

ನವದೆಹಲಿ: ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ ಬಳಿಕ ಕಣ್ಣೀರಿಟ್ಟು ಕ್ಷಮೆ ಕೋರಿದ್ದ ಹದಿಹರೆಯದ ರುಚಿಕಾ ಸಿಂಗ್(ಹೆಸರು ಬದಲಾಯಿಸಲಾಗಿದೆ) ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
15 ವರ್ಷದ ರುಚಿಕಾ ಸಿಂಗ್ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾಳೆ.
"ಮೋದಿ ಜಿ, ನೀವು ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದೀರಿ" ಎಂದು ವಿಡಿಯೋದಲ್ಲಿ ಹೇಳಿದ್ದು, "ನೀವು 15 ವರ್ಷದ ಬಾಲಕಿಯನ್ನು ತುಂಬಾ ಕಾಡಿದ್ದೀರಿ, ನನಗೆ ಎಲ್ಲಾ ಕಡೆ ಈಗ ಚಿತ್ರಹಿಂಸೆ ನೀಡಲಾಗುತ್ತಿದೆ. ನಾನು ಸ್ವತಂತ್ರವಾಗಿ ಎಲ್ಲಿಯೂ ಓಡಾಡಲು ಆಗುತ್ತಿಲ್ಲ. ನಾನು ಮುಖ ಮುಚ್ಚಿಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ" ಎಂದು ಆರೋಪಿಸಿದ್ದಾಳೆ.
ನಾನು "ಕಳೆದುಕೊಳ್ಳಲು ಏನೂ ಇಲ್ಲ" ಮತ್ತು ಈ ಬಾರಿ ತಾನು ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಪ್ರಧಾನಿ ಮೋದಿಯವರನ್ನು "ಹೇಡಿ" ಎಂದು ಟೀಕಿಸಿದ್ದಾರೆ.
ರುಚಿಕಾ ಸಿಂಗ್ ವಿಡಿಯೋ ಹಂಚಿಕೊಂಡ ಕಾಂಗ್ರೆಸ್
ಇನ್ನು ಕಾಂಗ್ರೆಸ್ ರುಚಿಕಾ ಸಿಂಗ್ ಅವರ ಹೊಸ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, "ಮೋದಿ ಜೀ, ನೀವು ನನ್ನ ಜೀವನವನ್ನು ನರಕವನ್ನಾಗಿಸಿದ್ದೀರಿ.. ಹೀಗೆ ಹೇಳಿದವಳು 15 ವರ್ಷದ ರುಚಿಕಾ. ಈಕೆಯನ್ನು ಗೂಂಡಾಗಳ ಮೂಲಕ ಬೆದರಿಸಿ ಕ್ಷಮೆ ಕೇಳುವಂತೆ ಮೋದಿ ಒತ್ತಾಯಿಸಿದ್ದರು. ನರೇಂದ್ರ ಮೋದಿ ನನ್ನನ್ನು ಎಷ್ಟು ಹಿಂಸಿಸಿದ್ದಾರೆಂದರೆ, ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಈಗ ಕಳೆದುಕೊಳ್ಳಲು ನನ್ನ ಬಳಿ ಏನೂ ಉಳಿದಿಲ್ಲ ಎಂದು ರುಚಿಕಾ ಸಿಂಗ್ ಅಲವತ್ತುಕೊಂಡಿದ್ದಾಳೆ" ಎಂದು ವಾಗ್ದಾಳಿ ನಡೆಸಿದೆ.