ್ದಿಕಿ ಫರ್ಹಾ ಶಬಾಬ್ ಅಹ್ಮದ್ ಸಲ್ಲಿಸಿದ ದೂರಿನ ಮೇರೆಗೆ ತಹಶೀಲ್ದಾರ್ ಉಮೇಶ್ ಪಾಟೀಲ್ ನಡೆಸಿದ ವಿಚಾರಣೆಯ ನಂತರ ಈ ಶಿಫಾರಸು ಮಾಡಲಾಗಿತ್ತು.

ಜನವರಿಯಲ್ಲಿ ಥಾಣೆಯ ಮುಂಬ್ರಾದಲ್ಲಿ ನಡೆದ ನಾಗರಿಕ ಚುನಾವಣೆಯ ನಂತರ ಸಹರ್ ಅವರ ಜಾತಿ ಪ್ರಮಾಣಪತ್ರದ ಸಿಂಧುತ್ವವನ್ನು ಅಹ್ಮದ್ ಪ್ರಶ್ನಿಸಿದ್ದರು. ಎನ್‌ಸಿಪಿ (NCP) ಅಭ್ಯರ್ಥಿ ಸಿದ್ದಿಕಿ ಫರ್ಹಾ ಶಬಾಬ್ ಅಹ್ಮದ್ ನೀಡಿದ ದೂರಿನ ಮೇರೆಗೆ ಥಾಣೆ ತಹಶೀಲ್ದಾರ್ ಉಮೇಶ್ ಪಾಟೀಲ್ ತನಿಖೆ ನಡೆಸಿದ್ದರು. ಸಹರ್ ಶೇಖ್ ಅವರ ತಂದೆ ಯೂನಸ್ ಶೇಖ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ತಹಶೀಲ್ದಾರ್ ಶಿಫಾರಸು ಮಾಡಿದ್ದರು. ಮುಂಬೈ ನಗರ ಜಿಲ್ಲಾಧಿಕಾರಿ ಕಚೇರಿಯಿಂದ ಈ ಪ್ರಮಾಣಪತ್ರವನ್ನು ಪಡೆಯಲಾಗಿದೆ ಎಂದು ಹೇಳಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬುದು ದೂರುದಾರರ ವಾದ.

ಒಂದು ವೇಳೆ ಈ ಆರೋಪಗಳು ಸಾಬೀತಾದರೆ, ಒಬಿಸಿ (OBC) ಮೀಸಲು ಕ್ಷೇತ್ರದಿಂದ (ವಾರ್ಡ್ ಸಂಖ್ಯೆ 30) ಆಯ್ಕೆಯಾಗಿರುವ ಸಹರ್ ಶೇಖ್ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com