ನಮ್ಮನ್ನು ಜೈಲಿಗೆ ಹಾಕ್ಲಿ, ನೇಣಿಗೇ ಹಾಕ್ಲಿ, ನಾವು 'ವಂದೇ ಮಾತರಂ' ಹಾಡೋದು ಎರಡು ಚರಣ ಮಾತ್ರ: ಬಿ ಕೆ ಹರಿಪ್ರಸಾದ್-Video

ಕೆಪಿಸಿಸಿ ಅಧ್ಯಕ್ಷನಾಗಿ, 1896ರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕವಾಗಿ ಹಾಡುತ್ತಾ ಬಂದಿರುವ ವಂದೇ ಮಾತರಂನ ಎರಡು ಚರಣಗಳನ್ನಷ್ಟೇ ನಾವು ಹಾಡುವುದನ್ನು ಮುಂದುವರಿಸಿಕೊಂಡು ಹೋಗುವುದು ಎಂದರು.
B K Hariprasad
ಬಿ ಕೆ ಹರಿಪ್ರಸಾದ್
Updated on

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಎರಡು ಚರಣಗಳನ್ನಷ್ಟೇ ಹಾಡುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ. ಇದು ಪಕ್ಷದ ನಿರ್ಧಾರಕ್ಕೆ ಅನುಗುಣವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ಕೆ ಹರಿಪ್ರಸಾದ್, ಸರ್ಕಾರ ಈ ಕುರಿತು ಕಾನೂನು ರೂಪಿಸಿರಬಹುದು, ಆದರೆ ಕೆಪಿಸಿಸಿ ಅಧ್ಯಕ್ಷನಾಗಿ, 1896ರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕವಾಗಿ ಹಾಡುತ್ತಾ ಬಂದಿರುವ ವಂದೇ ಮಾತರಂನ ಎರಡು ಚರಣಗಳನ್ನಷ್ಟೇ ನಾವು ಹಾಡುವುದನ್ನು ಮುಂದುವರಿಸಿಕೊಂಡು ಹೋಗುವುದು ಎಂದರು.

B K Hariprasad
ಕಾಂಗ್ರೆಸ್‌ಗೆ ರಾಷ್ಟ್ರಗೀತೆ ‘ವಂದೇ ಮಾತರಂ’ ಬಗ್ಗೆ ತೀವ್ರ ಅಸಹನೆ, ಅಗೌರವ: Manoj Tiwari

ನಮ್ಮನ್ನು ಜೈಲಿಗೆ ಹಾಕ್ತಾರೋ, ನೇಣಿಗೆ ಹಾಕ್ತಾರೋ ವಂದೇ ಮಾತರಂನ ಎರಡು ಪ್ಯಾರಾವನ್ನಷ್ಟೇ ಹಾಡುವುದು, ಹಾಡಿನ ಬಗ್ಗೆ ನಮ್ಮ ವಿರೋಧವಿಲ್ಲ, ಆದರೆ ಎರಡು ಪ್ಯಾರ ಮಾತ್ರ ಹೇಳೋಕೆ ಆಗೋದು, ಪೂರ್ಣವಾಗಿ ಯಾವ ಕಾರ್ಯಕ್ರಮದಲ್ಲಿಯೂ ಹಾಡುವುದಿಲ್ಲ ಎಂದರು.

ಪಕ್ಷದ ಕಾರ್ಯಕ್ರಮಗಳಲ್ಲಿ ನಾವು ಸಂಪೂರ್ಣ ಹಾಡನ್ನು ಹಾಡುವುದಿಲ್ಲ. ಇದು ನಮ್ಮ ನಿರ್ಧಾರ ಎಂದರು. ಕಾಂಗ್ರೆಸ್ ಸರ್ಕಾರವೂ ಇದೇ ಪದ್ಧತಿಯನ್ನು ಅನುಸರಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಇದು ಕಾಂಗ್ರೆಸ್ ನೇತೃತ್ವದ ಸರ್ಕಾರವಾದರೂ, ಜನರಿಂದ ಆಯ್ಕೆಯಾದ ಸರ್ಕಾರ. ಅದು ಕಾನೂನಿಗೆ ಬದ್ಧವಾಗಿದೆ. ಕಾನೂನು ರೂಪಿಸಿದ್ದರೆ, ಸರ್ಕಾರ ಅದನ್ನು ಪಾಲಿಸಲೇಬೇಕು ಎಂದು ಹೇಳಿದರು.

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಗಾಂಧಿ ಪೂರ್ಣ ವಂದೇ ಮಾತರಂ ಹಾಡಿಗೆ ಆಕ್ಷೇಪವೆತ್ತಿದ ಬಗ್ಗೆ ಕೇಳಿದ ಪ್ರಶ್ನೆಗೆ ಇದು ಬಿಜೆಪಿಯವರು ತಮಗೆ ಬೇಕಾದಂತೆ ತಿರುಚಿಕೊಳ್ಳುತ್ತಾರೆ. ಆರ್ ಎಸ್ ಎಸ್ ಕಚೇರಿಯಲ್ಲಿ ಸದಾ ವತ್ಸಲೇ ಬದಲಿಗೆ ವಂದೇ ಮಾತರಂ ಹಾಡುತ್ತಾರೆಯೇ ಕೇಳಿ, ಸೋನಿಯಾ ಗಾಂಧಿಯವರು ಅಂದು ತಪ್ಪು ತಪ್ಪಾಗಿ ಹಾಡಿದ್ದಕ್ಕೆ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಿ ಎಂದು ಹೇಳಿದ್ದರು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com