ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು Gen Zಗಳೇ ಅಲ್ಲ; 'ಶಬಾನಾ ಅಜ್ಮಿಯಂತವರೇ' ಹೆಚ್ಚು: ಕಂಗನಾ

"ಜನರೇಷನ್ ಗಟರ್" ಹೇಳಿಕೆ ನೀಟ್-ಯುಜಿ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ನಿರ್ಧಿಷ್ಟ ಗುಂಪನ್ನು ಗುರಿಯಾಗಿರಿಸಿಕೊಂಡಿದೆಯೇ ಹೊರತು ಒಟ್ಟಾರೆಯಾಗಿ ಜೆನ್ ಝಿಯನ್ನು ಟಾರ್ಗೆಟ್ ಮಾಡಿಲ್ಲ ಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
 Kangana Ranaut
ಕಂಗನಾ ರಣಾವತ್
Updated on

ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಜೆನ್ ಝಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ "ಜನರೇಷನ್ ಗಟರ್" ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ "ಶಬಾನಾ ಅಜ್ಮಿಯಂತಹ ಜನರೇ" ಹೆಚ್ಚಾಗಿ ಭಾಗವಹಿಸಿದ್ದರು. ಜೆನ್ ಝಿಗಲೇ ಇರಲ್ಲಿಲ್ಲ. ಇತರೆ ವಯೋಮಾನದ ಜನ ಭಾಗವಹಿಸಿದ್ದ ಪ್ರತಿಭಟನೆಯನ್ನು ಜೆನ್ ಝಿ ಪ್ರತಿಭಟನೆ ಎಂದು ಹೇಗೆ ಹೇಳುತ್ತೀರಾ? ಎಂದು ನಟಿ-ರಾಜಕಾರಣಿ ಪ್ರಶ್ನಿಸಿದ್ದಾರೆ.

"ಜನರೇಷನ್ ಗಟರ್" ಹೇಳಿಕೆ ನೀಟ್-ಯುಜಿ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ನಿರ್ಧಿಷ್ಟ ಗುಂಪನ್ನು ಗುರಿಯಾಗಿರಿಸಿಕೊಂಡಿದೆಯೇ ಹೊರತು ಒಟ್ಟಾರೆಯಾಗಿ ಜೆನ್ ಝಿಯನ್ನು ಟಾರ್ಗೆಟ್ ಮಾಡಿಲ್ಲ ಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

 Kangana Ranaut
'Gen Z'ಗಳನ್ನು 'ಜನರೇಷನ್ ಗಟರ್' ಎಂದು ಕರೆದು ವಿವಾದ ಸೃಷ್ಟಿಸಿದ್ದ ಕಂಗನಾ ರಣಾವತ್ ಈಗ ಯೂಟರ್ನ್!

ಈ ಸಂಬಂಧ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಂಗನಾ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಈ ದೇಶದ ಯುವಕರ ಬಗ್ಗೆ ಮಾತನಾಡುತ್ತಿದ್ದೀರಾ? ಜೆನ್ ಜಿ (Gen Z) ಜನಸಂಖ್ಯೆ ಸುಮಾರು 30ರಿಂದ 35 ಕೋಟಿ ಇದೆ. ಆದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ನೆರೆದಿದ್ದ 10 ಸಾವಿರ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಶಬಾನಾ ಆಜ್ಮಿ ವಯಸ್ಸಿನವರಾಗಿದ್ದರು. ಅಲ್ಲಿ ವಿವಿಧ ವಯೋಮಾನದ ಜನರಿದ್ದರು. ಕೇವಲ 2 ಸಾವಿರದಷ್ಟು ಮಾತ್ರ ಜೆನ್ ಜಿ ಯುವಕರಿದ್ದರು. ಹಾಗಿರುವಾಗ ಇದನ್ನು ಇಡೀ ದೇಶದ ಜೆನ್ ಜಿ ನಡೆಸಿದ ಪ್ರತಿಭಟನೆ ಎಂದು ಹೇಗೆ ಕರೆಯುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.

ನಾನು ಯುವಕರ ವಿರೋಧಿ ಅಲ್ಲ

ಮುಂದುವರಿದು ಮಾತನಾಡಿದ ಕಂಗನಾ ರಣಾವತ್ ಅವರು, ‘ನಾನು ಅಲ್ಲಿ ನೆರೆದಿದ್ದ ನಿರ್ದಿಷ್ಟ ಗುಂಪನ್ನು ಉದ್ದೇಶಿಸಿ ಮಾತ್ರ ಹೇಳಿಕೆ ನೀಡಿದ್ದೆ. ಇಡೀ ಯುವ ಪೀಳಿಗೆಯನ್ನು ನಿಂದಿಸಿರುವ ಒಂದೇ ಒಂದು ಸಾಲನ್ನು ತೋರಿಸಿ ಎಂದು ನಿಮಗೆ ಬಹಿರಂಗ ಸವಾಲು ಹಾಕುತ್ತೇನೆ. ನನ್ನ ವಿರುದ್ಧ ಅನಗತ್ಯ ಅಜೆಂಡಾ ಚಲಾಯಿಸಬೇಡಿ, ನಾನು ಕೂಡ ಯುವತಿಯಾಗಿದ್ದು, ಯುವಕರ ವಿರುದ್ಧವಿಲ್ಲ’ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com