

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9 ಬಾರಿ ಕೇಂದ್ರ ಬಜೆಟ್ ಮಂಡಿಸಿದಾಗ ಅವರು ಉಟ್ಟ ಸೀರೆ ಯಾವುದು, ಅದರ ಬಣ್ಣ, ವಿಶೇಷತೆ ಬಗ್ಗೆ ಚರ್ಚೆಯಾಗುತ್ತದೆ.
ಈ ವರ್ಷ ಅವರು ಕಾಂಚೀವರಂ ಸೀರೆ ಉಟ್ಟಿದ್ದಾರೆ, ಈ ಸೀರೆಯನ್ನೇ ಉಡಲು ಕಾರಣವೇನು ಎಂದು ವಿಶ್ಲೇಷಿಸಿದಾಗ ಈ ವರ್ಷ, ತಮಿಳುನಾಡು ವಿಧಾನಸಭೆ ಚುನಾವಣೆ ಇದೆ. ಹೀಗಾಗಿ ದಕ್ಷಿಣ ಭಾರತದ ಪ್ರಸಿದ್ಧ ಜಾತಿಯ ಸೀರೆಗೆ ಒತ್ತು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಮಿಳು ನಾಡಿನ ಮೆಜೆಂಟಾ-ಮರೂನ್ ಕಾಂಚೀಪುರಂ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿದ್ದು, ಇದು ಬಾಳಿಕೆ ಮತ್ತು ಭವ್ಯತೆಗೆ ಹೆಸರುವಾಸಿಯಾದ ನೇಯ್ಗೆಯಾಗಿದೆ.
ಸೀರೆಯು ಸಾಸಿವೆ ಹಳದಿ ಬಣ್ಣದಲ್ಲಿ ಸಾಂಪ್ರದಾಯಿಕ ಕಟ್ಟಮ್ ಚೆಕ್‌ಗಳನ್ನು ಒಳಗೊಂಡಿದೆ. ಸಂಕೀರ್ಣವಾದ ದಾರದ ಕೆಲಸವಾಗಿದ್ದು, ಕಾಫಿ-ಕಂದು ಬಾರ್ಡರ್ ನೊಂದಿಗೆ ಜೋಡಿಸಲ್ಪಟ್ಟಿದೆ. ಅನೇಕರು ಈ ಆಯ್ಕೆಯನ್ನು ತಮಿಳುನಾಡಿನ ಶತಮಾನಗಳಷ್ಟು ಹಳೆಯದಾದ ನೇಯ್ಗೆ ಶ್ರೇಷ್ಠತೆಗೆ ಸಂದ ಗೌರವ ಎಂದರೆ ಚುನಾವಣೆಗೆ ಸನ್ನಿಹಿತವಾದ ರಾಜ್ಯವನ್ನು ಕೂಡ ಗಮನದಲ್ಲಿಟ್ಟುಕೊಂಡು ಉಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
2025 ರಲ್ಲಿ, ಬಿಹಾರ ಚುನಾವಣೆ ಇದ್ದಾಗ, ನಿರ್ಮಲಾ ಸೀತಾರಾಮನ್ ಕೈಯಿಂದ ಚಿತ್ರಿಸಿದ ಮಧುಬನಿ ಕಲೆಯಿಂದ ಅಲಂಕರಿಸಲ್ಪಟ್ಟ ಆಫ್-ವೈಟ್ ಕೈಮಗ್ಗ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಆ ಸೀರೆಯ ಮೇಲೆ ಹೇರಳತೆ ಮತ್ತು ಸಮೃದ್ಧಿಯ ಸಂಕೇತಗಳಾಗಿರುವ ಮೀನಿನ ವಿಶಿಷ್ಟ ಲಕ್ಷಣಗಳು ಮಿಥಿಲಾ ಪ್ರದೇಶದ ಜಾನಪದ ಕಲೆಗೆ ರಾಷ್ಟ್ರೀಯ ಗಮನ ಸೆಳೆದವು. ಇದನ್ನು ಬಿಹಾರದ ಸಾಂಸ್ಕೃತಿಕ ಮನ್ನಣೆ ಎಂದು ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದೆ.
