ಬಂಧಿತರು ಉಗ್ರರಲ್ಲ, CJP ಪ್ರತಿಭಟನಾಕಾರರು ಎಂದ ISI ಏಜೆಂಟ್; ಭಾರತದಲ್ಲಿ ಇನ್ನೂ 3000 ಸಹಚರರಿದ್ದಾರೆ ಎಂದು ಸವಾಲು ಹಾಕಿದ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ

ಭದ್ರತಾ ಪಡೆಗಳು ದೇಶಾದ್ಯಂತ ನಡೆಸಿದ ಕಾರ್ಯಾಚರಣೆಯ ಬೆನ್ನಲ್ಲೇ, ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಬಿಡುಗಡೆ ಮಾಡಿರುವ ವಿಡಿಯೋ ಸಂಚಲನ ಮೂಡಿಸಿದೆ. ಭಾರತದಲ್ಲಿ ಅರೆಸ್ಟ್ ಆಗಿರುವವರು ತನ್ನ ಸಹಚರರಲ್ಲ ಎಂದು ವಾದಿಸಿರುವ ಆತ, ಇನ್ನೂ ಸಾವಿರಾರು ಜನರು ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ಸವಾಲು ಹಾಕಿದ್ದಾನೆ.
Union Home Minister Amit Shah - Pakistan Gangster Shahzad Bhatti
ಕೇಂದ್ರ ಗೃಹ ಸಚಿವ ಅಮಿತ್ ಶಾ – ಪಾಕಿಸ್ತಾನಿ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿOnline Desk
Updated on

ನವದೆಹಲಿ: ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ, ಐಎಸ್‌ಐ ಬೆಂಬಲಿತ ಶಾಹಜಾದ್ ಭಟ್ಟಿ ಭಯೋತ್ಪಾದನಾ ಜಾಲವನ್ನು ಭಾರತೀಯ ಭದ್ರತಾ ಪಡೆಗಳು ಯಶಸ್ವಿಯಾಗಿ ಧ್ವಂಸಗೊಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ 14 ರಾಜ್ಯಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ, ಶಾಹಜಾದ್ ಭಟ್ಟಿ ನೆಟ್‌ವರ್ಕ್‌ಗೆ ಸೇರಿದ ಒಟ್ಟು 253 ಆಪರೇಟಿವ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ವಿವಿಧ ಕಾಯ್ದೆಗಳಡಿ 80 ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದರು. ಇದರ ನಡುವೆಯೇ, ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಉಗ್ರ ಶಾಹಜಾದ್ ಭಟ್ಟಿ, ಅವರು ನನ್ನವರಲ್ಲ, ಎಲ್ಲರು ಸಿಜೆಪಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ನೇರ ಸವಾಲು ಹಾಕಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ಶಾಹಜಾದ್ ಭಟ್ಟಿ ವಿಡಿಯೋದಲ್ಲಿ ಏನಿದೆ?

ಭಾರತ ಸರ್ಕಾರ ತನ್ನ ಇಡೀ ಜಾಲವನ್ನು ನಾಶಪಡಿಸಿದೆ ಎಂದು ಘೋಷಿಸಿದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಶಾಹಜಾದ್ ಭಟ್ಟಿ, ಭಾರತದ ವಿವಿಧ ರಾಜ್ಯಗಳಲ್ಲಿ ಬಂಧನಕ್ಕೊಳಗಾಗಿರುವ 200ಕ್ಕೂ ಹೆಚ್ಚು ವ್ಯಕ್ತಿಗಳು ತನ್ನ ನೆಟ್‌ವರ್ಕ್‌ಗೆ ಸೇರಿದವರಲ್ಲ ಎಂದು ಭಟ್ಟಿ ವಾದಿಸಿದ್ದಾನೆ. ಜೊತೆಗೆ, ಬಂಧಿತ ವ್ಯಕ್ತಿಗಳಿಗೆ ಪಾಕಿಸ್ತಾನಿ ಜಾಲದೊಂದಿಗೆ ಸಂಬಂಧವಿಲ್ಲ, ಬದಲಿಗೆ ಅವರು ಸಿಜೆಪಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ.

