109 ವರ್ಷ ಕಳೆದರು ತೀರಿಸಿಲ್ಲ ಸಾಲ! 35 ಸಾವಿರಕ್ಕಾಗಿ ಬ್ರಿಟಿಷರಿಗೆ ಲೀಗಲ್ ನೋಟಿಸ್; ವಾರ್ ಲೋನ್ ಬಗ್ಗೆ ಬ್ರಿಟನ್ ಹೇಳಿದ್ದೇನು?

ಬ್ರಿಟಿಷ್ ಸಾಮ್ರಾಜ್ಯವು ಇಡೀ ಜಗತ್ತನ್ನು ಆಳುತ್ತಿದ್ದ ಕಾಲದಲ್ಲೂ ಭಾರತದ ಸಾಮಾನ್ಯ ಉದ್ಯಮಿಯಿಂದ ಸಾಲ ಪಡೆಯುವ ಪರಿಸ್ಥಿತಿ ಬಂದಿತ್ತು ಅಂದ್ರೆ ನಂಬುತ್ತೀರಾ? 109 ವರ್ಷಗಳ ಹಿಂದೆ ನಡೆದ ಕುತೂಹಲಕಾರಿ ಘಟನೆ ಈಗ ಬೆಳಕಿಗೆ ಬಂದಿದ್ದು, ಕುಟುಂಬವೊಂದು ಬ್ರಿಟಿಷ್ ಸರ್ಕಾರದಿಂದ ಹಣ ವಾಪಾಸ್ ಪಡೆಯಲು ಮುಂದಾಗಿದೆ.
100-Year-Old British Raj Debt
ಜುಮ್ಮಾಲಾಲ್ ಅವರ ಮೊಮ್ಮಗ ವಿವೇಕ್ ರುಥಿಯಾOnline Desk
Updated on

ಸೆಹೋರ್ (ಮಧ್ಯಪ್ರದೇಶ): ಖ್ಯಾತ ಅರ್ಥಶಾಸ್ತ್ರಜ್ಞೆ ಉತ್ಸಾ ಪಟ್ನಾಯಕ್ ಅಧ್ಯಯನದ ಪ್ರಕಾರ ಬ್ರಿಟಿಷರು ಭಾರತದಿಂದ ಸುಮಾರು $45 ಟ್ರಿಲಿಯನ್ ಅಂದ್ರೆ 3,700 ಲಕ್ಷ ಕೋಟಿ ಹಣವನ್ನ ಲೂಟಿ ಮಾಡಿದರು. ಆದ್ರೆ, ಸ್ವಾತಂತ್ರ್ಯ ಬಂದು 80 ವರ್ಷವಾದರೂ ಇದುವರೆಗೆ ಒಂದು ನಯಾಪೈಸೆ ಕೂಡ ವಾಪಾಸ್ ಬಂದಿಲ್ಲ; ಇದರ ನಡುವೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟಿಷರು ಭಾರತದಿಂದ ಪಡೆದ ಸಾಲದ ಹಣವನ್ನ ಮರಳಿ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯ ರುಥಿಯಾ ಕುಟುಂಬಕ್ಕೆ ಇತ್ತೀಚೆಗೆ 109 ವರ್ಷಗಳ ಹಳೆಯ ಬ್ರಿಟಿಷ್ ಯುದ್ಧ ಸಾಲದ (War Loan) ಪತ್ರವೊಂದು ಸಿಕ್ಕಿದೆ. ಭೋಪಾಲ್ ಸಂಸ್ಥಾನದ ಪ್ರಮುಖ ಧಾನ್ಯ ಮತ್ತು ಬಟ್ಟೆ ವ್ಯಾಪಾರಿಯಾಗಿದ್ದ ಸೇಠ್ ಜುಮ್ಮಾ ಲಾಲ್ ರುಥಿಯಾ ಎಂಬುವವರು ಬ್ರಿಟಿಷ್ ಸಾಮ್ರಾಜ್ಯಕ್ಕೆ ಮೊದಲ ಮಹಾಯುದ್ಧ ಸಂದರ್ಭ ಸಾಲ ನೀಡಿದ್ದರು.

ಹೌದು, ಜೂನ್ 4, 1917 ರಂದು ಬ್ರಿಟಿಷರ ಇಂಡಿಯನ್ ವಾರ್ ಲೋನ್ ಯೋಜನೆಗೆ ಅವರು ₹35,000 ಹೂಡಿಕೆ ಮಾಡಿದ್ದರು. ಈ ಸಾಲಕ್ಕೆ ವಾರ್ಷಿಕ ಶೇ. 5.5 ರಷ್ಟು ಬಡ್ಡಿ ನಿಗದಿ ಪಡಿಸಿ ಅಂದಿನ ಭೋಪಾಲ್ ರಾಜಕೀಯ ಏಜೆಂಟ್ ಡಬ್ಲ್ಯೂ.ಎಸ್. ಡೇವಿಸ್ ಸಹಿ ಹಾಕಿದ್ದರು. ಏತನ್ಮಧ್ಯೆ, ಸಾಲ ನೀಡಿದ 20 ವರ್ಷಗಳ ನಂತರ, ಅಂದರೆ 1937 ರಲ್ಲಿ ಸೇಠ್ ಜುಮ್ಮಾಲಾಲ್ ಅವರು ನಿಧನರಾದರು. ಕಾಲಕ್ರಮೇಣ ಈ ವಿಚಾರವು ಮರೆತುಹೋಗಿತ್ತು. ಆದರೆ ಇತ್ತೀಚೆಗೆ ಜುಮ್ಮಾಲಾಲ್ ಅವರ ಮಗ ನಿಧನರಾದಾಗ, ಕುಟುಂಬದ ಹಳೆಯ ಪತ್ರಗಳು, ಉಯಿಲು ಮತ್ತು ಪ್ರಮಾಣಪತ್ರಗಳನ್ನು ಪರಿಶೀಲಿಸುವಾಗ ಈ ಸಾಲದ ದಾಖಲೆಗಳು ಪತ್ತೆಯಾಗಿವೆ.

