Union Budget 2026: ನಿರ್ಮಲಾ ಸೀತಾರಾಮನ್ ಈ ಬಾರಿ ಬಜೆಟ್ ಮಂಡನೆಗೆ ಧರಿಸಿದ್ದು ಕೆನ್ನೇರಳೆ ಬಣ್ಣದ ರೇಷ್ಮೆ ಸೀರೆ! ಏನಿದರ ವಿಶೇಷತೆ?

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೀರೆ ಹಲವರ ಗಮನ ಸೆಳೆಯುತ್ತಿದೆ.
Nirmala sitharaman
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೀರೆ ಹಲವರ ಗಮನ ಸೆಳೆಯುತ್ತಿದೆ.

ಕಂದು ಬಣ್ಣದ ಅಂಚು ಹೊಂದಿರುವ ಕೆನ್ನೇರಳೆ ಬಣ್ಣ ಸೀರೆ ಉಟ್ಟು ಬಂದಿರುವ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ ಭವನದತ್ತ ತೆರಳಿದ್ದಾರೆ.

ಈ ಸೀರೆಯು ಗಾಢವಾದ ಕೆನ್ನೇರಳೆ ಬಣ್ಣದಲ್ಲಿದ್ದು, ಅದಕ್ಕೆ ಚಿನ್ನದ ಬಣ್ಣ (Gold) ಮತ್ತು ಕಂದು ಬಣ್ಣದ ಅಂಚುಗಳಿವೆ (Border). ಸೆರಗಿನ ಭಾಗದಲ್ಲಿ ಸಾಂಪ್ರದಾಯಿಕ ಕಾಫಿ ಬಣ್ಣ ಹಾಗೂ ಚಿನ್ನದ ಗೆರೆಗಳ ಪಟ್ಟಿಯಿದೆ. ಈ ಸೀರೆ ಕಾಂಜೀವರಂ ರೇಷ್ಮೆ ಸೀರೆಯಾಗಿದ್ದು, ಇದನ್ನು ತಮಿಳಿನಲ್ಲಿ `ಕಟ್ಟುಂ’ ಎಂದು ಕರೆಯಲಾಗುತ್ತದೆ.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಭಾರತದ ಸಾಂಪ್ರದಾಯಿಕ ಕೈಮಗ್ಗ (Handloom) ನೇಕಾರಿಕೆಯನ್ನು ಪ್ರೋತ್ಸಾಹಿಸಲು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕೆನ್ನೇರಳೆ ಬಣ್ಣವು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತದೆ. ಇದು ಭಾರತದ ಆರ್ಥಿಕತೆಯ ಬಲವಾದ ಬೆಳವಣಿಗೆಯನ್ನು ಬಿಂಬಿಸುವ ಉದ್ದೇಶವನ್ನು ಹೊಂದಿದೆ ಎನ್ನಲಾಗುತ್ತಿದೆ.

ಪ್ರತಿ ಬಾರಿಯೂ ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಅವರು ಧರಿಸುವ ಸೀರೆ ಟ್ರೆಂಡ್ ಆಗುತ್ತದೆ. ವಿಭಿನ್ನ ಸೀರೆಗಳನ್ನು ಉಟ್ಟುಕೊಂಡು ಬರುವ ಮೂಲಕ ನಿರ್ಮಲಾ ಅವರು ದೇಶದ ಜನತೆಯ ಗಮನ ಸೆಳೆಯುತ್ತಾರೆ.

Nirmala sitharaman
ಕೇಂದ್ರ ಬಜೆಟ್ 2026: ಸತತ 9ನೇ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ; ಅಪಾರ ನಿರೀಕ್ಷೆ

2019ರ ಬಜೆಟ್ ಮಂಡನೆ ವೇಳೆ ಗೋಲ್ಡನ್ ಬಾರ್ಡರ್ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯುಟ್ಟು ಮಿಂಚಿದ್ದರು. 2020ರಲ್ಲಿ ಹಳದಿ ಹಾಗೂ ನೀಲಿ ಮಿಶ್ರಿತ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯಲ್ಲಿ ಮತ್ತು 2022ರಲ್ಲಿ ಕಂದು ಬಣ್ಣದ ಕೈಮಗ್ಗ ಸೀರೆ ಧರಿಸಿದ್ದರು. 2023ರ ಲ್ಲಿ ಕಪ್ಪು ಬಣ್ಣದ ಬಾರ್ಡರ್ ಇರುವ ಕೆಂಪು ಬಣ್ಣದ ಇಳಕಲ್ ಸೀರೆ (ಕರ್ನಾಟಕದ ಕಸೂತಿ ಕಲೆ) ಧರಿಸಿದ್ದರು. 2024 (ಮಧ್ಯಂತರ ಬಜೆಟ್)ರಲ್ಲಿ ನೀಲಿ ಬಣ್ಣದ ತುಸ್ಸಾರ್ ಸಿಲ್ಕ್ (ಪಶ್ಚಿಮ ಬಂಗಾಳದ ಕಾಂತಾ ಎಂಬ್ರಾಯ್ಡರಿ) ಸೀರೆ ಧರಿಸಿದ್ದರು. 2024 (ಪೂರ್ಣ ಬಜೆಟ್)ರಲ್ಲಿ ಆಫ್-ವೈಟ್ ಬಣ್ಣದ ಮಂಗಳಗಿರಿ ಸೀರೆ (ಆಂಧ್ರಪ್ರದೇಶ) ಧರಿಸಿದ್ದರು. 2025ರಲ್ಲಿ ಬಿಳಿಯ ಬಣ್ಣದ ಮಧುಬನಿ ಸಿಲ್ಕ್ (ಬಿಹಾರದ ಕಲೆ) ಸೀರೆ ಧರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com