ಮುಂದುವರೆದು, ತನ್ನ ಜಾಲದ ಸುಮಾರು 3,000 ಕ್ಕೂ ಹೆಚ್ಚು ಸಹಚರರು ಮತ್ತು ಆಪರೇಟಿವ್‌ಗಳು ಇಂದಿಗೂ ಭಾರತದಲ್ಲಿ ತಲೆಮರೆಸಿಕೊಂಡಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಆತ ವಿಡಿಯೋದಲ್ಲಿ ಪ್ರತಿಪಾದಿಸಿದ್ದಾನೆ. ಇದರೊಂದಿಗೆ, ಭಾರತೀಯ ಸಂಸ್ಥೆಗಳು ಕೇವಲ ಸುಳ್ಳು ಹಕ್ಕುಗಳನ್ನು ಮಾಡುತ್ತಿವೆ ಎಂದು ಆರೋಪಿಸಿರುವ ಭಟ್ಟಿ, ಬಂಧಿತರ ಸತ್ಯಾಸತ್ಯತೆ ಮತ್ತು ಅವರ ಬಳಿ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪುರಾವೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಭಾರತಕ್ಕೆ ಸವಾಲು ಹಾಕಿದ್ದಾನೆ. ಇದರೊಂದಿಗೆ, ಜಂತರ್ ಮಂತರ್ ಪ್ರತಿಭಟನೆಗಳಿಗೆ ಸಂಬಂಧಿಸಿದ ಕೆಲವು ಆರೋಪಗಳು ಹಾಗೂ ಸಾಮಾಜಿಕ ಮಾಧ್ಯಮ ಜಾಲಗಳ ತನಿಖೆಯ ದಿಕ್ಕಿನ ಬಗ್ಗೆಯೂ ಆತ ತನ್ನ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾನೆ.

Union Home Minister Amit Shah - Pakistan Gangster Shahzad Bhatti
ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ, ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ 14 ರಾಜ್ಯಗಳ ಹಲವು ಸ್ಥಳಗಳಲ್ಲಿ ಏಕಕಾಲಕ್ಕೆ ಭದ್ರತಾ ಪಡೆಗಳು ದಾಳಿ ನಡೆಸಿದ್ದವು. ಇನ್ನು, ಈ ಬೃಹತ್ ಕಾರ್ಯಾಚರಣೆಯಲ್ಲಿ ಶಾಹಜಾದ್ ಭಟ್ಟಿ ನೆಟ್‌ವರ್ಕ್‌ಗೆ ಸೇರಿದ ಒಟ್ಟು 253 ಆಪರೇಟಿವ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ವಿವಿಧ ಕಾಯ್ದೆಗಳಡಿ 80 ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸಲಾಗಿದೆ. ಜೊತೆಗೆ, ಬಂಧಿತರಿಂದ ಐಇಡಿ ಸುಧಾರಿತ ಸ್ಫೋಟಕಗಳು, ಪಾಕಿಸ್ತಾನ ಆರ್ಡಿನೆನ್ಸ್ ಫ್ಯಾಕ್ಟರಿ ಮುದ್ರೆ ಹೊಂದಿರುವ ಗ್ರೆನೇಡ್‌ಗಳು, ಪಿಸ್ತೂಲ್‌ಗಳು, ಜೀವಂತ ಗುಂಡುಗಳು ಮತ್ತು ಭಾರತದ ಪ್ರಮುಖ ರಕ್ಷಣಾ ಹಾಗೂ ಧಾರ್ಮಿಕ ಸ್ಥಳಗಳ ಮೇಲೆ ಕಣ್ಗಾವಲು ಇಡಲು ಬಳಸುತ್ತಿದ್ದ ಸಿಸಿಟಿವಿ ಕೆಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ.

Union Home Minister Amit Shah - Pakistan Gangster Shahzad Bhatti
ಜಂತರ್ ಮಂತರ್ ಪ್ರತಿಭಟನೆ ವೇಳೆ ಉಗ್ರ ದಾಳಿಗೆ ಪಾಕ್ ಪ್ರಯತ್ನ: ISI ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್‌ ಭೇದಿಸಿ ಪಂಜಾಬ್ ಪೊಲೀಸ್! Video

ಯಾರು ಈ ಶಾಹಜಾದ್ ಭಟ್ಟಿ? ಆತನ ಹೊಸ ಟೆರರ್ ತಂತ್ರವೇನು?

