CJP ಸಂಸ್ಥಾಪಕ ಅಭಿಜಿತ್ ದೀಪ್ಕೆ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ; ಇಬ್ಬರು ಯುವಕರು ಆಸ್ಪತ್ರೆಗೆ ಸ್ಥಳಾಂತರ

ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಹ್ಮಭಟ್, ಪೊಲೀಸರು ತಮ್ಮನ್ನು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆಸ್ಪತ್ರೆಗೆ ದಾಖಲಾದರೂ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದರು.
Abhijeet Dipke, founder of the Cockroach Janta Party
ಕಾಕ್‌ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ
Updated on

ಛತ್ರಪತಿ ಸಂಭಾಜಿನಗರ: ಆಗಸ್ಟ್ 6 ರಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರಕಟಿಸಿದ ಕೋರ್ ಸಮಿತಿ ಸದಸ್ಯರ ಪಟ್ಟಿಯನ್ನು ವಿರೋಧಿಸಿ ಛತ್ರಪತಿ ಸಂಭಾಜಿನಗರದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮನೀಶ್ ಬ್ರಹ್ಮಭಟ್ ಮತ್ತು ರಾಹುಲ್ ಪಾಂಡ್ಯ ಎಂಬ ಇಬ್ಬರು ಯುವಕರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಇಬ್ಬರು ಯುವಕರು ಸಿಜೆಪಿ (CJP) ನಾಯಕತ್ವದ ವಿರುದ್ಧ ಪಕ್ಷಪಾತದ ಆರೋಪವನ್ನು ಹೊರಿಸಿದ್ದು, ಹೊಸದಾಗಿ ರಚಿಸಲಾದ ಪ್ರಮುಖ ಸಮಿತಿಯಿಂದ ತಳಮಟ್ಟದ ಕಾರ್ಯಕರ್ತರನ್ನು ಹೊರಗಿಡಲಾಗಿದೆ ಎಂದು ದೂರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಹ್ಮಭಟ್, ಪೊಲೀಸರು ತಮ್ಮನ್ನು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆಸ್ಪತ್ರೆಗೆ ದಾಖಲಾದರೂ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದರು.

ಈ ಇಬ್ಬರು ಆಸ್ಪತ್ರೆಗೆ ದಾಖಲಾದ ನಂತರ, ಪ್ರತಿಭಟನಾ ಸ್ಥಳದಲ್ಲಿ ಅವರ ಬದಲಿಗೆ ಮತ್ತಿಬ್ಬರು ಹೊಸ ಯುವಕರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ; ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ವಿರುದ್ಧದ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಅವರು ಘೋಷಿಸಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ತಾವು ದೀಪ್ಕೆ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರೂ, ಪ್ರಮುಖ ಸಮಿತಿಯ ಸಭೆಗೆ ದೀಪ್ಕೆ ಅವರ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ಬ್ರಹ್ಮಭಟ್ ಮತ್ತು ಪಾಂಡ್ಯ ಈ ಹಿಂದೆ ಹೇಳಿದ್ದರು. ಈ ಚಳುವಳಿಯು ದೇಶಾದ್ಯಂತದ ಯುವಜನತೆಗೆ ಸೇರಿದ್ದೇ ಹೊರತು ಯಾವುದೇ ಒಬ್ಬ ವ್ಯಕ್ತಿಗಲ್ಲ ಎಂದು ಪ್ರತಿಪಾದಿಸಿದ ಅವರು, ಸಂಘಟನೆಯೊಳಗೆ ಹೆಚ್ಚಿನ ಆಂತರಿಕ ಪ್ರಜಾಪ್ರಭುತ್ವ ಇರಬೇಕೆಂದು ಆಗ್ರಹಿಸಿದರು. ಅಲ್ಲದೆ, ಸಮಿತಿಯಲ್ಲಿ ಪ್ರತಿ ರಾಜ್ಯದ ಸ್ವಯಂಸೇವಕರಿಗೂ ಪ್ರಾತಿನಿಧ್ಯ ನೀಡಬೇಕೆಂದು ಅವರು ಒತ್ತಾಯಿಸಿದರು.

Abhijeet Dipke, founder of the Cockroach Janta Party
ಅಮೆರಿಕದಲ್ಲಿ ಓದಲು ಮಾಡಿರುವ ಶೈಕ್ಷಣಿಕ ಸಾಲ ಇನ್ನೂ ಬಾಕಿಯಿದೆ, ಯಾರು ಬೇಕಾದರೂ ಪರಿಶೀಲಿಸಿ: CJP ಸಂಸ್ಥಾಪಕ ಅಭಿಜಿತ್ ದೀಪ್ಕೆ; Video

ಇಬ್ಬರು ಪ್ರತಿಭಟನಾಕಾರರನ್ನು ಆಸ್ಪತ್ರೆಗೆ ದಾಖಲಿಸಿದ ವಿಷಯದ ಕುರಿತು ದೀಪ್ಕೆ ಸೋಮವಾರ ಸಂಜೆಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com