

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಆಗಸ್ಟ್ 15ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ಕೋಝಿಕ್ಕೋಡ್ ನಡುವೆ ಹೊಸ ಫ್ಲೈಬಸ್ ಸೇವೆಯನ್ನು ಆರಂಭಿಸಲಿದೆ.
ಪ್ರತಿದಿನ ಎರಡು ಬಸ್‌ಗಳು ಸಂಚರಿಸಲಿದ್ದು, ಯಲಹಂಕ, ಹೆಬ್ಬಾಳ, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟ, ಮಾನಂತವಾಡಿ ಮತ್ತು ಕಲ್ಪೆಟ್ಟ ಮಾರ್ಗವಾಗಿ ಕೋಝಿಕ್ಕೋಡ್ ಗೆ ತೆರಳಲಿವೆ.
ಒಂದು ಬಸ್ ರಾತ್ರಿ 10.45ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟು ಬೆಳಿಗ್ಗೆ 7.15ಕ್ಕೆ ಕೋಝಿಕ್ಕೋಡ್ ಗೆ ತಲುಪಲಿದೆ. ಮತ್ತೊಂದು ಬಸ್ ಬೆಳಿಗ್ಗೆ 4.15ಕ್ಕೆ ಹೊರಟು ಸಂಜೆ 7.30ಕ್ಕೆ ಕೋಝಿಕ್ಕೋಡ್ ತಲುಪಲಿದೆ.
ಪ್ರಯಾಣ ದರವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
ಮೈಸೂರು – 960 ರೂ
ಗೋಣಿಕೊಪ್ಪ – 1,200 ರೂ
ಮಾನಂತವಾಡಿ – 1,350 ರೂ
ಕಲ್ಪೆಟ್ಟ – 1,400 ರೂ
ಕೋಝಿಕ್ಕೋಡ್ – 1,500 ರೂ ಎಂದು
ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.