ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ ಕೆರಳಿದ ಆಪ್; E20 ವಿರುದ್ಧ ಆ. 4ರಂದು ಪ್ರಧಾನಿ ನಿವಾಸ ಚಲೋ ಘೋಷಿಸಿದ ಕೇಜ್ರಿವಾಲ್

ಆಗಸ್ಟ್ 4 ರಂದು ಪ್ರಧಾನಿ ನಿವಾಸದ ಬಳಿ ಮತ್ತೊಮ್ಮೆ ಭಾರಿ ಹೈಡ್ರಾಮ ನಡೆಯಲಿದೆ. ಕಾರಣ ಪ್ರಧಾನಿ ನಿವಾಸ ನಿರ್ಬಂಧಿತ ಪ್ರದೇಶವಾಗಿದೆ.
Arvind Kejriwal
ಅರವಿಂದ ಕೇಜ್ರಿವಾಲ್
Updated on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀಟ್ ಅಕ್ರಮ ಖಂಡಿಸಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಮುಕ್ತಾಯವಾದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶನಿವಾರ ಪ್ರಧಾನಿ ನಿವಾಸ ಚಲೋ ಘೋಷಿಸಿದ್ದಾರೆ.

ಕೇಂದ್ರ ಸರ್ಕಾರವು ಪೆಟ್ರೋಲ್ ಪಂಪ್‌ಗಳಲ್ಲಿ ಶುದ್ಧ ಪೆಟ್ರೋಲ್ ಅಥವಾ E20 ಮಿಶ್ರಿತ ಪೆಟ್ರೋಲ್ ಗೆ ಆಯ್ಕೆ ನೀಡಬೇಕೆಂದು ಒತ್ತಾಯಿಸಿ ಆಗಸ್ಟ್ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ದೆಹಲಿ ಮಾಜಿ ಸಿಎಂ ಹೇಳಿದ್ದಾರೆ.

ಇಂದು ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ E20 ಇಂಧನದ ಕುರಿತು ಟೌನ್ ಹಾಲ್ ಶೈಲಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮಂಗಳವಾರ ಮಧ್ಯಾಹ್ನ ಪ್ರತಿಭಟನೆ ನಡೆಸುವುದಾಗಿ ಮತ್ತು ಸುಮಾರು 100 ಜನರೊಂದಿಗೆ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ನರೇಂದ್ರ ಮೋದಿಯವರ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿದರು.

Arvind Kejriwal
ಧರ್ಮೇಂದ್ರ ಪ್ರಧಾನ್ ಕಿತ್ತು ಹಾಕಿ ಸೋನಂ ವಾಂಗ್ಚೂಕ್‌ ರನ್ನು ದೇಶದ ಶಿಕ್ಷಣ ಸಚಿವರನ್ನಾಗಿ ನೇಮಿಸಿ: ಕೇಜ್ರಿವಾಲ್ ಆಗ್ರಹ

ಗ್ರಾಹಕರಿಗೆ ಪೆಟ್ರೋಲ್ ಪಂಪ್ ಗಳಲ್ಲಿ E20 ಮತ್ತು ಸಾಮಾನ್ಯ ಪೆಟ್ರೋಲ್ ಅನ್ನು ಆಯ್ಕೆ ಮಾಡಲು ಅವಕಾಶ ನೀಡಬೇಕೆಂದು ಕೇಜ್ರಿವಾಲ್ ಒತ್ತಾಯಿಸಿದರು ಮತ್ತು E20 ಮಿಶ್ರಿತ ಪೆಟ್ರೋಲ್‌ಗೆ ಬೆಲೆಯನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸಿದರು.

ಆಗಸ್ಟ್ 4 ರಂದು ಪ್ರಧಾನಿ ನಿವಾಸದ ಬಳಿ ಮತ್ತೊಮ್ಮೆ ಭಾರಿ ಹೈಡ್ರಾಮ ನಡೆಯಲಿದೆ. ಕಾರಣ ಪ್ರಧಾನಿ ನಿವಾಸ ನಿರ್ಬಂಧಿತ ಪ್ರದೇಶವಾಗಿದೆ. ನಿವಾಸದ ಬಳಿ ಮೆರವಣಿಗೆ ಮಾಡಲು, ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಹೀಗಾಗಿ ಮತ್ತೊಂದು ಸುತ್ತಿನ ಪೊಲೀಸ್ ಆ್ಯಕ್ಷನ್ ದೇಶಾದ್ಯಂತ ಸುದ್ದಿಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com