Property row: ಸಂಜಯ್ ಕಪೂರ್ ಆಸ್ತಿ ವಿವಾದ; ಬಾಲಿವುಡ್ ನಟಿ ಕರಿಷ್ಮಾ ಮಕ್ಕಳಿಗೆ ಬಿಗ್ ರಿಲೀಫ್!

ಅಕೌಂಟ್ ಸ್ಟೇಟ್ ಮೆಂಟ್ ಸಲ್ಲಿಸಲು ಮತ್ತು ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ಹೋಲ್ಡಿಂಗ್‌ ಕಾರ್ಯಾಚರಣೆಯನ್ನು ನಿರ್ಬಂಧಿಸಿದೆ.
Karisma's kids
ಬಾಲಿವುಡ್ ನಟಿ ಕರಿಷ್ಮಾ ಮಕ್ಕಳು
Updated on

ನವದೆಹಲಿ: ಕರಿಷ್ಮಾ ಕಪೂರ್ ಅವರ ಮಕ್ಕಳು ಸಲ್ಲಿಸಿದ್ದ ಮಧ್ಯಂತರ ತಡೆಯಾಜ್ಞೆಅರ್ಜಿಯನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸಿದ್ದು, ದಿವಂಗತ ಸಂಜಯ್ ಕಪೂರ್ ಅವರ ಎಸ್ಟೇಟ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಮತ್ತು ಆಸ್ತಿಗಳ ಮೇಲೆ ಮೂರನೇ ವ್ಯಕ್ತಿಯ ಹಕ್ಕುಗಳ ಸೃಷ್ಟಿಯನ್ನು ತಡೆಯುವಂತೆ ನಿರ್ದೇಶಿಸಿದೆ.

ಅಕೌಂಟ್ ಸ್ಟೇಟ್ ಮೆಂಟ್ ಸಲ್ಲಿಸಲು ಮತ್ತು ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ಹೋಲ್ಡಿಂಗ್‌ ಕಾರ್ಯಾಚರಣೆಯನ್ನು ನಿರ್ಬಂಧಿಸಿದೆ.

ಅರ್ಜಿದಾರರು ಮತ್ತು ಪ್ರತಿವಾದಿ (3) (ರಾಣಿ ಕಪೂರ್) ಎತ್ತಿರುವ ಅನುಮಾನಾಸ್ಪದ ಸಂದರ್ಭಗಳನ್ನ ನ್ಯಾಯಾಲಯ ಪರಿಗಣಿಸಿದ್ದು, ಅಂತಹ ಅನುಮಾನಗಳನ್ನು ಹೋಗಲಾಡಿಸುವ ಜವಾಬ್ದಾರಿ ಪ್ರಿಯಾ ಕಪೂರ್ ಅವರ ಮೇಲಿದೆ ಎಂದು ಅಭಿಪ್ರಾಯಪಟ್ಟಿದೆ.

ವಿಚಾರಣೆಗೆ ಮತ್ತಷ್ಟು ಸಮಯ ತೆಗೆದುಕೊಳ್ಳಬಹುದು ಎಂದಿರುವ ನ್ಯಾಯಾಲಯ, ಆಸ್ತಿಯ ಸಂರಕ್ಷಣೆಯ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಬೇಕು ಎಂದು ತೀರ್ಪು ನೀಡಿತು. ಅರ್ಜಿದಾರರು ಎತ್ತಿರುವ ಎಲ್ಲಾ ಕಾನೂನುಬದ್ಧ ಕಳವಳಗಳನ್ನು ಪ್ರತಿವಾದಿ ಪ್ರಿಯಾ ಕಪೂರ್ ಪರಿಹರಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಎಸ್ಟೇಟ್‌ಗೆ ಸಂಬಂಧಿಸಿದ ವಿವಾದದಲ್ಲಿ ಕೋರ್ಟ್ ಈ ಆದೇಶಿ ನೀಡಿದೆ. ವಿಚಾರಣೆ ಮುಗಿಸಿದ ನಂತರ ದೆಹಲಿ ಹೈಕೋರ್ಟ್ ಮಧ್ಯಂತರ ಅರ್ಜಿಗಳ ಮೇಲಿನ ತೀರ್ಪನ್ನು ಕಾಯ್ದಿರಿಸಿತ್ತು. ನಟಿ ಕರಿಷ್ಮಾ ಕಪೂರ್ ಮಕ್ಕಳು ಈ ತಡೆಯಾಜ್ಞೆ ಅರ್ಜಿಯನ್ನು ಸಲ್ಲಿಸಿದ್ದರು. ಅವರು ವಿಲ್‌ನ ದೃಢೀಕರಣವನ್ನು ಪ್ರಶ್ನಿಸಿದ್ದಾರೆ.

ವಿಚಾರಣೆ ವೇಳೆ ಪ್ರಿಯಾ ಕಪೂರ್ ಪರವಾಗಿ ಹಾಜರಾದ ಹಿರಿಯ ವಕೀಲ ರಾಜೀವ್ ನಾಯರ್, ಆಸ್ತಿಗಳನ್ನು ಮರೆಮಾಚುವ ಅಥವಾ ವಂಚಿಸುವ ಆರೋಪಗಳನ್ನು ನಿರಾಕರಿಸಿದರು ಮತ್ತು ಪೂರ್ಣ ಬಹಿರಂಗಪಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

Karisma's kids
ಸಂಜಯ್ ಕಪೂರ್ ಆಸ್ತಿ ವಿವಾದ: 'ಕೊಳಕು ಬಟ್ಟೆಗಳನ್ನು ಸಾರ್ವಜನಿಕವಾಗಿ ತೊಳೆಯಬೇಡಿ'; ದೆಹಲಿ ಹೈಕೋರ್ಟ್

ವಿಲ್‌ನ ಸಿಂಧುತ್ವವನ್ನು ಸಮರ್ಥಿಸಿಕೊಂಡರು. ಇದನ್ನು ವಿರೋಧಿಸಿದ ಮಕ್ಕಳ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ವಿಲ್‌ನಲ್ಲಿ ಪ್ರಿಯಾ ಕಪೂರ್ ಏಕೈಕ ಫಲಾನುಭವಿಯಾಗಿರುವುದರಿಂದ ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎಂದು ವಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com