ಇಂಡಿಗೋ ವಿಮಾನ ರದ್ದು: ತಾಳ್ಮೆ ಕಳೆದುಕೊಂಡ ಮಹಿಳೆ, ಕೈಗೆ ಸಿಕ್ಕಿದ್ದನ್ನು ಎಸೆದು ರಂಪಾಟ! 49,000 ರೂ. ಮೌಲ್ಯದ ವಸ್ತು ಹಾನಿ, Video

ಈ ಮಹಿಳೆ 49,000 ರೂ. ಮೌಲ್ಯದ ವಿಮಾನ ನಿಲ್ದಾಣದ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಶಿಸ್ತಿನ ವರ್ತನೆ ತೋರಿದ ಮಹಿಳೆಯನ್ನು ಭದ್ರತಾ ಸಂಸ್ಥೆಗಳಿಗೆ ಒಪ್ಪಿಸಲಾಗಿದ್ದು, ಆಕೆಯ ವಿರುದ್ಧ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ.
Woman damages Bhubaneswar airport
ವಿಮಾನ ನಿಲ್ದಾಣದಲ್ಲಿ ಮಹಿಳೆ ರಂಪಾಟ
Updated on

ಒಡಿಶಾ: ಇಂಡಿಗೋ ವಿಮಾನ ರದ್ದಾದ ಹಿನ್ನೆಲೆಯಲ್ಲಿ ಕೋಪಗೊಂಡ ಮಹಿಳೆಯೊಬ್ಬಳು ವಿಮಾನ ನಿಲ್ದಾಣದಲ್ಲಿದ್ದ ಕಂಪ್ಯೂಟರ್ ಕೀ ಬೋರ್ಡ್, ಮಾನಿಟರ್ ಸೇರಿದಂತೆ ಕೈಗೆ ಸಿಕ್ಕಿದ್ದನ್ನು ಎಸೆದು ರಂಪಾಟ ನಡೆಸಿರುವ ಘಟನೆ

ಒಡಿಶಾದ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಗುರುವಾರ ಈ ಘಟನೆ ನಡೆದಿದ್ದು, ಭುವನೇಶ್ವರದಿಂದ ಕೋಲ್ಕತ್ತಾಗೆ ಹೊರಡಬೇಕಿದ್ದ ಇಂಡಿಗೋ ವಿಮಾನವು ರದ್ದಾದ ನಂತರ ತಾಳ್ಮೆ ಕಳೆದುಕೊಂಡ ಮಹಿಳಾ ಪ್ರಯಾಣಿಕರೊಬ್ಬರು ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ ಅಧಿಕಾರಿಗಳ ಸಮ್ಮುಖದಲ್ಲಿಯೇ ವಿಮಾನ ನಿಲ್ದಾಣದಲ್ಲಿನ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸುತ್ತಾ, ಅಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ರಂಪಾಟ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ಈ ಮಹಿಳೆ 49,000 ರೂ. ಮೌಲ್ಯದ ವಿಮಾನ ನಿಲ್ದಾಣದ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಶಿಸ್ತಿನ ವರ್ತನೆ ತೋರಿದ ಮಹಿಳೆಯನ್ನು ಭದ್ರತಾ ಸಂಸ್ಥೆಗಳಿಗೆ ಒಪ್ಪಿಸಲಾಗಿದ್ದು, ಆಕೆಯ ವಿರುದ್ಧ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಇಂಡಿಗೋ ಹೇಳಿದ್ದೇನು? "ಆಗಸ್ಟ್ 13 ರಂದು ಭುವನೇಶ್ವರದಿಂದ ಕೋಲ್ಕತ್ತಾಗೆ ತೆರಳಬೇಕಾಗಿದ್ದ ಇಂಡಿಗೋ ವಿಮಾನ 6E 7352 ಹಾರಾಟಕ್ಕೂ ಮುನ್ನ ನಡೆದ ತಪಾಸಣೆಯ ವೇಳೆ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಯಿತು. ಈ ವೇಳೆ ವಿಮಾನ ನಿಲ್ದಾಣದ ವಸ್ತುಗಳಿಗೆ ಹಾನಿ ಮಾಡಿದ ಪ್ರಯಾಣಿಕರೊಬ್ಬರನ್ನು ಅಶಿಸ್ತಿನ ವರ್ತನೆ ತೋರಿದವರು ಎಂದು ಘೋಷಿಸಿ, ಪ್ರಮಾಣಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಂಬಂಧಿತ ಭದ್ರತಾ ಸಂಸ್ಥೆಗಳಿಗೆ ಒಪ್ಪಿಸಲಾಯಿತು ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

Woman damages Bhubaneswar airport
ಕೆಂಪೇಗೌಡ ವಿಮಾನ ನಿಲ್ದಾಣ–ಕೋಝಿಕ್ಕೋಡ್ ನಡುವೆ ಆಗಸ್ಟ್ 15ರಿಂದ KSRTC ಫ್ಲೈಬಸ್ ಸೇವೆ

"ಗ್ರಾಹಕರು ತೋರಿದ ತಾಳ್ಮೆ ಮತ್ತು ತಿಳುವಳಿಕೆಗೆ ನಾವು ಧನ್ಯವಾದ ಸಲ್ಲಿಸುತ್ತೇವೆ. ಇಂಡಿಗೋದಲ್ಲಿ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆಗಳಾಗಿವೆ," ಎಂದು ಇಂಡಿಗೋದ ವಕ್ತಾರರು ತಿಳಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಹಾಗೂ ಹಾನಿಗೊಳಗಾದ ಉಪಕರಣದ ವೆಚ್ಚವನ್ನು ಪ್ರಯಾಣಿಕರಿಂದ ವಸೂಲು ಮಾಡುವಂತೆಯೂ ಬಿಪಿಐಎ (BPIA) ಅಧಿಕಾರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com