ಭಾರತದ ಮಗ್ಗಗಳಿಗೆ ಹಿಂದಿನಲೂ ನಿರ್ಮಲಾ ಸೀತಾರಾಮನ್ ಆಯ್ಕೆಮಾಡಿಕೊಳ್ಳುತ್ತಾ ಅದಕ್ಕೆ ತಕ್ಕಂತೆ ಸೀರೆ ಉಡುತ್ತಿದ್ದಾರೆ.
2024 ರಲ್ಲಿ, ಅವರು ಪಶ್ಚಿಮ ಬಂಗಾಳದ ಕಾಂತ ಕಸೂತಿಯೊಂದಿಗೆ ನೀಲಿ ಟಸ್ಸರ್ ರೇಷ್ಮೆ ಸೀರೆಯನ್ನು ಆರಿಸಿಕೊಂಡರು.
2023 ರಲ್ಲಿ, ಕಪ್ಪು ಮತ್ತು ಚಿನ್ನದ ದೇವಾಲಯದ ಬಾರ್ಡರ್ ಹೊಂದಿರುವ ಪ್ರಕಾಶಮಾನವಾದ ಕೆಂಪು ರೇಷ್ಮೆ ಸೀರೆಯನ್ನು ಉಟ್ಟಿದ್ದರು. ಇದು ಕರ್ನಾಟಕದ 'ಕಸೂತಿ'ಯನ್ನು ಒಳಗೊಂಡಿತ್ತು. 2023ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಿತ್ತು.
2022 ರಲ್ಲಿ ಒಡಿಶಾದ ತುಕ್ಕು-ಕಂದು ಮತ್ತು ಮರೂನ್ ಬೊಮ್ಕೈ ಸೀರೆಯನ್ನು ಉಟ್ಟಿದ್ದರು. ಇದು ಗಂಜಾಂನ ಬುಡಕಟ್ಟು ವಿಶಿಷ್ಟ ಲಕ್ಷಣಗಳಿಂದ ಸಮೃದ್ಧವಾಗಿದೆ.
2021 ರಲ್ಲಿ, ಅವರು ತೆಲಂಗಾಣದ ಕೆಂಪು ಮತ್ತು ಬಿಳಿ ಪೋಚಂಪಲ್ಲಿ ಇಕಾಟ್ ನ್ನು ಆರಿಸಿಕೊಂಡಿದ್ದರು, ಇದು ರೇಷ್ಮೆ ನಗರದ ಗುರುತನ್ನು ಪ್ರತಿಬಿಂಬಿಸುವ ದಿಟ್ಟ ಜ್ಯಾಮಿತಿಯಾಗಿದೆ.
2020 ರ ಕೋವಿಡ್ -19 ಸಾಂಕ್ರಾಮಿಕ ರೋಗ ಮಧ್ಯೆ, ನಿರ್ಮಲಾ ಸೀತಾರಾಮನ್ ನೀಲಿ ಬಾರ್ಡರ್ ಹೊಂದಿರುವ ಹಳದಿ-ಚಿನ್ನದ ರೇಷ್ಮೆ ಸೀರೆಯನ್ನು ಧರಿಸಿದ್ದರು, ಇದನ್ನು ಭರವಸೆ ಮತ್ತು ನವೀಕರಣದ ಸಂಕೇತವೆಂದು ಪರಿಗಣಿಸಲಾಗಿದೆ.
2019 ರಲ್ಲಿ, ಮೊದಲ ಬಜೆಟ್ ಗುಲಾಬಿ ಮಂಗಳಗಿರಿ ರೇಷ್ಮೆ ಸೀರೆ ಧರಿಸಿ, ವಸಾಹತುಶಾಹಿ ಸಂಪ್ರದಾಯದಿಂದ ಬಜೆಟ್ ನ್ನು ಬ್ರೀಫ್‌ಕೇಸ್ ಬದಲು ಕೆಂಪು ಬಟ್ಟೆಯಿಂದ ಸುತ್ತಿದ ಬಹಿ-ಖಾಟಾದಲ್ಲಿ ತೆಗೆದುಕೊಂಡು ಸಂಸತ್ತಿನಲ್ಲಿ ಓದಿದ್ದರು.
Advertisement