100-Year-Old British Raj Debt
ಭಾರತ - ರಷ್ಯಾ ನಡುವೆ ರೈಲು? ಪುಟಿನ್ ಸರ್ಕಾರದಿಂದ ಮಾಸ್ಟರ್ ಪ್ಲಾನ್!

ಮುಂದುವರೆದು, ಜುಮ್ಮಾಲಾಲ್ ಅವರ ಮೊಮ್ಮಗ ವಿವೇಕ್ ರುಥಿಯಾ ಅವರು ಈ ದಾಖಲೆಗಳ ಆಧಾರದ ಮೇಲೆ, ಪಾವತಿಸದ ಈ ಸಾರ್ವಭೌಮ ಸಾಲವನ್ನು ಮರುಪಾವತಿಸುವಂತೆ ತಮ್ಮ ವಕೀಲರ ಮೂಲಕ 2026ರ ಫೆಬ್ರವರಿಯಲ್ಲಿ ಬ್ರಿಟನ್ ಸರ್ಕಾರಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಇನ್ನು, ಕುಟುಂಬದ ಪ್ರಕಾರ, "ಇದು ಕೇವಲ ಹಣದ ವಿಷಯವಲ್ಲ, ಬದಲಿಗೆ ಐತಿಹಾಸಿಕ ಜವಾಬ್ದಾರಿ ಮತ್ತು ಗೌರವದ ಪ್ರಶ್ನೆಯಾಗಿದೆ. ಬ್ರಿಟಿಷ್ ಸರ್ಕಾರವು ಈ ಸಾಲವನ್ನು ಮರುಪಾವತಿಸಿದ್ದರೆ ಅದರ ದಾಖಲೆಯನ್ನು ತೋರಿಸಲಿ, ಇಲ್ಲದಿದ್ದರೆ ನ್ಯಾಯ ಒದಗಿಸಲಿ" ಎಂಬುದು ಅವರ ಬೇಡಿಕೆಯಾಗಿದೆ.

ಏತನ್ಮಧ್ಯೆ, ಇತ್ತೀಚೆಗೆ ಬ್ರಿಟನ್ ಸರ್ಕಾರದ ಸಾಲ ನಿರ್ವಹಣಾ ಕಚೇರಿಯು (Debt Management Office) ಈ ಮನವಿಗೆ ಸ್ಪಂದಿಸಿದ್ದು, ದಾಖಲೆಗಳ ಪರಿಶೀಲನೆಗಾಗಿ ಮೂಲ ಪತ್ರಗಳ ಡಿಜಿಟಲ್ ಅಥವಾ ಭೌತಿಕ ಪ್ರತಿಗಳನ್ನು ಸಲ್ಲಿಸುವಂತೆ ಕುಟುಂಬದ ವಕೀಲರನ್ನು ಕೇಳಿದೆ.

100-Year-Old British Raj Debt
ನಮ್ಮ ₹10 ಈ ದೇಶದಲ್ಲಿ ₹1260! ಕೇವಲ ₹35 ಸಾವಿರಕ್ಕೆ ವಿದೇಶ ಪ್ರವಾಸ, ಕಡಿಮೆ ಬಜೆಟ್​​ನಲ್ಲಿ ರಾಜಾತಿಥ್ಯ ಸಿಗುವ ಆ ದೇಶ ಯಾವುದು ಗೊತ್ತಾ?

ಅಂದಿನ 35 ಸಾವಿರ ಇಂದು ಎಷ್ಟು?

1917 ರ ಬ್ರಿಟಿಷ್ ವಾರ್ ಲೋನ್ ಪ್ರಮಾಣಪತ್ರದ ಪ್ರಕಾರ ಈ ಸಾಲಕ್ಕೆ ಶೇಕಡಾ 5.5% ವಾರ್ಷಿಕ ಬಡ್ಡಿಯನ್ನು ನಿಗದಿಪಡಿಸಲಾಗಿತ್ತು. ಅದರಂತೆ, ಈ 5.5% ಬಡ್ಡಿದರವನ್ನು ಸತತ 109 ವರ್ಷಗಳ ಕಾಲ ವಾರ್ಷಿಕ ಚಕ್ರಬಡ್ಡಿಯಾಗಿ ಲೆಕ್ಕ ಹಾಕಿದರೆ, ಮೂಲ ₹35,000 ಮೊತ್ತವು ಇಂದು ಅಂದಾಜು ₹10 ಕೋಟಿಗೂ ಅಧಿಕ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com