ಬಾಡಿಗೆ ಸ್ನೇಹಿತನ ನಕಲಿ ಪ್ರೀತಿಗೆ ಬೀಳಬೇಡಿ; ಯುವತಿಯರೇ ಎಚ್ಚರ ತಪ್ಪಿದರೆ ಬರಿಗೈ ಮಾತ್ರವಲ್ಲ, ಮಾನವೂ ಹರಾಜು!

ಯುವತಿಯರೇ ಎಚ್ಚರ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂಟಿತನ ದೂರ ಮಾಡಲು ಆಕರ್ಷಕ ಯುವಕರು ಬಾಡಿಗೆಗೆ ಸಿಗುತ್ತಾರೆ ಅಂದ್ರೆ, 'ಬಾಡಿಗೆ ಸ್ನೇಹಿತ' (Rent a Friend) ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಪೋಸ್ಟರ್‌ಗಳನ್ನು ಹಾಕಿ ಹೊಸ ಮಾದರಿಯ ವಂಚನೆಗಳು (Dating Trap) ನಡೆಯುತ್ತಿದೆ
Rent a Boyfriend
ಬಾಡಿಗೆ ಸ್ನೇಹಿತ
Updated on

ಹೈದರಾಬಾದ್: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂಟಿತನ ದೂರ ಮಾಡಲು ಆಕರ್ಷಕ ಯುವಕರು ಬಾಡಿಗೆಗೆ ಸಿಗುತ್ತಾರೆ ಅಂದ್ರೆ, 'ಬಾಡಿಗೆ ಸ್ನೇಹಿತ' (Rent a Friend) ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಪೋಸ್ಟರ್‌ಗಳನ್ನು ಹಾಕಿ ಹೊಸ ಮಾದರಿಯ ವಂಚನೆಗಳು (Dating Trap) ನಡೆಯುತ್ತಿದೆ ಎಂದು ಪೊಲೀಸ್ ಕಮೀಷನರ್ ವಿ.ಸಿ. ಸಜ್ಜನರ್ ಯುವತಿಯರಿಗೆ ಎಚ್ಚರಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಒಂಟಿತನ ದೂರ ಮಾಡಲು ಆಕರ್ಷಕ ಯುವಕರು ಬಾಡಿಗೆಗೆ ಸಿಗುತ್ತಾರೆ ಎಂದು ಜಾಹೀರಾತುಗಳನ್ನು ಬಿಡಲಾಗುತ್ತಿದೆ. ನಿಮ್ಮೊಂದಿಗೆ ಸಮಯ ಕಳೆಯಲು, ಸಿನಿಮಾಗೆ ಹೋಗಲು ಅಥವಾ ಶಾಪಿಂಗ್ ಮಾಡಲು ಸುಂದರ ಯುವಕರು ಲಭ್ಯವಿದ್ದು, ಕೊಡುಗೆಯಾಗಿ ಶೇ.50 ರಿಯಾಯಿತಿ ನೀಡಲಾಗುತ್ತಿದೆ ಎಂದು ವಂಚಕರು ಯುವತಿಯರನ್ನು ಆಕರ್ಷಿಸುತ್ತಿದ್ದಾರೆ ಎಂದು ಹೈದರಾಬಾದ್​​ನ ಪೊಲೀಸ್​ ಕಮೀಷನರ್​ ವಿ.ಸಿ. ಸಜ್ಜನರ್ ತಿಳಿಸಿದ್ದಾರೆ. ಈ ಹಿಂದೆ ಇದೇ ಮಾದರಿಯ ಬಾಡಿಗೆ ಸ್ನೇಹಿತ ಟ್ರೆಂಡ್ ಬೆಂಗಳೂರಿನಲ್ಲೂ ನಡೆದಿತ್ತು ಎನ್ನುವುದು ಗಮನಾರ್ಹ.

Rent a Boyfriend
ಬಿಗ್ ಬಾಸ್ ಖ್ಯಾತಿಯ ನಟಿ ಐಶ್ವರ್ಯಾ ಸಿಂಧೋಗಿಗೆ ಅಶ್ಲೀಲ ಕಮೆಂಟ್; ಸಂಜಯನಗರ ಠಾಣೆಯಲ್ಲಿ ದೂರು ದಾಖಲು

ವಂಚನೆ ನಡೆಯುವುದು ಹೇಗೆ?

  • ಆಕರ್ಷಕ ಜಾಹೀರಾತುಗಳು: ಒಂಟಿತನ ಕಾಡುತ್ತಿದೆಯೇ? ಕಾಫಿ ಡೇಟ್, ಸಿನಿಮಾ ಅಥವಾ ಶಾಪಿಂಗ್ ಹೋಗಲು ಹ್ಯಾಂಡ್ಸಮ್ ಹುಡುಗರು ಬೇಕೆ? 50% ರಿಯಾಯಿತಿ ಇದೆ ಎಂಬಂತಹ ಆಕರ್ಷಕ ಆಫರ್‌ಗಳ ಪೋಸ್ಟರ್‌ಗಳನ್ನು ಹರಿಬಿಡಲಾಗುತ್ತದೆ.

  • ದರ ಪಟ್ಟಿ: ಕೇವಲ ₹499 ರಿಂದ ₹4,499 ರವರೆಗೆ (ಕಾಫಿ ಮೀಟಿಂಗ್‌ನಿಂದ ಹಿಡಿದು ಇಡೀ ದಿನದ ಪ್ಯಾಕೇಜ್‌ವರೆಗೆ) ದರ ನಿಗದಿಪಡಿಸಿ ಯುವತಿಯರನ್ನು ಸೆಳೆಯಲಾಗುತ್ತದೆ.

  • ನಕಲಿ ಪ್ರೊಫೈಲ್‌ಗಳು: ಜಾಹೀರಾತಿನಲ್ಲಿ ಬಳಸುವ ಯುವಕರ ಫೋಟೋಗಳು ಒಂದೋ ಇಂಟರ್ನೆಟ್‌ನಿಂದ ಕದ್ದಿರುತ್ತವೆ ಅಥವಾ AI ಬಳಸಿ ಸೃಷ್ಟಿಸಿದ ನಕಲಿ ಚಿತ್ರಗಳಾಗಿರುತ್ತವೆ.

  • ಹಣ ವಸೂಲಿ ಮತ್ತು ಬ್ಲ್ಯಾಕ್‌ಮೇಲ್: ಯುವತಿಯರು ಇವರನ್ನು ಸಂಪರ್ಕಿಸಿದಾಗ ಮೊದಲು ಆಡ್ವಾನ್ಸ್ ಬುಕಿಂಗ್ ಶುಲ್ಕ ಅಥವಾ ಸೆಕ್ಯೂರಿಟಿ ಡಿಪಾಸಿಟ್ ಹೆಸರಿನಲ್ಲಿ ಕ್ಯೂಆರ್ ಕೋಡ್ (QR Code) ಮೂಲಕ ಹಣ ಪೀಕುತ್ತಾರೆ. ಹಣ ಪಡೆದ ನಂತರ ನಂಬರ್ ಬ್ಲಾಕ್ ಮಾಡುತ್ತಾರೆ. ಕೆಲವು ಪ್ರಕರಣಗಳಲ್ಲಿ, ಚಾಟಿಂಗ್ ವೇಳೆ ಪಡೆದ ಯುವತಿಯರ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com