ನೇಪಾಳ ಪ್ರವಾಹ: ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ ಸೊಸೆ ನಾಪತ್ತೆ!

ಕಣ್ಮರೆಯಾಗಿರುವವರಲ್ಲಿ 300 ಕ್ಕೂ ಅಧಿಕ ಜನ ಭಾರತೀಯರಿದ್ದು, ಅವರಲ್ಲಿ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್​ ರಾಯ್​ ಅವರ ಸೊಸೆ ಹಾಗೂ ತೃಣಮೂಲ ಕಾಂಗ್ರೆಸ್​ನ ಮಾಜಿ ಮಂತ್ರಿ ಸುಭ್ರಂಶು ಅವರ ಪತ್ನಿ ಶರ್ಮಿಷ್ಠ ಭೌಮಿಕ್ ರಾಯ್ ಕೂಡ ಸೇರಿದ್ದಾರೆ ಎಂದುತಿಳಿದು ಬಂದಿದೆ.
Sarmistha Bhowmik Roy
ಶರ್ಮಿಷ್ಟಾ ರಾಯ್
Updated on

ನವದೆಹಲಿ: ನೇಪಾಳ ಮತ್ತು ಟಿಬೆಟ್​ ಗಡಿಯಲ್ಲಿ ಭಾರಿ ಜಲಪ್ರಳಯ ಸಂಭವಿಸಿದ್ದು, ಈಗಾಗಲೇ ಸತ್ತವರ ಸಂಖ್ಯೆ 400 ರ ಗಡಿಯನ್ನು ದಾಡಿಟ್ಟು, ಸಾವಿರಾರು ಜನ ಕಣ್ಮರೆಯಾಗಿದ್ದಾರೆಂದು ವರದಿಯಾಗಿದೆ.

ಕಣ್ಮರೆಯಾಗಿರುವವರಲ್ಲಿ 300 ಕ್ಕೂ ಅಧಿಕ ಜನ ಭಾರತೀಯರಿದ್ದು, ಅವರಲ್ಲಿ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್​ ರಾಯ್​ ಅವರ ಸೊಸೆ ಹಾಗೂ ತೃಣಮೂಲ ಕಾಂಗ್ರೆಸ್​ನ ಮಾಜಿ ಮಂತ್ರಿ ಸುಭ್ರಂಶು ಅವರ ಪತ್ನಿ ಶರ್ಮಿಷ್ಠ ಭೌಮಿಕ್ ರಾಯ್ ಕೂಡ ಸೇರಿದ್ದಾರೆ ಎಂದುತಿಳಿದು ಬಂದಿದೆ.

ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ಸೊಸೆ, ಟಿಎಂಸಿ ಮಾಜಿ ಶಾಸಕ ಸುಬ್ರಾಂಶು ರಾಯ್ ಪತ್ನಿ ಶರ್ಮಿಷ್ಠ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ, ಶರ್ಮಿಷ್ಠ ರಾಯ್ ಇತರೆ 32 ಜನರೊಂದಿಗೆ ನೇಪಾಳದಲ್ಲಿರುವ ಕೈಲಾಸ ಪರ್ವತ, ಮಾನಸ ಸರೋವರವನ್ನು ನೋಡಲು ಕೊಲ್ಕತಾದ ಟ್ರಾವೆಲ್​ ಏಜೆಂನ್ಸಿ ಜೊತೆ ಹೋಗಿದ್ದಾಗಿ ತಿಳಿದು ಬಂದಿದೆ.

ಆಗಸ್ಟ್​​ 21 ರಂದು ಈ ಗುಂಪು ನೇಪಾಳವನ್ನು ತಲುಪಿದೆ. ಆದರೆ ಆಗಸ್ಟ್​ 25 ರಂದು ಪ್ರಳಯ ಸಂಭವಿಸಿದ್ದು, ಆ ದಿನದಿಂದ ಶರ್ಮಿಷ್ಠ ರಾಯ್​, ಮನೆಯವರೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Sarmistha Bhowmik Roy
ನೇಪಾಳ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರು ಸೇಫ್‌; ‘ಧೈರ್ಯವಾಗಿರಿ, ಸರ್ಕಾರ ನಿಮ್ಮೊಂದಿಗಿದೆ’ ಎಂದ ಸಿಎಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com