ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ನೆಕ್ಲೆಸ್ ಕದ್ದ ಮಹಿಳೆಯರು; ಖತರ್ನಾಕ್ ಕಳ್ಳಿಯರ "ಕೈ"ಚಳಕ CCTVಯಲ್ಲಿ ಸೆರೆ!

ಬುರ್ಖಾ ಧರಿಸಿದ ಮೂವರು ಮಹಿಳೆಯರು ಮತ್ತು ಕ್ಯಾಪ್ ಧರಿಸಿದ ಒಬ್ಬ ವ್ಯಕ್ತಿ, ಗ್ರಾಹಕರಂತೆ ಅಂಗಡಿಗೆ ಪ್ರವೇಶಿಸಿ, ಆಭರಣಗಳನ್ನು ತೋರಿಸಲು ಕೇಳಿದೆ.
Women In Burqa Pose As Customers, Steal Gold Necklace From Telangana Shop
CCTV ದೃಶ್ಯ
Updated on

ಸಂಗಾರೆಡ್ಡಿ: ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರ ತಂಡವೊಂದು ಆಭರಣ ಅಂಗಡಿಯಿಂದ ಸುಮಾರು ಏಳು ತೊಲ(ಸುಮಾರು 70 ಗ್ರಾಂ) ತೂಕದ ಚಿನ್ನದ ನೆಕ್ಲೆಸ್ ಕದ್ದಿದ್ದು, ತೆಲಂಗಾಣ ಆಭರಣ ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.

ಭಾನುವಾರ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹಿರಾಬಾದ್ ಪಟ್ಟಣದ ಆಭರಣ ಅಂಗಡಿಗೆ ಆಗಮಿಸಿದ ಮಹಿಳೆಯರ ತಂಡ, ಚಿನ್ನದ ನೆಕ್ಲೆಸ್ ಕದ್ದು ಪರಾರಿಯಾಗಿದೆ.

ಪೊಲೀಸರಿಗೆ ಸಲ್ಲಿಸಲಾದ ದೂರಿನ ಪ್ರಕಾರ, ಬುರ್ಖಾ ಧರಿಸಿದ ಮೂವರು ಮಹಿಳೆಯರು ಮತ್ತು ಕ್ಯಾಪ್ ಧರಿಸಿದ ಒಬ್ಬ ವ್ಯಕ್ತಿ, ಗ್ರಾಹಕರಂತೆ ಅಂಗಡಿಗೆ ಪ್ರವೇಶಿಸಿ, ಆಭರಣಗಳನ್ನು ತೋರಿಸಲು ಕೇಳಿದೆ.

Women In Burqa Pose As Customers, Steal Gold Necklace From Telangana Shop
ಮೋದಿ ಮುಖವಾಡ ಧರಿಸಿ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳ: ₹5 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್‌ ಕಳ್ಳತನ; ಸಿಸಿಟಿವಿ ದೃಶ್ಯ ನೋಡಿ!

ಅಂಗಡಿ ಸಿಬ್ಬಂದಿ ಅವರಿಗೆ ಆಭರಣ ತೋರಿಸುತ್ತಿದ್ದಾಗ, ಆರೋಪಿಗಳು ಗಮನವನ್ನು ಬೇರೆಡೆಗೆ ತಿರುಗಿಸಿ ಆವರಣದಿಂದ ಹೊರಹೋಗುವ ಮೊದಲು ಚಿನ್ನದ ಹಾರವನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು, ಶಂಕಿತರನ್ನು ಗುರುತಿಸಲು ಆಭರಣ ಅಂಗಡಿ ಮತ್ತು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ.

ಕಳ್ಳತನಕ್ಕೂ ಮುನ್ನ ಅಂಗಡಿಯ ಮೇಲೆ ಈ ತಂಡ ಕಣ್ಗಾವಲು ಇಟ್ಟಿದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಈ ಘಟನೆಯು ಆಭರಣ ವ್ಯಾಪಾರಿಗಳಲ್ಲಿ, ವಿಶೇಷವಾಗಿ ನಿಜವಾದ ಗ್ರಾಹಕರ ಸೋಗಿನಲ್ಲಿ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಳನ್ನು ಬಳಸುವ ಗ್ಯಾಂಗ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com