ಶಾಹಜಾದ್ ಭಟ್ಟಿ ಮೂಲತಃ ಪಾಕಿಸ್ತಾನದ ಗ್ಯಾಂಗ್‌ಸ್ಟರ್ ಆಗಿದ್ದು, ಪ್ರಸ್ತುತ ಐಎಸ್‌ಐ ಬೆಂಬಲದೊಂದಿಗೆ ಭಾರತದ ವಿರುದ್ಧ ಉಗ್ರ ಹ್ಯಾಂಡ್ಲರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನ ಕಾರ್ಯಾಚರಣೆಯ ಶೈಲಿ ಸಾಂಪ್ರದಾಯಿಕ ಉಗ್ರರಿಗಿಂತ ಭಿನ್ನವಾಗಿದೆ. ಅದರಂತೆ, ಭಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ (ಇನ್‌ಸ್ಟಾಗ್ರಾಮ್, ಫೇಸ್‌ಬುಕ್) ಪಂಜಾಬಿ ಹಾಡುಗಳು ಮತ್ತು ಬಾಲಿವುಡ್ ಸಂಭಾಷಣೆಗಳನ್ನು ಬಳಸಿ ಜನಪ್ರಿಯ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾನೆ. ಇದರ ಮೂಲಕ ಭಾರತದಲ್ಲಿರುವ ನಿರುದ್ಯೋಗಿ, ಹತಾಶೆಗೊಂಡ ಅಥವಾ ಮಾದಕ ವ್ಯಸನಕ್ಕೆ ಒಳಗಾದ ಯುವಕರನ್ನು ಟಾರ್ಗೆಟ್ ಮಾಡುತ್ತಾನೆ. ಈ ಯುವಕರನ್ನು ಬ್ರೈನ್ ವಾಶ್ ಮಾಡಿದ ನಂತರ ಅವರಿಗೆ ಡಿಜಿಟಲ್ ರೂಪದಲ್ಲಿ ಹಣ ವರ್ಗಾವಣೆ ಮಾಡಲಾಗುತ್ತದೆ. ಆರಂಭದಲ್ಲಿ ಅವರಿಗೆ ಸಣ್ಣ ಕೆಲಸಗಳನ್ನು ನೀಡಲಾಗುತ್ತದೆ. ಉದಾಹರಣೆಗೆ - ಪೊಲೀಸ್ ಠಾಣೆಗಳು, ಧಾರ್ಮಿಕ ಸ್ಥಳಗಳು ಅಥವಾ ಮಿಲಿಟರಿ ನೆಲೆಗಳ ಸುತ್ತಮುತ್ತ 'ರೇಖಿ' (ಮಾಹಿತಿ ಸಂಗ್ರಹ) ಮಾಡುವುದು, ರಹಸ್ಯವಾಗಿ ಸಿಸಿಟಿವಿ ಕೆಮೆರಾಗಳನ್ನು ಅಳವಡಿಸುವುದು ಅಥವಾ ಪಾಕಿಸ್ತಾನದಿಂದ ಡ್ರೋನ್ ಮೂಲಕ ಬರುವ ಶಸ್ತ್ರಾಸ್ತ್ರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದು.

ಏತನ್ಮಧ್ಯೆ,  ಈ ಜಾಲವು ಈ ಹಿಂದೆ ಪಂಜಾಬ್‌ನ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರೋಹನ್ ಸಂಧು ಅವರ ಮನೆ ಮೇಲಿನ ಗ್ರೆನೇಡ್ ದಾಳಿ ಮತ್ತು ಹರಿಯಾಣದ ಮಹಿಳಾ ಪೊಲೀಸ್ ಠಾಣೆ ಮೇಲಿನ ಬಾಂಬ್ ದಾಳಿಯಲ್ಲೂ ಭಾಗಿಯಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ ಈಗಾಗಲೇ ಈತನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿದೆ.

Union Home Minister Amit Shah - Pakistan Gangster Shahzad Bhatti
ದೆಹಲಿ ವಿಮಾನ ನಿಲ್ದಾಣದಲ್ಲಿ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಅಖ್ತರ್ ಮರ್ಚೆಂಟ್‌ ಬಂಧನ; 3 ವರ್ಷಗಳ ಬಳಿಕ ಸಿಕ್ಕಬಿದ್ದ ಆರೋಪಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com